ಡಾಲಿ ಧನಂಜಯ್ ಲವ್ ಮ್ಯಾಟ್ರು ಸೀಕ್ರೆಟ್‌ ಆಗಿಟ್ಟಿದ್ರಾ?; ಗೆಳೆಯ ನವೀನ್ ಶಂಕರ್ ಹೇಳಿಕೆ ವೈರಲ್

Published : Nov 07, 2024, 06:51 PM IST
ಡಾಲಿ ಧನಂಜಯ್ ಲವ್ ಮ್ಯಾಟ್ರು ಸೀಕ್ರೆಟ್‌ ಆಗಿಟ್ಟಿದ್ರಾ?; ಗೆಳೆಯ ನವೀನ್ ಶಂಕರ್ ಹೇಳಿಕೆ ವೈರಲ್

ಸಾರಾಂಶ

ಡಾಲಿ ಮನೆಯಲ್ಲಿ ಮದುವೆ ಸಂಭ್ರಮ. ಗೆಳೆಯನ ಮದುವೆ ಬಗ್ಗೆ ನವೀನ್ ಶಂಕರ್ ಹೇಳಿಕೆ ವೈರಲ್.......

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಜೀವನದಲ್ಲಿ ಸಂಭ್ರಮ ಮನೆ ಮಾಡಿದೆ. ಡಾಲಿ ಆ ಹುಡುಗಿಯನ್ನು ಲವ್ ಮಾಡುತ್ತಿದ್ದಾರೆ ಈ ಹುಡುಗಿ ಜೊತೆ ಓಡಾಡುತ್ತಿದ್ದಾರೆ ಬ್ರೇಕಪ್ ಮಾಡಿಕೊಂಡಿದ್ದಾರೆ ಅನ್ನೋ ಗಾಸಿಪ್‌ಗಳ ನಡುವೆ ಫೋಟೋಶೂಟ್ ಮೂಲಕ ತಮ್ಮ ಹುಡುಗಿಯನ್ನು ಜನರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. 2024 ನವೆಂಬರ್ ದೀಪಾವಳಿ ಹಬ್ಬದ ದಿನ ಡಾಲಿ ಧನಂಜಯ್ ಮತ್ತು ಫಿಯಾನ್ಸೆ ಡಾ. ಧನ್ಯತಾ. ಡಾಲಿ ಮದುವೆ ವಿಚಾರ ಕೇಳಿ ಗೆಳೆಯ ನವೀನ್ ಶಂಕರ್ ರಿಯಾಕ್ಟ್ ಮಾಡಿದ್ದಾರೆ.

'ಧನಂಜಯ್ ಮದುವೆ ವಿಚಾರ ಕೇಳಿ ತುಂಬಾ ಖುಷಿಯಾಗಿದೆ. ನಮ್ಮ ಫ್ಯಾಮಿಲಿಯಲ್ಲಿ ಶುಭ ಕಾರ್ಯ ನಡೆಯಲಿದೆ ಅನಿಸುತ್ತಿದೆ. ಗೆಳೆಯ ಅನ್ನೋದಕ್ಕಿಂತ ಹೆಚ್ಚಾಗಿ ನನಗೆ ಜಾಗ ಮಾಡಿಕೊಟ್ಟಿದ್ದಾರೆ ಅಂದ್ರೆ ಅವರು ನನಗಿಂತ ಸೀನಿಯರ್...ನಮ್ಮಿಬ್ಬರ ನಡುವೆ ಅಣ್ಣ ತಮ್ಮ ಸಂಬಂಧವಿದೆ ಆ ಸಲುಗೆ ಇದೆ. ಧನಂಜಯ್ ಜೀವನದ ಮಹತ್ವವಾದ ಘಟ ಒಳ್ಳೆ ಬಾಳ ಸಂಗಾತಿ ಸಿಕ್ಕಿದ್ದಾರೆ...ಅಭಿಮಾನಿಗಳು ಕೇಳುವ ರೀತಿಯಲ್ಲಿ ಯಾವಾಗ ಮದುವೆ ಅಂತ ನಾನು ಕೇಳುತ್ತಿದ್ದೀನಿ. ನಮ್ಮ ಫ್ಯಾಮಿಲಿಯಲ್ಲಿ ನಡೆಯುತ್ತಿರುವ ಸಮಾರಂಭ ಅನ್ನೋಷ್ಟು ಖುಷಿ ಇದೆ. ಜೋಡಿ ಚೆನ್ನಾಗಿದ್ದಾರೆ. ಭಾವಿ ಪತ್ನಿ ಆಗುವವರು ತುಂಬಾ ಓದಿಕೊಂಡಿದ್ದಾರೆ, ಅವರಿಗೆ ಅದ್ಭುತ ದಾಂಪತ್ಯ ಜೀವನ ಆಗಲಿ ಇಬ್ಬರೂ ಖುಷಿಯಾಗಿರಲಿ. ಲವ್ ಸ್ಟೋರಿ ಬಗ್ಗೆ ನಾನು ಮಾತನಾಡುವಂತೆ ಇಲ್ಲ ಏಕೆಂದರೆ ನಾನು ಏನೇ ಹೇಳಿದ್ದರೂ ಅವನು ಬಂದು ಹೊಡೆಯುತ್ತಾನೆ. ಮುಂದಿನ ದಿನಗಳಲ್ಲಿ ಡಾಲಿನೇ ಮಾತನಾಡುತ್ತಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ನವೀನ್ ಶಂಕರ್ ಮಾತನಾಡಿದ್ದಾರೆ.

ತಾಯಿ ಶ್ರೀದೇವಿಗಿಂತ ಡಬಲ್ ದುಡಿಮೆ ಮಾಡ್ಬಿಟ್ರಾ ಜಾನ್ವಿ; 82 ಕೋಟಿ ಇರೋದು ನಿಜವೇ?

ಡಾಲಿ ಹುಡುಗಿ ಯಾರು?

ಡಾಲಿ ಧನಂಜಯ್ ಕೈ ಹಿಡಿಯುತ್ತಿರುವ ಹುಡುಗಿ ಹೆಸರು ಧನ್ಯತಾ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿದ್ದಾರೆ. ವೈದ್ಯಕೀಯ ಪದವಿಯಲ್ಲಿ ರ್ಯಾಂಕ್ ಪಡೆದಿರುವ ಧನ್ಯತಾ ಮತ್ತು ಇಂಜಿನಿಯರಿಂಗ್‌ನಲ್ಲಿ ರ್ಯಾಂಕ್ ಪಡೆದಿರುವ ಧನಂಜಯ್ ಕಾಂಬಿನೇಷನ್‌ ಸೂಪರ್ ಆಗಿರಲಿದೆ ಅಂತಿದ್ದಾರೆ ಸಿನಿ ಪ್ರೇಮಿಗಳು. ಧನ್ಯತಾ ಮೂಲತಃ ಚಿತ್ರದುರ್ಗದವರು, ಹುಟ್ಟಿ ಬೆಳೆದದ್ದು ಅರಸೀಕರೆಯಲ್ಲಿ. ಡಾಲಿ ಮತ್ತು ಧನ್ಯತಾ ಹಲವು ವರ್ಷಗಳಿ ಪರಿಚಯವಿದ್ದಾರೆ, ಇನ್‌ಸ್ಟಾಗ್ರಾಂ ಮೂಲಕ ಈ ಜೋಡಿ ಮತ್ತಷ್ಟು ಹತ್ತಿರವಾಗಿದ್ದು ಆನಂತರ ಮದುವೆ ಹಂತಕ್ಕೆ ಮುಂದೋಗಿದ್ದಾರೆ ಎಂದು ಖಾಸಗಿ ವೆಬ್‌ನಲ್ಲಿ ವರದಿ ಆಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಂದನವನದ ಫ್ಯೂಚರ್ ಹೀರೋಯಿನ್ ಮೇಲೆ ಕನ್ನಡಿಗರಿಗೆ ಫುಲ್ ಕ್ರಶ್
ಮಗನಿಗೆ ನಾನೇ ಅಪ್ಪನೂ ಆಗ್ತೇನೆಂದು ಆಗ ಹೇಳಿಬಿಟ್ಟೆ, ಆದ್ರೆ ಆಗಿದ್ದೇ ಬೇರೆ: Meghana Raj ನೋವಿನ ನುಡಿ