ಪುಲ್ವಾಮಾ ದಾಳಿ ನಂತರ ಸಾಹಸಕ್ಕೆ ಕೈ ಹಾಕಿದ ಜೋಗಿ ಪ್ರೇಮ್; 'ಏಕ್‌ ಲವ್ ಯಾ' ಚಿತ್ರೀಕರಣಕ್ಕೆ ಬಿಗಿ ಭದ್ರತೆ!

Published : Nov 30, 2020, 02:42 PM IST
ಪುಲ್ವಾಮಾ ದಾಳಿ ನಂತರ ಸಾಹಸಕ್ಕೆ ಕೈ ಹಾಕಿದ ಜೋಗಿ ಪ್ರೇಮ್; 'ಏಕ್‌ ಲವ್ ಯಾ' ಚಿತ್ರೀಕರಣಕ್ಕೆ ಬಿಗಿ ಭದ್ರತೆ!

ಸಾರಾಂಶ

'ಆರ್ಟಿಕಲ್ 370' ಚಿತ್ರದ ನಂತರ ಮತ್ತೊಮ್ಮೆ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವ ಸಾಹಸಕ್ಕೆ ಕೈ ಹಾಕಿದ ನಿರ್ದೇಶಕ ಜೋಗಿ ಪ್ರೇಮ್. ಹೇಗಿದೆ ಸ್ಥಳದ ವಾತಾವರಣ?

ಜೋಗಿ ಪ್ರೇಮ್ ನಿರ್ದೇಶನದ, ಪತ್ನಿ ರಕ್ಷಿತಾ ನಿರ್ಮಾಣ 'ಏಕ್‌ ಲವ್ ಯಾ' ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ. ವಿಭಿನ್ನ ಸ್ಥಳಗಳಲ್ಲಿ ಪ್ರೇಮ್ ಸಿನಿಮಾ ಚಿತ್ರೀಕರಣ ಮಾಡುವುದರಲ್ಲಿ ಎತ್ತಿದ ಕೈ. ಆದರೀಗ ತೆಗೆದುಕೊಂಡಿರುವ ರಿಸ್ಕ್‌ ತುಂಬಾನೇ ದೊಡ್ಡದು ಎನ್ನಲಾಗಿದೆ. 

ಮೊದಲ ದೃಶ್ಯದಲ್ಲೇ ಬಿಲ್ಡಿಂಗ್‌ನಿಂದ ಹಾರಿದೆ: ರೀಷ್ಮಾ ನಾಣಯ್ಯ 

ಹೌದು! ಪುಲ್ವಾಮಾದಲ್ಲಿ ಯೋಧರ ಮೇಲೆ ದಾಳಿ ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಹೌದು. ಹಿಂದಿಯ 'ಆರ್ಟಿಕಲ್ 370' ಚಿತ್ರದ ನಂತರ ಇಲ್ಲಿ ಯಾವ ಸಿನಿಮಾ ಚಿತ್ರೀಕರಣವೂ ನಡೆದಿರಲಿಲ್ಲ. ಈಗಲೂ ಕಾಶ್ಮೀರದಲ್ಲಿ ಉಗ್ರರ ಭೀತಿ ಸದಾ ಇರುತ್ತದೆ. ಆದರೂ ನಿರ್ದೇಶಕ ಜೋಗಿ ಪ್ರೇಮ್ ಚಿತ್ರೀಕರಣ ಮಾಡುವ ನಿರ್ಧಾರ ಮಾಡಿದ್ದಾರೆ. ಈ ವಿಚಾರದ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

'ಕಾಶ್ಮೀರ ತಲುಪಿದೆವು. ಆರ್ಟಿಕಲ್ 370 ನಂತರ ಚಿತ್ರೀಕರಣ ಮಾಡುತ್ತಿರುವ ಮೊದಲ ಕನ್ನಡದ ಸಿನಿಮಾ ಏಕ್‌ ಲವ್‌ ಯಾ ಅಂತ ಹೇಳಲು ಹೆಮ್ಮೆಯಾಗುತ್ತಿದೆ,' ಎಂದು ಪ್ರೇಮ್ ಬರೆದುಕೊಂಡಿದ್ದಾರೆ.  'ಲೊಕೇಶನ್ ತುಂಬಾನೇ ಚೆನ್ನಾಗಿದೆ. ಇಡೀ ತಂಡ ಬಂದು ಲ್ಯಾಂಡ್‌ ಆಗಿದ್ದೀವಿ. ಚಿತ್ರೀಕರಣ ಪ್ರಾರಂಭಿಸಬೇಕಿದೆ,' ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ. 

ಸಿಗರೇಟ್‌, ಎಣ್ಣೆ ಬಾಟ್ಲು, ಥ್ರಿಲ್ಲರ್ ಲವ್‌ ಸ್ಟೋರಿ ಬಗ್ಗೆ ಸತ್ಯ ಬಿಚ್ಚಿಟ್ಟ ಜೋಗಿ ಪ್ರೇಮ್! 

ಚಿತ್ರೀಕರಣ ಮಾಡುತ್ತಿರುವ ಏಕ್‌ ಲವ್‌ ಯಾ ತಂಡಕ್ಕೆ ಬಿಗಿ ಭದ್ರತೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ಹಿಂದೆ ಕಾಶ್ಮೀರ ಹಾಗೂ ಲಡಾಕ್‌ನಲ್ಲಿ ಚಿತ್ರೀಕರಣ ಮಾಡಲು ಲೊಕೇಶನ್‌ ನೋಡಲು ಹೋಗಿದ್ದರು. ಆ ಫೋಟೋಗಳನ್ನು ಪ್ರೇಮ್ ಶೇರ್ ಮಾಡಿಕೊಂಡಿದ್ದಾರೆ. ರಕ್ಷಿತಾ ತಮ್ಮ ರಾಣಾ ಈ ಚಿತ್ರದಲ್ಲಿ ನಾಯಕನಾಗಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಮಿಂಚಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

700 ಅಭಿಮಾನಿಗಳಿಗೆ ಯಶ್ ಯಾಕೆ ಪ್ರತ್ಯೇಕ ಸೆಲ್ಫಿ ಕೊಟ್ಟರು? ಕಾರಣ ಕೇಳಿದ್ರೆ ಮನಸ್ಸು ಕರಗುತ್ತೆ!
ಜ್ಯೇಷ್ಠವರ್ಧನ್ ಗ್ರಾಂಡ್ ಎಂಟ್ರಿ.. ವಿಷ್ಣುವರ್ಧನ್ ಮೊಮ್ಮಗ, ಅನಿರುದ್ದ್ ಮಗನ ಸಿನಿಮಾ ಶೀಘ್ರದಲ್ಲೇ ಶುರು!