ಭೇಟಿಯಾದ ಒಂದು ತಿಂಗಳಲ್ಲೇ ನಾನು ಗರ್ಭಿಣಿಯಾದೆ, ಅಷ್ಟು ಆತುರ ಅವರಲ್ಲಿತ್ತು: ಅಮಲಾ ಪೌಲ್!

By Shriram Bhat  |  First Published Nov 7, 2024, 6:06 PM IST

ಮಲಯಾಳಂ ಮೂಲದ ನಟಿ ಅಮಲಾ ಪೌಲ್ ಅವರು ಹೆಚ್ಚಾಗಿ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸಿದೀಪ್ ನಟನೆಯ 'ಹೆಬ್ಬುಲಿ' ಬಿಟ್ಟರೆ ಕನ್ನಡದಲ್ಲಿ ಅಮಲಾ ಪೌಲ್ ನಟಿಸಿಲ್ಲ. ಅವರು ನಟಿ ಮಾತ್ರವಲ್ಲದೇ ನಿರ್ಮಾಪಕಿಯೂ..


ಕನ್ನಡದ ಹೆಬ್ಬುಲಿ (Hebbuli) ಚಿತ್ರದಲ್ಲೂ ನಟಿಸಿರುವ ಮಲಯಾಳಂ ಬೆಡಗಿ ನಟಿ ಅಮಲಾ ಪೌಲ್ (Amala Paul) ಅವರು ಇದೀಗ ಸಖತ್ ಸುದ್ದಿಯಾಗುತ್ತಿದ್ದಾರೆ. ಅವರು ತಮ್ಮ ಗಂಡನ ಬಗ್ಗೆ ಹೇಳಿರುವ ಹೇಳಿಕೆ ಇದೀಗ ಸಖತ್ ವೈರಲ್ ಆಗ್ತಿದೆ. ಸಾಮಾನ್ಯವಾಗಿ ಯಾರೂ ತಮ್ಮ ಗಂಡನ ಬಗ್ಗೆ ಹಾಗೆ ಹೇಳಿಕೊಳ್ಳೋದಿಲ್ಲ! ಹೇಳೊದಿಲ್ಲ ಅನ್ನೋದಕ್ಕಿಂತ ಅದು ಹೇಳಿಕೊಳ್ಳೋ ಸಂಗತಿಯೆ ಅಲ್ಲ ಅನ್ನಬಹುದು. ಆದರೆ ನಟಿ ಅಮಲಾ ಪೌಲ್ ಹೇಳಿಕೊಂಡಿದ್ದಾರೆ. ಹಾಗಿದ್ರೆ ಅವ್ರು ಅದೇನ್ ಹೇಳಿದಾರೆ ಗೊತ್ತಾ?

ನನ್ನ ಗಂಡನನ್ನು ಭೇಟಿಯಾದ ಒಂದು ತಿಂಗಳಲ್ಲೇ ನಾನು ಗರ್ಭಿಣಿಯಾದೆ. ಅಷ್ಟು ಆತುರ ಅವರಲ್ಲಿತ್ತು..' ಎಂದಿದ್ದಾರೆ ಅಮಲಾ ಪೌಲ್. ಸಂದರ್ಶನವೊಂದರಲ್ಲಿ ಮಾತನಾಡುತ್ತ ತಮ್ಮ ಲವ್, ಮದುವೆ ಹಾಗೂ ಮಗುವಿನ ಮಾತನಾಡುತ್ತ ನಟಿ ಅಮಲಾ ಪೌಲ್ ಹೀಗೆ ಹೇಳಿದ್ದಾರೆ. ಆದರೆ ಅವರ ಹೇಳಿಕೆಯನ್ನು ಕೇಳಿ ಕೆಲವರು ಮುಸಿಮುಸಿ ನಕ್ಕರೆ ಇನ್ನೂ ಕೆಲವರು ಅವೆಲ್ಲವನ್ನೂ ಯಾರಾದ್ರೂ ಮೀಡಿಯಾ ಮುಂದೆ ಹೇಳ್ತಾರಾ ಅಂತ ಅವರಿಗೆ ಬಾಯಿಗೆ ಬಂದಂತೆ ಬೈಯ್ತಿದಾರೆ. 

Latest Videos

undefined

ಅಭಿಮಾನಿಗಳಿಂದ ಏನನ್ನೂ ಮುಚ್ಚಿಡಲ್ಲ, ಹೌದು ಆಗಿದೆ, ನಾನೂ ಮನುಷ್ಯ: ಶಿವರಾಜ್‌ಕುಮಾರ್

ಯಾರೋ ಒಬ್ಬರ ಅಮಲಾ ಪೌಲ್ ಮಾತಿಗೆ 'ಕೆಲವು ಹೆಣ್ಮಕ್ಕಳಿಗೆ ಏನ್ ಹೇಳ್ಬೇಕು ಏನ್ ಹೇಳ್ಬಾರ್ದು ಅಂತಾನೇ ಗೊತ್ತಾಗಲ್ಲ ಗುರುವೇ.. ಸ್ಟಾರ್ಸ್ ಅನ್ನೋ ಕಾರಣಕ್ಕೆ ಇವೆಲ್ಲಾ ಹೇಳ್ಕೋಬೇಕಾ? ಛೀ, ಥೂ ಅಸಹ್ಯ..' ಎಂದಿದ್ದಾರೆ. ಕೆಲವರು ಹಣೆ ಚಚ್ಚಿಕೊಳ್ಳುತ್ತಿರುವ ಇಮೋಜಿ ಹಾಕಿದ್ದಾರೆ. ಇನ್ನೂ ಕೆಲವರು ನಿಮ್ಮ ಮೊದಲ ಗಂಡನಾ ಅಥವಾ ಎರಡನೇ ಗಂಡನಾ ಅಷ್ಟು ಆತುರಗಾರ?' ಎಂದು ಕೇಳಿದ್ದಾರೆ. ಆದರೆ, ಅದಕ್ಕಿನ್ನೂ ಅಮಲಾ ಉತ್ತರ ಕೊಟ್ಟಿರಲಿಕ್ಕಿಲ್ಲ!

ಮಲಯಾಳಂ ಮೂಲದ ನಟಿ ಅಮಲಾ ಪೌಲ್ ಅವರು ಹೆಚ್ಚಾಗಿ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸಿದೀಪ್ ನಟನೆಯ 'ಹೆಬ್ಬುಲಿ' ಬಿಟ್ಟರೆ ಕನ್ನಡದಲ್ಲಿ ಅಮಲಾ ಪೌಲ್ ನಟಿಸಿಲ್ಲ. ಅವರು ನಟಿ ಮಾತ್ರವಲ್ಲದೇ ನಿರ್ಮಾಪಕಿಯೂ ಹೌದು. ಇದೀಗ 33 ವರ್ಷದ ಹೊಸ್ತಿಲಿಗೆ ಕಾಲಿಟ್ಟಿರುವ ಅಮಲಾ ಪೌಲ್ ಅವರು 2014ರಲ್ಲಿ ಎಎಲ್ ವಿಜಯ್ ಎಂಬವರೊಂದಿಗೆ ವಿವಾಹ ಮಾಡಿಕೊಂಡು 2017ರಲ್ಲಿ ಡಿವೋರ್ಸ್ ತೆಗೆದುಕೊಂಡಿದ್ದಾರೆ. 

ಹೇಳಿ, ಉಪೇಂದ್ರ ಈ ಡೈಲಾಗ್‌ಗೆ 'ಬುದ್ಧಿವಂತ' ಅಂತೀರಾ ಅಥವಾ ಇನ್ನೇನೋ ಹೆಸರಿಡ್ತೀರಾ?

ಆದರೆ, 2023ರಲ್ಲಿ ಜಗತ್ ದೇಸಾಯಿ ಅವರೊಂದಿಗೆ ಮತ್ತೆ ವಿವಾಹ ಮಾಡಿಕೊಂಡಿದ್ದಾರೆ. ಅದೇನಾದ್ರೂ ಇರಲಿ, ಎರಡೋ ಮೂರೋ ಮದುವೆ ಆಗುವುದು ಅವರಿಗೆ ಬಿಟ್ಟಿದ್ದು. ಆದರೆ, ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಹೀಗೆಲ್ಲಾ ಮಾತನಾಡೋದಾ ಅಂತ ಕೇಳಿದರೆ, ಏನ್ ಮಾಡೋಕಾಗುತ್ತೆ, ಅವರ ತಲೆ ಅವರ ಬಾಯಿ, ಅದೇನ್ ಹೇಳ್ತಾರೋ ಅದೇನ್ ಬಿಡ್ತಾರೋ ಅನ್ನೋದು ಅವ್ರಿಗೇ ಬಿಟ್ಟಿದ್ದು ಅನ್ನೋದೇ ಸರಿನಾ ಅಂತ! ಯಾಕಂದ್ರೆ, ನಾವು ಹೇಳಿಕೊಟ್ಟಂಗೆ ಹೇಳ್ತಾರಾ ಅವ್ರೆಲ್ಲ..!?

click me!