ಕನ್ನಡ ಚಿತ್ರರಂಗಕ್ಕೆ ಫಲಿಸಿತೇ ಪೂಜಾಫಲ, ಕಾಂತಾರ, ಕೆಜಿಎಫ್‌ಗೆ ಎರಡೆರಡು ರಾಷ್ಟ್ರೀಯ ಪ್ರಶಸ್ತಿ!

By Gowthami KFirst Published Aug 16, 2024, 3:15 PM IST
Highlights

ಕನ್ನಡ ಚಿತ್ರರಂಗಕ್ಕೆ ಒಟ್ಟು ಏಳು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದು, ಕಾಂತಾರ ಮತ್ತು ಕೆಜಿಎಫ್ 2 ಚಿತ್ರಗಳು ತಲಾ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ರಿಷಭ್ ಶೆಟ್ಟಿ ಅವರ ಅಭಿನಯ ಮತ್ತು ಚಿತ್ರದ ಮನೋರಂಜನಾ ಮೌಲ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಕನ್ನಡ ಚಿತ್ರರಂಗದ ಒಳಿತಿಗಾಗಿ ಬುಧವಾರವಷ್ಟೇ ಹೋಮ, ಹವನ, ಪೂಜೆ, ನಾಗಾರಾಧನೆ ಮಾಡಲಾಗಿತ್ತು. ಇದೀಗ ಇದರ ಬೆನ್ನಲ್ಲೇ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಒಟ್ಟು ಏಳು ರಾಷ್ಟ್ರೀಯ ಪ್ರಶಸ್ತಿಗಳು ಘೋಷಣೆಯಾಗಿದೆ. ಇದರಲ್ಲಿ ವಿಶ್ವಮಟ್ಟದಲ್ಲಿ ಸುದ್ದಿಯಾದ ಕಾಂತಾರಕ್ಕೆ ಎರಡು ರಾಷ್ಟ್ರೀಯ ಪ್ರಶ್ತಿಗಳು ಒಲಿದುಬಂದಿದೆ. ಕಾಂತಾರ ಚಿತ್ರದಲ್ಲಿನ ನಟನೆಗೆ ರಿಷಭ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.  ಇದೇ ಸಿನಿಮಾಗೆ ಅತ್ಯುತ್ತಮ ಮನೋರಂಜನಾ ಚಿತ್ರ ಕೂಡ ಲಭಿಸಿದೆ.

ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ: ಕನ್ನಡಕ್ಕೆ ಈ ಬಾರಿ ಜಾಕ್‌ಪಾಟ್, ಒಟ್ಟು 7 ಪ್ರಶಸ್ತಿ ಇನ್ಯಾರಿಗೆ ಬಂತು ಪ್ರಶಸ್ತಿ?

Latest Videos

ಇನ್ನು ಕೆಜಿಎಫ್‌ 2 ಚಿತ್ರಕ್ಕೆ ಕೂಡ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.  ಅತ್ಯುತ್ತಮ ಪ್ರಾದೇಶಿಕ ಚಿತ್ರ ಮತ್ತು ಅತ್ಯುತ್ತಮ ಸಾಹಸ ವಿಭಾಗದಲ್ಲಿ ಬಂದಿದೆ. ಹೀಗೆ ಒಟ್ಟು 7 ರಾಷ್ಟ್ರೀಯ ಪ್ರಶಸ್ತಿಗಳು ಸ್ಯಾಂಡಲ್‌ವುಡ್‌ ಅನ್ನು ಅರಸಿ ಬಂದಿದೆ. ಇದು ದೇವರ ಅನುಗ್ರಹ ಎಂದೇ ಹೇಳಲಾಗುತ್ತಿದೆ.

ಕನ್ನಡ ಚಿತ್ರರಂಗದ ಒಳಿತಿಗಾಗಿ  ಆ.14ರಂದು ಮಾಡಿಸಿರುವ ಪೂಜಾ ಫಲ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಹೀಗೇ ಚಿತ್ರರಂಗದ ಎಲ್ಲಾ ಕಷ್ಟಗಳು ದೂರವಾಗಲಿ ಎಂದು ಚಿತ್ರಪ್ರೇಮಿಗಳು ಹರಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಎಷ್ಟೋ ದಿನಗಳ ಬಳಿಕ ಕೃಷ್ಣಂ ಪ್ರಣಯ ಸಖಿ, ಭೀಮಾ ಚಿತ್ರಗಳು ಬಾಕ್ಸ್ ಆಫೀಸ್‌ ನಲ್ಲಿ ಓಡುತ್ತಿದೆ. 

ಕಾಂತಾರಗೆ ಅತ್ಯುತ್ತಮ ಚಿತ್ರ, ರಿಷಬ್ ಶೆಟ್ಟಿ ಬೆಸ್ಟ್ ನಟ; ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟ!

ಇನ್ನು ಕಾಂತಾರ ಚಿತ್ರ ವಿಶ್ವಮಟ್ಟದಲ್ಲಿ ಜನಮನ್ನಣೆ ಪಡೆದಿತ್ತು. ಹೇಳಿ ಕೇಳಿ ಇದು ತುಳುನಾಡಿನ ವಿಶೇಷ ಆಚರಣೆಯಾದ ದೈವಾರಾಧನೆಗೆ ಸಂಬಂಧಿಸಿದ ಚಿತ್ರವಾಗಿತ್ತು. ತುಳುವರ ಆಚರಣೆ, ಮತ್ತು ಅದು ಮಣ್ಣಿನ ಸಂಸ್ಕೃತಿಯಾಗಿದೆ. ಮುಖ್ಯವಾಗಿ ಈ ಚಿತ್ರದಲ್ಲಿ ತುಳುನಾಡಿನ ಶಕ್ತಿಯುತವಾದ ದೈವಗಳಲ್ಲಿ ಒಂದಾದ ಪಂಜುರ್ಲಿ ಮತ್ತು ಗುಳಿಗ ಚಿತ್ರದ ಉಲ್ಲೇಖವಿದೆ. ಕಾಂತಾರ ಚಿತ್ರದ ಕೊನೆಯಲ್ಲಿ ರಿಷಭ್ ಮೈಮೇಲೆ ಗುಳಿಗ ಆವಾಹನೆಯಾಗುವ ಸನ್ನಿವೇಶವಿದ್ದು, ಈ ಸೀನ್‌ನಲ್ಲಿ ರಿಷಭ್ ನಟನೆಯು ಅತ್ಯುತ್ತಮವಾಗಿದೆ. 

ಹೀಗಾಗಿ ರಿಷಭ್‌ ಅವರ ಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಬಂದಿರುವುದು. ನಟನಿಗೆ ಆ ದೈವವೇ ನೀಡಿದ ವರ ಪ್ರಸಾದ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೆ ಕಾಂತಾರ ಮತ್ತು ಕೆಜಿಎಫ್‌ ಈ ಎರಡೂ ಚಿತ್ರಗಳ ನಿರ್ಮಾಣ ಮಾಡಿರುವುದು ಹೊಂಬಾಳೆ ಫಿಲ್ಮಂ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

 ಅತ್ಯುತ್ತಮ ನಟ - ರಿಷಭ ಶೆಟ್ಟಿ (Best Actor – Rishab Shetty -Kantara)
ಅತ್ಯುತ್ತಮ ಮನೋರಂಜನಾ ಚಿತ್ರ - ಕಾಂತಾರ (Best Entertaining Film awards - Kantara )
ಅತ್ಯುತ್ತಮ ಪ್ರಾದೇಶಿಕ ಕನ್ನಡ ಚಿತ್ರ-ಕೆಜಿಎಫ್ ಚಾಪ್ಟರ್ 2 (Best Kannada Film – KGF: Chapter 2)
ಅತ್ಯುತ್ತಮ ಆ್ಯಕ್ಷನ್ ನಿರ್ದೇಶಕ- ಕೆಜಿಎಫ್-2: Best Action Direction – KGF: Chapter 2
ಅತ್ಯುತ್ತಮ ಸಂಕಲನ- ಸುರೇಶ್ ಅರಸ್, ಮಧ್ಯಂತರ (Best Editing – Madhyantara)
ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಬಸ್ತಿ ದಿನೇಶ್‌ ಶೆಣೈ (Madhyantara-ಕನ್ನಡ ಕಿರುಚಿತ್ರ)
ಉತ್ತಮ ಸಾಂಸ್ಕೃತಿಕ ಚಿತ್ರ  : ರಂಗವೈಭೋಗ (ಸುನೀಲ್ ಪುರಾಣಿಕ್)

click me!