ಕಾಂತಾರ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ತಮ್ಮ ಇಡೀ ತಂಡಕ್ಕೆ, ಅಪ್ಪು ಸರ್‌ಗೆ, ದೈವ ನರ್ತಕರು ಮತ್ತು ಕನ್ನಡ ಜನತೆಗೆ ಅರ್ಪಿಸಿದ್ದಾರೆ.
ಬೆಂಗಳೂರು (ಆ.16): ವಿಶ್ವಮಟ್ಟದಲ್ಲಿ ಸುದ್ದಿ ಮಾಡಿದ್ದ ಕಾಂತಾರ ಮತ್ತು ಕೆಜೆಎಫ್ ಚಾಪ್ಟರ್ 2 ಚಿತ್ರಕ್ಕೆ ಎರಡೆರಡು ರಾಷ್ಟ್ರ ಪ್ರಶಸ್ತಿಗಳು ಲಭಿಸಿದೆ. ಕಾಂತಾರದಲ್ಲಿನ ನಟನೆಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯನ್ನು ರಿಷಬ್ ಶೆಟ್ಟಿ ಪಡೆದುಕೊಂಡಿದ್ದು, ಅವಾರ್ಡ್ ಬಂದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಇಡೀ ತಂಡಕ್ಕೆ ಈ ಸಲ್ಲುತ್ತದೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೆ ಕಾಂತಾರದ ಯಶಸ್ಸನ್ನು ನಾನು ಅಪ್ಪು ಸರ್ ಗೆ , ದೈವ ನರ್ತಕರು ಮತ್ತು ಅವರ ಕುಟುಂಬದವರಿಗೆ ಅರ್ಪಿಸಿದ್ದೆ. ಜೊತೆಗೆ ಕನ್ನಡ ಜನತೆಗೆ ಕೂಡ ಅರ್ಪಿಸುತ್ತೇನೆ. ಇಲ್ಲವರೆಗೆ ಬರಲು ನಿಜವಾಗಲೂ ಕನ್ನಡ ಜನತೆಯೇ ಬೆಂಬಲ ಕೊಟ್ಟಿರುವುದು. ಜೊತೆಗೆ ಇಡೀ ತಂಡ ಪ್ರಯತ್ನ ಇದೆ. ಎಲ್ಲರೂ ಒಗ್ಗಟ್ಟಾಗಿ ಇದ್ದು ಸಿನೆಮಾದ ಕೆಲಸವನ್ನು ಕಷ್ಟಪಟ್ಟು ಮಾಡಿಕೊಂಡು ಬಂದಿದ್ದೇವೆ. ಇಂದು ಕೂಡ ಅದೇ ತಂಡದ ಜೊತೆಗೆ ನಾನು ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಇಡೀ ತಂಡಕ್ಕೆ ನಾನು ಇದನ್ನು ಅರ್ಪಿಸುತ್ತೇನೆ.
ಕನ್ನಡ ಚಿತ್ರರಂಗಕ್ಕೆ ಫಲಿಸಿತೇ ಪೂಜಾಫಲ, ಕಾಂತಾರ, ಕೆಜಿಎಫ್‌ಗೆ ಎರಡೆರಡು ರಾಷ್ಟ್ರೀಯ ಪ್ರಶಸ್ತಿ!
ಇದರ ಜೊತೆಗೆ ಹೊಂಬಾಳೆ ಕೂಡ 4 ಪ್ರಶಸ್ತಿ ಬಂದಾಗಾಯ್ತು, ಕಾಂತಾರದ ಜೊತೆಗೆ ಕೆಜಿಎಫ್ ಗೂ ಎರಡು ಪ್ರಶಸ್ತಿಗಳು ಬಂದಿದೆ. ಇಂತಹ ನಿರ್ಮಾಣ ಸಂಸ್ಥೆ ನಮ್ಮ ಸಿನೆಮಾಗಳನ್ನು ತೆಗೆದುಕೊಳ್ಳುತ್ತಿರುವುದು ಖುಷಿಯ ವಿಚಾರ. ಅಂತಹದ್ದೊಂದು ನಿರ್ಮಾಣ ಸಂಸ್ಥೆ ಕನ್ನಡಕ್ಕಿರುವುದು ನಮ್ಮೆಲ್ಲರ ಪುಣ್ಯ. ಎಲ್ಲರಿಗೂ ಧನ್ಯವಾದ, ನಿಮ್ಮ ಆಸೆ ಈಡೇರಿದೆ. ಪ್ರಶಸ್ತಿಯ ಬಗ್ಗೆ ಯಾವುದೇ ಆಸೆ ಇಟ್ಟುಕೊಂಡಿರಲಿಲ್ಲ.
ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ಇದೆ. ಮುಮ್ಮಟ್ಟಿಯವರೆಲ್ಲ ತುಂಬಾ ಲೆಜೆಂಡರಿ ನಟರು. ಅವರ ಮುಂದೆ ನಿಂತುಕೊಳ್ಳುವಷ್ಟು ಶಕ್ತಿ ನಮಗಿದೆಯಾ ಗೊತ್ತಿಲ್ಲ. ಒಂದು ಸಿನೆಮಾದಲ್ಲಿ ಮಾಡಿರುವ ಪಾತ್ರವನ್ನು ನೋಡಿ ಉತ್ತಮ ನಟ ಕೊಟ್ಟಿರುತ್ತಾರೆ. ಅವರೆಲ್ಲ ಅಲ್ಲಿದ್ದರು ಎಂದರೆ ನಾನು ಪುಣ್ಯವಂತ ಅಂದುಕೊಳ್ಳುತ್ತೇನೆ. ಅಲ್ಲಿವರೆಗೆ ನಾವು ತಲುಪುತ್ತಿದ್ದೇವೆ, ನಮ್ಮ ಕೆಲಸಗಳು ಅಲ್ಲಿವರೆಗೆ ತಲುಪುತ್ತಿದೆ ಅನ್ನುವುದು ಖುಷಿಯ ವಿಚಾರ. ಅದನ್ನು ಇನ್ನೂ ತುಂಬಾ ಜವಾಬ್ದಾರಿಯಿಂದ ಒಳ್ಳೆ ರೀತಿಯಲ್ಲಿ ಕೆಲಸ ಮಾಡುವ ರೀತಿಯಿಂದ ಋಣ ತೀರಿಸಿಕೊಳ್ಳುತ್ತೇನೆ.
ಜನರಿಗಿಂತ ದೊಡ್ಡದು ಯಾವುದೂ ಇಲ್ಲ. ಜನ ಚಿತ್ರ ನೋಡಿ ಮೆಚ್ಚಿಕೊಂಡಾಗ ಸಿನೆಮಾ ಮಾಡುವ ಪ್ರತಿಯೊಬ್ಬರಿಗೂ ಅದು ಮುಖ್ಯವಾಗುತ್ತದೆ. ಜನ ಒಂದು ಕಿರೀಟ ಕೊಟ್ಟಿರುತ್ತಾರೆ. ಅದರ ಮೇಲೆ ಒಂದು ಗರಿಯನ್ನು ಕೊಟ್ಟಾಗ ತುಂಬಾ ಜವಾಬ್ದಾರಿ ಇರುತ್ತದೆ. ಇನ್ನೂ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ.
ಕಾಂತಾರಕ್ಕೆ ರಾಷ್ಟ್ರ ಪ್ರಶಸ್ತಿ: 23 ವರ್ಷಗಳ ಬರ ನೀಗಿಸಿದ ರಿಷಬ್ ಶೆಟ್ಟಿ
ಕಾಂತಾರಕ್ಕೆ ಆಸ್ಕರ್ ಅನ್ನು ನಿರೀಕ್ಷೆ ಮಾಡಬಹುದೇ ಎಂದು ಕೇಳಿದ ಪ್ರಶ್ನೆಗೆ ನಕ್ಕ ರಿಷಬ್ ಶೆಟ್ಟಿ ನಾನು ಈ ಬಗ್ಗೆ ಏನೂ ಹೇಳಲಾರೆ. ಇತ್ತೀಚೆಗೆ ಹೇಳೋದು ಎಲ್ಲೆಲ್ಲೋ ಹೋಗಿ ಬಿಡುವ ಸಂಭವವಿರುತ್ತದೆ ಹೀಗಾಗಿ ನಾನು ಏನೂ ಹೇಳಲಾರೆ. ಇವತ್ತಿಗೆ ಇಡೀ ತಂಡಕ್ಕೆ , ಡಿಓಪಿ ಅರಂವಿಂದ್ ಕಶ್ಯಪ್, ಅಜನೀಶ್ ಲೋಕನಾಥ್, ನನ್ನ ಪತ್ನಿ, ವಸ್ತ್ರವಿನ್ಯಾಸಕಿ ಪ್ರಗತಿ, ಹೊಂಬಾಳೆ ಫಿಲ್ಮ್ಸ್ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ.
ಜನ ನೋಡಿ ಸಕ್ಸಸ್ ಕೊಟ್ಟಾಗ ಅದು ದೊಡ್ಡ ಜವಾಬ್ದಾರಿ, ಈ ಹಿಂದೆ ಸ.ಹಿ.ಪ್ರಾ ಶಾಲೆ ಕಾಸರಗೋಡಿಗೂ ಅವಾರ್ಡ್ ಬಂದಾಗ ಕೂಡ ಇನ್ನೂ ಹೆಚ್ಚಿನ ಕೆಲಸ ಮಾಡಬೇಕು ಎಂದೇ ನಾನು ಅಂದುಕೊಂಡೆ, ಎಲ್ಲದಕ್ಕೂ ಒಳ್ಳೆ ತಂಡ ಬೇಕು, ಉತ್ತಮ ಬರಹಗಾರರು, ಉತ್ತಮ ಸಿನೆಮಾಟೋಗ್ರಫಿ ಬೇಕು, ಒಳ್ಳೆ ನಿರ್ಮಾಣ ಸಂಸ್ಥೆ ಬೇಕು. ಒಬ್ಬರಿಂದ ಯಾವುದೂ ಸಾಧ್ಯವಿಲ್ಲ ಎಂದಿದ್ದಾರೆ.