
ಉಪೇಂದ್ರ ನಿರ್ದೇಶನ ಮತ್ತು ನಟನೆಯ ಹೊಸ ಸಿನಿಮಾದ ಹೆಸರು ಯು-ಐ. ಇಂಗ್ಲಿಷಿನ ಯು ಅಕ್ಷರದ ಒಳಗೆ ಐ ಅಕ್ಷರ ಸೇರಿಕೊಂಡಿರುವ ಚಿಹ್ನೆಯುಳ್ಳ ಚಿತ್ರದ ಪೋಸ್ಟರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಸೆ.18 ಉಪೇಂದ್ರ ಹುಟ್ಟುಹಬ್ಬದಂದು ಅಧಿಕೃತ ಘೋಷಣೆ ಹೊರಬೀಳಲಿದೆ.
ಉಪೇಂದ್ರ ಮತ್ತೆ ನಾನು-ನೀನು ಫಿಲಾಸಫಿಗೆ ಮರಳಿರುವುದು ಪೋಸ್ಟರಿನಲ್ಲಿ ಖಚಿತವಾಗಿ ತಿಳಿಯುತ್ತದೆ. ಈ ಸಿನಿಮಾ ಕನ್ನಡ, ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಮೂಡಿಬರಲಿದೆ. ಉಪೇಂದ್ರ ಅವರು ಈ ಸಿನಿಮಾದ ಪೋಸ್ಟರ್ ಅನ್ನು ಸೆ.18ರಂದು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಅಚ್ಚರಿ ನೀಡಲು ಬಯಸಿದ್ದರು. ಅದಕ್ಕೆ ಪೂರಕವಾಗಿ ಇತ್ತೀಚೆಗೆ ಅವರು ತಮ್ಮ ನಿರ್ದೇಶನದ ಚಿತ್ರ ತಡವಾಗಲಿದೆ ಎಂದಿದ್ದರು. ಆದರೆ ಅವರು ಅಚ್ಚರಿ ನೀಡುವ ಮೊದಲೇ ಸಿನಿಮಾದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಇನ್ನು ಅಧಿಕೃತ ಘೋಷಣೆ ಬಾಕಿ ಉಳಿದಿದ್ದು, ಸಿನಿಮಾ ಕುರಿತ ಇನ್ನಿತರ ವಿವರಗಳನ್ನು ಸೆ.18ರಂದು ನೀಡಲಿದ್ದಾರೆ ಎನ್ನಲಾಗಿದೆ.
ಕೊರೋನಾ ಸಂಬಂಧ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ತಾನು ಅವತ್ತು ಊರಿನಲ್ಲೇ ಇರುವುದಿಲ್ಲ ಎಂದು ಉಪೇಂದ್ರ ಹೇಳಿದ್ದಾರೆ. ಆದರೆ ಆನ್‌ಲೈನ್ ಸಂಭ್ರಮ ಯಾವುದೇ ಅಡೆತಡೆ ಇಲ್ಲದೆ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.