
ಬೆಳಗಾವಿ ಮೂಲಕ ರಮೇಶ್ ಪರವಿನಾಯ್ಕರ್ ನಟನೆ, ನಿರ್ದೇಶನ, ನಿರ್ಮಾಣದ ‘ನಮೋ ಭಾರತ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ಅವರ ಮಾತುಗಳು ಇಲ್ಲಿವೆ-
- ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಜನರಿಗೆ ತಲುಪಿಸಲು ‘ಗಾಂಧೀಜಿ ಕನಸು’ ಸಿನಿಮಾ ಮಾಡಿದ್ದೆ. ಇದೀಗ ಸೈನಿಕನ ಕಷ್ಟಗಳು, ಗ್ರಾಮೀಣ ಪ್ರದೇಶದ ತೊಂದರೆಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಲು ಈ ಸಿನಿಮಾ ಮಾಡಿದ್ದೇನೆ.
- ರೈತನ ಮಗನೊಬ್ಬ ಸೈನಿಕನಾಗಿ ಕಾಶ್ಮೀರಕ್ಕೆ ಹೋಗುವ ಕತೆ ಹೊಂದಿರುವ ಸಿನಿಮಾ ಇದು. ಮೊದಲಾರ್ಧದಲ್ಲಿ ಕಾಶ್ಮೀರದ ಸ್ಥಿತಿಗತಿ ಬಗ್ಗೆ ತೋರಿಸಲಾಗುತ್ತದೆ. ದ್ವಿತೀಯಾರ್ಧದಲ್ಲಿ ಉತ್ತರ ಕರ್ನಾಟಕದ ಹಳ್ಳಿಯ ತಾಪತ್ರಯಗಳನ್ನು ಹೇಳಿದ್ದೇನೆ. ಜನ ನೋಡಿ ಮೆಚ್ಚುತ್ತಾರೆಂಬ ನಂಬಿಕೆ ಇದೆ.
ಆ ಸಿನಿಮಾ ಶೂಟಿಂಗ್ ಅಷ್ಟೂ ದಿನ ಅತ್ತುಕೊಂಡೇ ಹೋಗಿದ್ದೆ ಅಷ್ಟು ನೋಯಿಸಿದ್ದಾರೆ: ಸಂಯುಕ್ತ ಹೆಗ್ಡೆ
- ಎಲ್ಲವನ್ನೂ ಕಮರ್ಷಿಯಲ್ ಸಿನಿಮಾ ರೀತಿಯಲ್ಲಿ ತೋರಿಸಿದ್ದೇನೆ. ಒಟ್ಟಾರೆ ಇದೊಂದು ದೇಶಭಕ್ತಿ ಸಾರುವ ಸಿನಿಮಾ.
- ಈ ಹಿಂದೆ ಧಾರವಾಡ ರಂಗಾಯಣದ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ. ಆರ್‌ಎಸ್‌ಎಸ್ ಕಾರ್ಯಕರ್ತನಾಗಿ ದುಡಿದಿದ್ದೇನೆ. ಈ ಸಿನಿಮಾ ಮೂಲಕ ಜನರ ಮುಂದೆ ಬಂದಿದ್ದೇನೆ. ಸಿನಿಮಾದಲ್ಲಿ ದೊಡ್ಡರಂಗೇಗೌಡ, ಸೋನಾಲಿ ಪಂಡಿತ್, ಸುಷ್ಮಾ ರಾಜ್, ಭವ್ಯಾ, ಮೈಕೋ ನಾಗರಾಜ್, ಬಿರಾದಾರ್, ಶಂಕರ್ ಭಟ್, ಮಾಸ್ಟರ್ ಯುವರಾಜ್ ಪರವಿನಾಯ್ಕರ್ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.