ಅಂಬರೀಷ್-ವಿಷ್ಣುವರ್ಧನ್ ಸಂಬಂಧ: ಬೇಡವೆಂದರೂ ರಟ್ಟಾಯ್ತು ಮುಚ್ಚಿಟ್ಟ ಗುಟ್ಟು!

By Shriram Bhat  |  First Published Oct 16, 2024, 12:05 PM IST

ಸಾಹಸಸಿಂಹ ವಿಷ್ಣುವರ್ಧನ್ ನಟ ಅಂಬರೀಷ್ ಬಗ್ಗೆ ಏನು ಹೇಳಿದ್ದಾರೆ? ಹೊರಜಗತ್ತಿನಲ್ಲಿ ಅವರಿಬ್ಬರೂ ಆತ್ಮೀಯ ಸ್ನೇಹಿತರು. ಆದರೆ, ಒಳಮನಸ್ಸಿನಲ್ಲಿ, ಹೃದಯದ ಮಾತು ಹೊರಬಂದಾಗ ವಿಷ್ಣುವರ್ಧನ್ ನಿಜವಾಗಿಯೂ ಏನಂದ್ರು? ಇಲ್ಲಿದೆ ನೋಡಿ.. 


ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಅವರು ಒಮ್ಮೆ ಒಂದು ಸಂದರ್ಶನದಲ್ಲಿ ನಟ ಅಂಬರೀಷ್ (Ambareesh) ಬಗ್ಗೆ ಮಾತನಾಡಿದ್ದಾರೆ. ಹೊರಜಗತ್ತಿನಲ್ಲಿ ಹೇಳುವಂತೆ, ಬಹುಜನರಿಗೆ ಗೊತ್ತಿರುವಂತೆ ಅಂಬರೀಷ್ ಹಾಗು ವಿಷ್ಣುವರ್ಧನ್ ಅವರಿಬ್ಬರೂ ಆತ್ಮೀಯ ಸ್ನೇಹಿತರು. ಆದರೆ, ಒಳಮನಸ್ಸಿನಲ್ಲಿ, ಹೃದಯದ ಮಾತು ಹೊರಬಂದಾಗ ವಿಷ್ಣುವರ್ಧನ್ ನಿಜವಾಗಿಯೂ ತಮ್ಮ ಸ್ನೇಹಿತ ಅಂಬರೀಷ್ ಅವರ ಬಗ್ಗೆ ಏನಂದ್ರು? ಇಲ್ಲಿದೆ ನೋಡಿ ಅದಕ್ಕೆ ಉತ್ತರ.. 

ಸಂದರ್ಶನವೊಂದರಲ್ಲಿ ನಟ ವಿಷ್ಣುವರ್ಧನ್ 'ಅಂಬರೀಷ್ ಬಗ್ಗೆ ಬರೀ ಮಾತಿನಲ್ಲಿ ಹೇಳೋಕೆ ಸಾಧ್ಯವಿಲ್ಲ. ಅಂಬರೀಷ್ ಅದೊಂದು ಫೀಲಿಂಗ್ ಅದು.. ಅದೊಂದು ಭಾವನೆ, ಅದನ್ನ ಹೇಳೋದಕ್ಕಿಂತ ಎಂಜಾಯ್ ಮಾಡೋದಕ್ಕೆ ಚೆಂದ... ಯಾಕಂದ್ರೆ, ನಾನು ಮತ್ತು ಅವ್ನು ಒಂದೇ ತಾಯಿಯ ಹೊಟ್ಟೆನಲ್ಲಿ ಹುಟ್ಟಿಲ್ಲ ಅನ್ನೋದು ಬಿಟ್ರೆ, ಜೀವನದಲ್ಲಿ ಒಟ್ಟಿಗೇ ಇದ್ವಿ.. ಅವ್ನು ನನಗೆ ರಾಯಲ್ ಹಾಗೂ ಲಾಯಲ್ ಫ್ರೆಂಡ್ ಅಂತಾನೇ ಕರೀತಾ ಇದ್ದೆ.. ನಾವು ಒಟ್ಟಿಗೇ ಚಿತ್ರದಲ್ಲಿ ಇರ್ಲಿ ಬಿಡಲಿ, ಸಿನಿಮಾ ಉದ್ಯಮದಲ್ಲಿ ಇರ್ಲಿ ಬಿಡ್ಲಿ, ಒಬ್ಬರಿಗೊಬ್ಬರು ತುಂಬಾನೇ ಸ್ಪಂದಿಸ್ತಾ ಇದ್ವಿ.. 

Tap to resize

Latest Videos

undefined

 

ಅವ್ನು ನನ್ನ ನೋಡ್ಬೇಕು ಅಂದಾಗ, ಅವ್ನ ಮನಸ್ಸಲ್ಲಿ ನಾನು ಬಂದಾಗ ನಾನು ಅವ್ನಿಗೆ ಸಿಗ್ತೀನಿ, ಹಾಗೇ, ಅವ್ನು ನನ್ನ ಮನಸ್ಸಲ್ಲಿ ಬಂದಾಗ ಅವ್ನು ನನಗೆ ಸಿಗ್ತಾನೆ.. ಅಂಬರೀಷ್ ನನ್ನ ಲೈಫಲ್ಲಿ ಹೆಮ್ಮೆ, ಹೀ ಈಸ್ ಫ್ರೈಡ್.. ಅಂತಹ ಒಂದು ಸ್ನೇಹಿತ ನಮ್ಮೆಲ್ಲರ ಜೊತೆ ಇರೋದು ನಮ್ಮೆಲ್ಲರಿಗೂ ಹೆಮ್ಮೆ..' ಎಂದಿದ್ದರು ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್. ಅವರಿಬ್ಬರ ಸ್ನೇಹ ಹೊರಜಗತ್ತಿಗೆ ಗೊತ್ತಿರುವುದಕ್ಕಿಂತ ಇನ್ನೂ ಹೆಚ್ಚು ಡೀಪ್ ಆಗಿತ್ತು. ಆತ್ಮೀಯ ಸ್ನೇಹ ಎನ್ನುವುದಕ್ಕಿಂತಲೂ ಆಳವಾಗಿ ಅವರಿಬ್ಬರ ನಂಟು ಇತ್ತು. 

ನಟ ಅಂಬರೀಷ್ ಹಾಗು ವಿಷ್ಣುವರ್ಧನ್ ಅವರಿಬ್ಬರೂ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದ (Nagarahavu) ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು. ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕರು, ಅಂಬರೀಷ್ ರೆಬಲ್ ರೋಲ್ ಅಂದರೆ ವಿಲನ್ ಪಾತ್ರ ಪೋಷಣೆ ಮಾಡಿದ್ದರು. ಆದರೆ, ಆ ಬಳಿಕ ಅಂಬರೀಷ್ ಹೀರೋ ಆಗಿ ಮುಂದುವರೆದು ಖಡಕ್ ಪೊಲೀಸ್ ಪಾತ್ರ ಸೇರಿದಂತೆ, ವಿಭಿನ್ನ ಪಾತ್ರ ಪೋಷಣೆ ಮೂಲಕ ನಟ ವಿಷ್ಣುವರ್ಧನ್ ಅವರಂತೆ ಹೀರೋ ಆಗಿಯೇ ಕನ್ನಡ ಚಿತ್ರರಂಗದಲ್ಲಿ ಮುಂದುವರೆದರು. 

ನಟರಾದ ವಿಷ್ಣು ಹಾಗು ಅಂಬಿ ಆತ್ಮೀಯ ಸ್ನೇಹಿತರು ಎಂದು ಕನ್ನಡ ಸಿನಿಮಾ ಉದ್ಯಮ ಸೇರಿದಂತೆ ಪ್ರೇಕ್ಷಕ ವರ್ಗಕ್ಕೂ ಗೊತ್ತಿತ್ತು. ಅವರಿಬ್ಬರ ಮನೆಯವರೂ ಕೂಡ ಅತ್ಯಂತ ಆತ್ಮೀಯವಾಗಿಯೇ ಇದ್ದರು. ನಾಗರಹಾವು ಬಳಿಕ ಅವರಿಬ್ಬರೂ ಒಟ್ಟಾಗಿ 'ದಿಗ್ಗಜರು' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ನಿಜ ಜೀವನದಲ್ಲಿ ಅವರಿಬ್ಬರೂ ಹೇಗಿದ್ದಾರೋ ಹಾಗೇ ತೋರಿಸಿದ್ದಾರೆ ಎನ್ನಬಹುದು. ಅವರಿಬ್ಬರ ಜೊತೆಯಲ್ಲೂ ಬೇರೆ ಬೇರೆ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ಲಕ್ಷ್ಮೀ ಅವರು ಸಹ ಅಭಿನಯಿಸಿದ್ದಾರೆ. 

ಡಾ. ರಾಜ್‌ಕುಮಾರ್ ಬಗ್ಗೆ ವಿ‍ಷ್ಣುವರ್ಧನ್ ನೇರಾನೇರ ಮಾತು, 'ನಾನವನಲ್ಲ' ಅಂದೇಬಿಟ್ರು ಸಾಹಸಸಿಂಹ!

ದಿಗ್ಗಜರು ಚಿತ್ರದಲ್ಲಿ ಅಂಬಿ-ವಿಷ್ಣು ಸ್ನೇಹ ನೋಡಿ ಬಹಳಷ್ಟು ಜನರು ಕಣ್ಣಿರು ಹಾಕಿದ್ದಾರೆ ಎಂಬ ಸಂಗತಿ ಅಂದು ಬಹಳಷ್ಟು ಪ್ರಚಾರವನ್ನೂ ಸಹ ಪಡೆದಿತ್ತು. ಅವರಿಬ್ಬರ ರಿಯಲ್ ಸ್ನೇಹ ರೀಲ್‌ ಮೂಲಕ ಕೂಡ ಮತ್ತಷ್ಟು ಜಗಜ್ಜಾಹೀರಾಗಿತ್ತು. ಒಟ್ಟಿನಲ್ಲಿ, ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ, ಕನ್ನಡ ಚಿತ್ರರಂಗದ ಆಸ್ತಿಗಳಾಗಿದ್ದ ನಟರಾದ ಅಂಬರೀಷ್ ಹಾಗೂ ವಿಷ್ಣುವರ್ಧನ್ ಅತ್ಯುತ್ತಮ ಸ್ನೇಹಕ್ಕೆ ಉದಾಹರಣೆ ಎಂಬಂತೆ ಇದ್ದರು. ಈ ಕಾರಣಕ್ಕೆ ಅವರಿಬ್ಬರನ್ನು 'ಜೋಡಿ ಜೀವ' ಎಂದೇ ಇಂದಿಗೂ ಕನ್ನಡ ಚಿತ್ರರಂಗ ಹಾಗೂ ಪ್ರೇಕ್ಷಕವರ್ಗ ನೆನಪಿಸಿಕೊಳ್ಳುತ್ತದೆ. ಇಂದು ಅವರಿಬ್ಬರೂ ನಮ್ಮ ಜೊತೆ ಇಲ್ಲ. ಆದರೆ, ಅವರಿಬ್ಬರ ಸ್ನೇಹ ಯಾವತ್ತಿಗೂ ಯಾರೂ ಮರೆಯಲಾಗದ್ದು! 
 

click me!