
ಕೊರೋನಾ ಲಾಕ್‌ಡೌನ್‌ನಿಂದ ಮನೋರಂಜನ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದರುವ ಕಾರಣ ನಟ-ನಟಿಯರು ಮನೆಯಲ್ಲಿ, ಫಾರ್ಮ್‌ಹೌಸ್‌ನಲ್ಲಿ, ಸಮಾಜ ಸೇವೆ ಮಾಡುತ್ತ ಸಮಯ ಕಳೆಯುತ್ತಿದ್ದಾರೆ ಆದರೆ ಇದರಿಂದ ನಿರ್ದೇಶಕರಿಗೆ, ನಿರ್ಮಾಪಕರಿಗೆ ಹಾಗೂ ಚಿತ್ರಮಂದಿರ ಮಾಲೀಕರಿಗೆ ಕೋಟಿ ಕೋಟಿ ನಷ್ಟವಾಗುತ್ತಿದೆ.
ಪೈರಸಿ ವಿರುದ್ಧ ಹೊಸ ತಂತ್ರಜ್ಞಾನ;ಇನ್ನು ಮುಂದೆ ಚಿತ್ರಮಂದಿರಗಳಲ್ಲಿ ಕದ್ದು ಚಿತ್ರೀಕರಣ ಮಾಡಲಾಗದು!
ಈ ವರ್ಷ ಆದ ಲಾಕ್‌ಡೌನ್‌ನಿಂದ ಮೈಸೂರಿನ ಜನಪ್ರಿಯಾ ಸಿಂಗಲ್ ಸ್ಕ್ರೀನ್ ಲಕ್ಷ್ಮಿ ಚಿತ್ರಮಂದಿರಕ್ಕೆ ಬೀಗ ಬಿದ್ದಿದೆ. ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ಮೈಸೂರಿನ ಶಾಂತಲಾ ಚಿತ್ರಮಂದಿರ ಮುಚ್ಚಲಾಗಿತ್ತು. ಈಗ ಅದೇ ರಸ್ತೆಯಲ್ಲಿರುವ ಲಕ್ಷ್ಮಿ ಚಿತ್ರಮಂದಿರಕ್ಕೂ ಬೀಗ. ಮೈಸೂರಿನಲ್ಲಿ ಹಂತ ಹಂತವಾಗಿ ಸಿಂಗಲ್ ಸ್ಕ್ರೀನ್ ಮುಚ್ಚುತ್ತಿರುವ ವಿಚಾರ ಕೇಳಿ ಸಿನಿ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷದಿಂದ ನಿರಂತರ ನಷ್ಟದಿಂದಲೇ ಚಿತ್ರಮಂದಿರ ನಡೆಯುತ್ತಿತ್ತು. ಲಕ್ಷ್ಮಿ ಚಿತ್ರಮಂದಿರಕ್ಕೆ ಸುಬ್ರಮಣ್ಯಂ ಎಂಬುವವರು ಮಾಲೀಕರು. ಡಾ.ರಾಜ್,ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್‌ರಂತಹ ನಟರ ಹಿಟ್ ಚಿತ್ರಗಳ ಪ್ರದರ್ಶನ ಇಲ್ಲಿ ನಡೆದಿದೆ. ಅಲ್ಲದೇ 50ಕ್ಕೂ ಹೆಚ್ಚು ಚಿತ್ರಗಳು ಶತದಿನೋತ್ಸವ ಆಚರಣೆ ಮಾಡಿದೆ. ಮತ್ತೊಂದು ವಿಶೇಷವೆಂದರೆ ಇಲ್ಲಿ ಹೊಸಬರ ಸಿನಿಮಾಗಳಿಗೂ ಅವಕಾಶ ನೀಡುತ್ತಿದ್ದರು ಲಕ್ಷೀ ಚಿತ್ರಮಂದಿರದ ಮಾಲೀಕರು. 'ರಿವೈಂಡ್ ಕನ್ನಡ' ಚಿತ್ರವೇ ಲಕ್ಷೀ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಕೊನೆ ಚಿತ್ರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.