ಮತ್ತೆ ಪ್ಯಾನ್‌ ಇಂಡಿಯಾ ಹೊರಟ ಕಿಚ್ಚ ಸುದೀಪ್‌; ನಾಗಾರ್ಜುನ ಮೆಚ್ಚಿಕೊಂಡ ಸಿನಿಮಾ 'ಫ್ಯಾಂಟಮ್‌'

Kannadaprabha News   | Asianet News
Published : Dec 01, 2020, 08:51 AM IST
ಮತ್ತೆ ಪ್ಯಾನ್‌ ಇಂಡಿಯಾ ಹೊರಟ ಕಿಚ್ಚ ಸುದೀಪ್‌; ನಾಗಾರ್ಜುನ ಮೆಚ್ಚಿಕೊಂಡ ಸಿನಿಮಾ 'ಫ್ಯಾಂಟಮ್‌'

ಸಾರಾಂಶ

ಅನೂಪ್‌ ಭಂಡಾರಿ ಹಾಗೂ ಕಿಚ್ಚ ಸುದೀಪ್‌ ಕಾಂಬಿನೇಷನ್‌ನ ‘ಫ್ಯಾಂಟಮ್‌’ ಚಿತ್ರಕ್ಕೆ ಹೈ ವೋಲ್ಟೇಜ್‌ ನಿರೀಕ್ಷೆಗಳು ಆವರಿಸಿಕೊಂಡಿವೆ. ಇದು ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುತ್ತಿದೆ ಎಂದು ಚಿತ್ರತಂಡ ಘೋಷಣೆ ಮಾಡಿಕೊಂಡಿದೆ. ಇದರ ಜತೆಗೆ ತೆಲುಗಿನ ಸೂಪರ್‌ ಹೀರೋ ನಾಗಾರ್ಜುನ ಅವರು ಚಿತ್ರದ ಕುರಿತು ಮಾತನಾಡಿ ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ‘ಫ್ಯಾಂಟಮ್‌’ ಚಿತ್ರದಲ್ಲಿ ನಾಗಾರ್ಜುನ ನಟಿಸುತ್ತಾರೆ ಎನ್ನುವ ಸುದ್ದಿಯೂ ಇದೆ.

ತೆಲುಗು ಬಿಗ್‌ಬಾಸ್‌ ನಲ್ಲಿ ಕನ್ನಡದ ಹವಾ

ತೆಲುಗಿನ ಮಾ ಟೀವಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್‌ಬಾಸ್‌ ರಿಯಾಲಿಟಿ ಶೋ ನಿರೂಪಣೆ ನಟ ನಾಗಾರ್ಜುನ ಅವರದ್ದು. ಚಿತ್ರೀಕರಣ ಕಾರಣಕ್ಕೆ ಕೆಲ ದಿನಗಳಿಂದ ನಿರೂಪಣೆ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿದ್ದರು. ಈಗ ಬಿಗ್‌ಬಾಸ್‌ ಶೋ ಮರಳಿ ಬಂದ ನಾಗಾರ್ಜುನ ಅವರನ್ನು ಸ್ವಾಗತ ಮಾಡುವ ಅತಿಥಿ ನಿರೂಪಕರಾಗಿ ನಟ ಸುದೀಪ್‌ ಹಾಜರಿದ್ದರು. ತೆಲುಗಿನ ಬಿಗ್‌ಬಾಸ್‌ ಶೋ ವೇದಿಕೆ ಮೇಲೆ ಎಂಟ್ರಿ ಕೊಟ್ಟಸುದೀಪ್‌, ಕನ್ನಡದಲ್ಲೇ ಮಾತನಾಡಿದರು. ಶೋ ಸ್ಪರ್ಧಿಗಳನ್ನು ಕನ್ನಡದಲ್ಲೇ ಮಾತನಾಡಿಸಿದರು.

ತೆಲುಗು ಬಿಗ್‌ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್..! 

ಮನ್ಮಥ ಮೆಚ್ಚಿದ ಫ್ಯಾಂಟಮ್‌

ಸುದೀಪ್‌ ಸ್ವಾಗತದಿಂದ ಶೋ ವೇದಿಕೆ ಮೇಲೆ ಬಂದ ನಾಗಾರ್ಜುನ, ‘ನಿರ್ದೇಶಕ ಅನೂಪ್‌ ಭಂಡಾರಿ ನನ್ನ ಭೇಟಿ ಮಾಡಿದರು. ಫ್ಯಾಂಟಮ್‌ ಚಿತ್ರದ ಕೆಲ ದೃಶ್ಯಗಳು, ಫೋಟೋಗಳನ್ನು ತೋರಿಸಿದರು. ನೀವು ಎಷ್ಟುಚೆನ್ನಾಗಿ ನಟಿಸಿದ್ದೀರಿ. ಕನ್ನಡ ಸಿನಿಮಾ ಗುಣಮಟ್ಟಹೆಚ್ಚಿಸುವ ಸಿನಿಮಾ ಇದು’ ಎಂದು ಅಕ್ಕಿನೇನಿ ನಾಗಾರ್ಜುನ ಮನಸಾರೆ ಮೆಚ್ಚಿಕೊಂಡರು. ಜತೆಗೆ ಲಾಕ್‌ಡೌನ್‌ ನಂತರ ತಮ್ಮ ಅನ್ನಪೂರ್ಣ ಸ್ಟುಡಿಯೋದಲ್ಲಿ ಶೂಟಿಂಗ್‌ ಮಾಡಿಕೊಂಡ ಮೊದಲ ಸಿನಿಮಾ ‘ಫ್ಯಾಂಟಮ್‌’. ಇದು ತಮಗೆ ನೆನಪಿನಲ್ಲಿ ಉಳಿಯುವ ಸಿನಿಮಾ ಎಂದಿದ್ದಾರೆ.

 

ಸುಮ್ಮನೆ ಪ್ಯಾನ್‌ ಇಂಡಿಯಾ ಅಲ್ಲ

ಬಜೆಟ್‌, ಮೇಕಿಂಗ್‌, ಕಲಾವಿದರ ಕಾರಣಕ್ಕೆ ಇದನ್ನು ನಾವು ಪ್ಯಾನ್‌ ಇಂಡಿಯಾ ಸಿನಿಮಾ ಎಂದು ಮಾಡುತ್ತಿಲ್ಲ. ಈ ಚಿತ್ರದ ಕತೆ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ. ನಾವೂ ಕೂಡ ಎಲ್ಲರಿಗೂ ಕನೆಕ್ಟ್ ಆಗುವ ಕತೆ ಹೇಳಬೇಕು ಎಂದುಕೊಂಡ್ವಿ. ಆ ಕತೆಯೇ ಈಗ ನಮ್ಮ ‘ಫ್ಯಾಂಟಮ್‌’ ಚಿತ್ರವನ್ನು ಪ್ಯಾನ್‌ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ ಎನ್ನುತ್ತಾ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಕ್ಕೆ ತಮಗೆ ಧನ್ಯವಾದಗಳು ಎಂದಿದ್ದು ನಟ ಸುದೀಪ್‌.

ಕಿಚ್ಚ ಸುದೀಪ್‌ ಫೋಟೋ ಸಿಕ್ಕಾಪಟ್ಟೆ ವೈರಲ್; ಫ್ಯಾಂಟಮ್ ಲೋಕವಿದು! 

ತೆಲುಗಿನ ಬಿಗ್‌ಬಾಸ್‌ ವೇದಿಕೆಯಲ್ಲಿ ಕನ್ನಡದ ಸಿನಿಮಾ ಸುತ್ತ ಮಾತು ಹಾಗೂ ಸುದೀಪ್‌ ಕನ್ನಡ ನಿರೂಪಣೆ ಮಾತುಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟುವೈರಲ್‌ ಆಗುತ್ತಿವೆ. ಜಾಕ್‌ ಮಂಜು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಿರೂಪ್‌ ಭಂಡಾರಿ, ನೀತಾ ಅಶೋಕ್‌ ನಟಿಸಿದ್ದಾರೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ನಟಿಸುವ ಸಾಧ್ಯತೆಗಳು ಇವೆಯೇ ಎಂಬುದು ಸದ್ಯದ ಕುತೂಹಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!