ನಟ ವಿಷ್ಣುವರ್ಧನ್ ಅವರಿಗೆ ಇದ್ದ ಕಾರುಗಳ ಬಗೆಗಿನ ಕ್ರೇಜ್ ಅವರಿಂದ ಈ ಕೆಲಸ ಮಾಡಿಸಿದೆ. ಹಾಗೇ ನಟ ವಿಷ್ಣುವರ್ಧನ್ ಅವರಿಗೆ ಕ್ರಿಕೆಟ್ ಎಂದರೂ ಪಂಚಪ್ರಾಣ ಎನ್ನಲಾಗಿದೆ. ಕಾರುಗಳು, ಜಟಕಾ ಗಾಡಿ, ಕ್ರಿಕೆಟ್..
ಸ್ಯಾಂಡಲ್‌ವುಡ್ ನಟ, ಸಾಹಸಸಿಂಹ ಖ್ಯಾತಿಯ ವಿಷ್ಣುವರ್ಧನ್ ಅವರಿಗೆ ಕಾರುಗಳ ಬಗ್ಗೆ ಇರುವ ವ್ಯಾಮೋಹ ತುಸು ಹೆಚ್ಚೇ ಎಂಬುದು ಬಹುತೇಕರಿಗೆ ಗೊತ್ತು. 'ನಾಗರಹಾವು' ಸಿನಿಮಾ ಸೂಪರ್ ಹಿಟ್ ಆಗಿ ತಮಗೆ ಹೆಸರು ಬರುತ್ತಿದ್ದಂತೆ ವಿಷ್ಣುದಾದಾ ಮೊದಲು ಖರೀದಿ ಮಾಡಿದ್ದೇ ನಿಸ್ಸಾನ್ ಕಂಪನಿಯ ಕಾರು. ಈ ಕಾರನ್ನು ವಿಷ್ಣುವರ್ಧನ್ ಅವರು ಉಪಯೋಗಿಸುತ್ತಿದ್ದ ವೇಳೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದಂತ ವೀರೇಂದ್ರ ಹೆಗ್ಗಡೆ ಅವರು ಸ್ಥಾಪಿಸಿದ್ದ 'ಮ್ಯೂಸಿಯಂ'ಗೆ ನೆನಪಿನ ಕಾಣಿಕೆಯಾಗಿ ಇದೇ ಕಾರನ್ನು ವಿಷ್ಣುದಾದಾ ನೆನಪಿಗೋಸ್ಕರ ಕೊಟ್ಟಿದ್ದರು.
ಇದಾದ ಬಳಿಕ ನಟ ವಿಷ್ಣುವರ್ಧನ್ ತೆಗೆದುಕೊಂಡಿದ್ದು ಟೊಯೊಟಾ ಸುಪ್ರಾ ಕಾರು. ಅದನ್ನು ನಟ ವಿಷ್ಣುವರ್ಧನ್ ಸಾವಿನ ಬಳಿಕ ಮೈಸೂರಿನ ಅವರ ಸ್ಮಾರಕದ ಬಳಿ ಇಡಲಾಗಿದೆ. ಹೀಗೆ ನಟ ವಿಷ್ಣುವರ್ಧನ್ ಕೊಂಡಿದ್ದ ಎರಡೂ ಕಾರುಗಳನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ನಟ ವಿಷ್ಣುವರ್ಧನ್ ಅವರಿಗೆ ಇದ್ದ ಕಾರುಗಳ ಬಗೆಗಿನ ಕ್ರೇಜ್ ಅವರಿಂದ ಈ ಕೆಲಸ ಮಾಡಿಸಿದೆ. ಹಾಗೇ ನಟ ವಿಷ್ಣುವರ್ಧನ್ ಅವರಿಗೆ ಕ್ರಿಕೆಟ್ ಎಂದರೂ ಪಂಚಪ್ರಾಣ ಎನ್ನಲಾಗಿದೆ. ಕಾರುಗಳು, ಜಟಕಾ ಗಾಡಿ, ಕ್ರಿಕೆಟ್ ಹೀಗೆ ನಟ ವಿಷ್ಣುವರ್ಧನ್ ಅವರು ತುಂಬಾ ಇಷ್ಟಪಡುತ್ತಿದ್ದ ಕೆಲವು ಸಂಗತಿಗಳು ಈಗ ಬಹಿರಂಗವಾಗುತ್ತಿವೆ.
ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿದ್ದ ನಟಿ ಮೊನಿಷಾ ಸತ್ತಿದ್ದು ಹೇಗೆ? ಬೆಂಗಳೂರು ನಂಟು ಏನಿತ್ತು?
ಹುಡುಗ ಸಂಪತ್ ಕುಮಾರ್‌ಗೆ (ವಿಷ್ಣುವರ್ಧನ್‌ಗೆ) ಬಾಲ್ಯದಲ್ಲಿ ಜಟಕಾ ಗಾಡಿ ಓಡಿಸುವ ಹುಚ್ಚು. ಮೈಸೂರಿನ ನಂಜು ಮಳಿಗೆ ಜಟಕಾ ಸ್ಟ್ಯಾಂಡ್‌ನಲ್ಲಿ ಒಂದು ಒಳ್ಳೆಯ ಜಟಕಾ ಇತ್ತು. ಆ ಜಟಕಾ ಗಾಡಿಗೆ ಕಟ್ಟುತ್ತಿದ್ದ ಕುದುರೆ ಕಟ್ಟುಮಸ್ತಾಗಿದ್ದು, ಆ ಗಾಡಿಯನ್ನು ನೋಡಿದರೆ ವಿಷ್ಣುವರ್ಧನ್ ಅವರಿಗೆ ಏನೋ ಕ್ರೇಜ್. ಆ ಜಟಕಾ ಸಾಬಿಯ ಹೆಸರು ಸಾಬ್ ಜಾನ್. ಅವರನ್ನು ಪರಿಚಯ ಮಾಡಿಕೊಂಡು ಸಂಪತ್ ಕುಮಾರ್ ಅವರನ್ನು ಪಕ್ಕಕ್ಕೆ ಕುಳ್ಳಿಸಿರಿಕೊಂಡು ಆಗಾಗ ಜಟಕಾ ಹೊಡೆಯುತ್ತಿದ್ದರು. ಅದನ್ನು ಓಡಿಸುತ್ತ ಹುಡುಗಬುದ್ಧಿಯ ಸಂಪತ್ ಸಖತ್ ಎಂಜಾಯ್ ಮಾಡುತ್ತಿದ್ದರು.
ಅಪಘಾತದಲ್ಲಿ ಸಾವಿಗೀಡಾದ ಕನ್ನಡದ ಕಿರುತೆರೆ ಜನಪ್ರಿಯ ನಟಿ ಪವಿತ್ರ ಜಯರಾಂ!
ಒಮ್ಮೆ ಸಂಪತ್ ಗ್ರಹಚಾರ ಕೆಟ್ಟಿತ್ತು ಎನ್ನಬೇಕು. ಅಂದು ಶಾಲೆ ತಪ್ಪಿಸಿ, ಸಾಬಿಯನ್ನು ಬಿಟ್ಟು ಸಂಪತ್ ಒಬ್ಬರೇ ಮೃಗಾಲಯದ ಹತ್ತಿರಕ್ಕೆ ಜಟಕಾ ಹೊಡೆದುಕೊಂಡು ಹೋದರು. ಆದರೆ ಅಲ್ಲಿ ಅವರ ಎದೆ ಧಸಕ್ಕೆಂದಿತು. ಕಾರಣ, ಎದುರಿನಿಂದ ಅವರ ಚಿಕ್ಕಪ್ಪ ಬರುತ್ತಿದ್ದರು. ಅವರು ಮೈಸೂರಿನಲ್ಲಿರಲಿಲ್ಲ, ಆದರೆ ಊರಿಂದ ಬಂದವರು ಮೃಗಾಲಯ ವೀಕ್ಷಣೆಗೆ ಬಂದಿದ್ದರು. ಅಲ್ಲಿ ಅವರು ತಮ್ಮ ಅಣ್ಣನ ಮಗನನ್ನು ನೋಡಿ, ಅಚ್ಚರಿಗೆ ಒಳಗಾದರು. ಶಾಲೆಗೆ ಹೋಗಬೇಕಾಗಿದ್ದವ ಇಲ್ಲೇನು ಮಾಡುತ್ತಿದ್ದಾನೆ ಎಂದು ಅವರು ಶಾಕ್‌ಗೆ ಒಳಗಾದರು.
ನಾವು ಒಬ್ರೇ ಅಲ್ವಲ್ಲಾಇಲ್ಲಿ ಆಟ ಆಡೋರು, ಎದ್ರುಗಡೆನೂ ಇರ್ತಾರೆ; ಕೆಜಿಎಫ್ ಸ್ಟಾರ್ ಯಶ್!
ಬಳಿಕ, ಚಿಕ್ಕಪ್ಪ ಸಂಪತ್ ಮನೆಗೆ ಹೋದವರೇ ಈ ತಾವು ಕಂಡ ಘನಂದಾರಿ ಘಟನೆಯನ್ನು ಅಣ್ಣನ ಮನೆಯವರಿಗೆ ಹೇಳಿದ್ದಾರೆ. ಅಲ್ಲಿ ಅದು ದೊಡ್ಡ ಬಾಂಬ್ ರೀತಿ ಕೆಲಸ ಮಾಡಿದೆ. ಹುಡುಗ ಸಂಪತ್‌ಗೆ ಸರಿಯಾಗಿ ಒದೆ ಬಿತ್ತು. ಆದರೂ ಜಟಕಾ ಓಡಿಸುವುದನ್ನು ಬಿಡದಿದ್ದ ಅವರಿಗೆ, ಒಮ್ಮೆಯಂತೂ ಕೈಗೆ ಬರೆ ಕೊಟ್ಟು ಶಿಕ್ಷಿಸಲಾಗಿತ್ತು. ಅಂದು ಕೊಟ್ಟ ಆ ಬರೆ ನಟ ಸಂಪತ್ ಖ್ಯಾತ ನಟ ವಿಷ್ಣುವರ್ಧನ್ ಆಗಿ ಬದಲಾದ ಬಹುಕಾಲದ ಬಳಿಕವೂ ಅವರ ಕೈ ನಲ್ಲಿ ಕಾಣಿಸುತ್ತಲೇ ಇತ್ತು. ಹೀಗೆ ನಟ ವಿಷ್ಣುವರ್ಧನ್ ಅವರ ಜಟಕಾ ಓಡಿಸುವ ಹುಚ್ಚು ಬಾಲ್ಯದಲ್ಲಿ ಅವರಿಗೆ ಒದೆ ತಿನ್ನಿಸಿತ್ತು.