ಅಭಿಮಾನಿಗಳಿಂದ ಏನನ್ನೂ ಮುಚ್ಚಿಡಲ್ಲ, ಹೌದು ಆಗಿದೆ, ನಾನೂ ಮನುಷ್ಯ: ಶಿವರಾಜ್‌ಕುಮಾರ್

By Shriram Bhat  |  First Published Nov 7, 2024, 3:57 PM IST

'ನಾನು ನನ್ನ ಅನಾರೋಗ್ಯವನ್ನು ನನ್ನ ಅಭಿಮಾನಿಗಳು ಸೇರಿದಂತೆ ಯಾರಿಂದಲೂ ಮುಚ್ಚಿಡುವ ಅಗತ್ಯವಿಲ್ಲ. ಆದರೆ, ಯಾರೂ ಅನಾವಶ್ಯಕ ಆತಂಕ ಪಡಬೇಡಿ. ಹೌದು, ಎಲ್ಲರಂತೆ ನಾನು ಕೂಡ ಮನುಷ್ಯ, ನನಗೂ ಅನಾರೋಗ್ಯ ಸಹಜವಾಗಿ ಕಾಡುತ್ತದೆ. ಹೌದು, ನನಗೆ ಹುಶಾರಿಲ್ಲ, ಆದರೆ..


ಕನ್ನಡದ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ (Shiva Rajkumar) ಅವರು ಬಹಳಷ್ಟು ಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದಕ್ಕೆ ಸಂಬಂಧಿಸಿ ಚಿಕಿತ್ಸೆ ಸಹ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಅದನ್ನು ಅನಗತ್ಯವಾಗಿ ಎಲ್ಲೂ ಹೇಳಿಕೊಂಡು ಓಡಾಡುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ಶಿವರಾಜ್‌ಕುಮಾರ್ ಅವರು ತಮ್ಮ ಅನಾರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹಾಗಿದ್ದರೆ ನಟ ಶಿವಣ್ಣ ಈ ಬಗ್ಗೆ ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ ಡಿಟೇಲ್ಸ್.. 

ಕನ್ನಡ ಸಿನಿಮಾರಂಗದ ಹಿರಿಯ ನಟ ಶಿವರಾಜ್‌ಕುಮಾರ್ ಅವರು ಬಹಳಷ್ಟು ದಿನಗಳಿಂದ ಅನಾರೋಗ್ಯಕ್ಕೆ (Health Issue) ಒಳಗಾಗಿದ್ದಾರೆ. ಅವರು ಚಿಕಿತ್ಸೆ ಪಡೆದುಕೊಳ್ಳುತ್ತಲೇ ತಮ್ಮ ನಟನೆಯ 'ಭೈರತಿ ರಣಗಲ್' ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಜೊತೆಗೆ, ಕಿರುತೆರೆಯ 'ಡಿಕೆಡಿ' ರಿಯಾಲಿಟಿ ಶೋದಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ಶಿವಣ್ಣ ಅವರು 'ನಾನು ನನ್ನ ಅನಾರೋಗ್ಯವನ್ನು ನನ್ನ ಅಭಿಮಾನಿಗಳು ಸೇರಿದಂತೆ ಯಾರಿಂದಲೂ ಮುಚ್ಚಿಡುವ ಅಗತ್ಯವಿಲ್ಲ. ಆದರೆ, ಯಾರೂ ಅನಾವಶ್ಯಕ ಆತಂಕ ಪಡಬೇಡಿ. ಹೌದು, ಎಲ್ಲರಂತೆ ನಾನು ಕೂಡ ಮನುಷ್ಯ, ನನಗೂ ಅನಾರೋಗ್ಯ ಸಹಜವಾಗಿ ಕಾಡುತ್ತದೆ. 

Tap to resize

Latest Videos

undefined

ಚಿಕಿತ್ಸೆಗೆ ಸದ್ಯದಲ್ಲೇ ಅಮೆರಿಕಾಗೆ ಹೋಗಲಿರುವ ನಟ ಶಿವರಾಜ್‌ಕುಮಾರ್

ಹೌದು, ನನಗೆ ಹುಶಾರಿಲ್ಲ, ಆದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಸದ್ಯದಲ್ಲೇ ಟ್ರೀಟ್‌ಮೆಂಟ್‌ಗೆ ಅಮೆರಿಕಾಗೆ ಒಂದು ತಿಂಗಳು ಹೋಗಲಿದ್ದೇನೆ. ಈಗಾಗಲೇ ಚಿಕಿತ್ಸೆಯ ಹಂತಗಳಲ್ಲಿ ಎರಡು ಸೆಷನ್ ಮುಗಿದಿದೆ, ಇನ್ನು ಎರಡು ಸೆಷನ್ ಬಾಕಿ ಇದ್ದು, ಅದಕ್ಕಾಗಿ ಅಮೆರಿಕಾಗೆ ಒಂದು ತಿಂಗಳು ಹೋಗಲಿದ್ದೇನೆ. ಬಳಿಕ ಒಂದು ಸರ್ಜರಿ ಸಹ ಆಗಬೇಕಿದೆ ಎಂದಿದ್ದಾರೆ ವೈದ್ಯರು. ಆದರೆ ಅದನ್ನು ಭಾರತದಲ್ಲಿಯೇ ಪಡೆದುಕೊಳ್ಳಬೇಕೋ ಅಥವಾ ಅಲ್ಲಿ ಅಮೆರಿಕಾದಲ್ಲಿಯೋ ಎಂಬ ಬಗ್ಗೆ ಇನ್ನೂ ಸ್ವಲ್ಪ ಗೊಂದಲವಿದೆ. ಆ ಬಗ್ಗೆ ಸದ್ಯದಲ್ಲೇ ನಿರ್ಧರಿಸಲಾಗುವುದು' ಎಂದಿದ್ದಾರೆ. 

ಸಹಜವಾಗಿಯೇ ನಟ ಶಿವಣ್ಣರ ಅಭಿಮಾನಿಗಳು ಆತಂಕಕ್ಕೆ ಈಡಾಗುತ್ತಾರೆ. ಆದರೆ ಆ ಬಗ್ಗೆ ಸ್ವತಃ ಶಿವಣ್ಣ 'ನನ್ನ ಅನಾರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈಗಲೂ ನಾನು ಶೂಟಿಂಗ್ ಹಾಗೂ ರಿಯಾಲಿಟಿ ಶೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಚಿಕಿತ್ಸೆಗೆ ಹೋಗಿಬಂದ ಬಳಿಕ ಮತ್ತೆ ನನ್ನ ಕೆಲಸವನ್ನು ಎಂದಿನಂತೆ ಮುಂದುವರಿಸಲಿದ್ದೇನೆ' ಎಂದಿದ್ದಾರೆ. 'ಅಭಿಮಾನಿಗಳಿಂದ ಯಾವುದನ್ನೂ ಮುಚ್ಚಿಡಬೇಕಾದ ಅಗತ್ಯ ನನಗಿಲ್ಲ' ಎಂದಿರುವ ನಟ ಶಿವಣ್ಣ ಅವರು, ಹೊರಗಡೆ ಜಗತ್ತಿಗೆ ಎಷ್ಟು ಮಾಹಿತಿ ನೀಡಬೇಕೋ ಅಷ್ಟನ್ನು ನೀಡಿದ್ದಾರೆ. 

ಹೇಳಿ, ಉಪೇಂದ್ರ ಈ ಡೈಲಾಗ್‌ಗೆ 'ಬುದ್ಧಿವಂತ' ಅಂತೀರಾ ಅಥವಾ ಇನ್ನೇನೋ ಹೆಸರಿಡ್ತೀರಾ?

ನಟ ಶಿವರಾಜ್‌ಕುಮಾರ್ ಅವರೇ ಸ್ವತಃ ಹೇಳಿದಂತೆ 'ನನ್ನ ಅನಾರೋಗ್ಯ ಹಾಗು ಕಂಡೀಷನ್ ಬಗ್ಗೆ ಕನ್ನಡ ಸಿನಿಮಾ ಉದ್ಯಮದಲ್ಲಿ ಅನೇಕರಿಗೆ ತಿಳಿದಿದೆ. ಈ ಬಗ್ಗೆ ನನ್ನ ಆಪ್ತರು ಬಹಳಷ್ಟು ಧೈರ್ಯ ಹೇಳಿದ್ದಾರೆ. ಹೌದು, ನನಗೆ ಆ ಖಾಯಿಲೆ ಬಂದುಬಿಟ್ಟಿದೆ. ಆ ಬಗ್ಗೆ ಪ್ರಾರಂಭದಲ್ಲಿ ನಾನು ಭಯಪಟ್ಟರೂ ಈಗ ಧೈರ್ಯ ತಂದುಕೊಂಡಿದ್ದೇನೆ. ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ, ಮುಂದೆಯೂ ತೆಗೆದುಕೊಳ್ಳಲಿದ್ದೇನೆ, ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ನನಗಿದೆ' ಎಂದಿದ್ದಾರೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್. 

click me!