
'ನಾಗಮಂಡಲ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ವಿಜಯಲಕ್ಷ್ಮಿ ಸಂಕಷ್ಟದಲ್ಲಿದ್ದಾರೆ. ಸಿನಿಮಾರಂಗದಲ್ಲಿ ಸಕ್ರಿಯವಾಗಿಲ್ಲವಾದರೂ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ತಮ್ಮ ಜೀವದ ಕಷ್ಟ ಸುಖಗಳನ್ನು ವಿಡಿಯೋ ಮೂಲಕ ನೆಟ್ಟಿಗರ ಜೊತೆ ಹಂಚಿಕೊಳ್ಳುತ್ತಾರೆ.
ಕೆಲವು ತಿಂಗಳುಗಳಿಂದ ವಿಜಯಲಕ್ಷ್ಮಿ ಅವರ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪ್ಯಾರಲೈಸ್ ಆಗಿ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡ ಕುಟುಂಬ ಕರ್ನಾಟಕದ ಜನತೆ ಸಹಾಯ ಮಾಡುತ್ತಾರೆ, ಎಂದು ಇಡೀ ಕುಟುಂಬ ಕರ್ನಾಟಕಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಅಕ್ಕನ ಚಿಕಿತ್ಸೆಯ ವೆಚ್ಚಕ್ಕೆ ಪರದಾಡುತ್ತಿರುವ ವಿಜಯಲಕ್ಷ್ಮಿ ಅವರಿಗೆ ಕೊರೋನಾ ಸೋಂಕು ತಗುಲಿದೆ. ಅಲ್ಲದೆ ತಮಗೆ ನ್ಯುಮೋನಿಯಾ ಆಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
'5 ದಿನಗಳಿಂದ ನನಗೆ ತೀರ ಜ್ವರ ಇತ್ತು, ವಾಂತಿ ಮಾಡುತ್ತಿದ್ದೆ. ಉತ್ತರಹಳ್ಳಿಯ ಒಂದು ಆಸ್ಪತ್ರೆಯಲ್ಲಿ ನನಗೋಸ್ಕರ ಕಂಪ್ಲೀಟ್ ಟ್ರೀಟ್‌ಮೆಂಟ್ ನೀಡುತ್ತಿದ್ದಾರೆ. ನಾನು ಕಲಾವಿದ ಸಂಘಕ್ಕೆ ತುಂಬಾ ಮನವಿ ಮಾಡುತ್ತಿರುವೆ, ಸಹಾಯ ಕೇಳುತ್ತಿರುವೆ ಸುಮಾರು 5 ಜನರ ಜೊತೆ ಮಾತನಾಡಿದ್ದೀನಿ. ಮಾನವೀಯತೆ ದೃಷ್ಟಿಯಿಂದಲೂ ಯಾರೂ ಸರಿಯಾಗಿ ಸಹಾಯ ಮಾಡುತ್ತಿಲ್ಲ. ಅಭಿಮಾನಿಗಳು ದಯವಿಟ್ಟು ಇದನ್ನು ಸೀರಿಯಸ್ ವಿಡಿಯೋ ಎಂದು ತಿಳಿದುಕೊಳ್ಳಿ. ನಾನು ಉಳಿಯುವ ತರ ಕಾಣಿಸುತ್ತಿಲ್ಲ. ನಾನು ಯಾವ ವಿಚಾರ ಹೇಳಿಕೊಂಡರೂ ಕೆಲವರು ಮುಂದೆ ಬಂದು ಸಹಾಯ ಮಾಡಬೇಡಿ, ಮಾಡಬೇಡಿ ಅಂತ ಹೇಳುತ್ತಿದ್ದಾರೆ. ಡಾಕ್ಟರ್ಸ್‌ಗೆ ನನ್ನನ್ನು ಡಿಸ್ಚಾರ್ಜ್ ಮಾಡುವುದಕ್ಕೆ ಇಷ್ಟವೇ ಇರಲಿಲ್ಲ. 5 ದಿನದಿಂದ ನಮಗೆ ಊಟ ಕೊಡುವವರು ಯಾರೂ ಇಲ್ಲ,' ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ.
ಪದೆ ಪದೇ ಇಂಥ ವೀಡಿಯೋ ಮಾಡುತ್ತಿರುವ ನಟಿ ವಿಜಯಲಕ್ಷ್ಮಿಯ ಬಗ್ಗೆ ಈಗೀಗ ಕನಿಕರ ತೋರಿಸುವುರೇ ಯಾರೂ ಇಲ್ಲವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.