
ಬೆಂಗಳೂರು(ಜೂ. 13) ಒಂದು ಕಡೆ ಕೊರೋನಾ ಸ್ಯಾಂಡಲ್ ವುಡ್ ನ್ನು ಕಾಡುತ್ತಿದ್ದರೆ ಇನ್ನೊಂದು ಕಡೆಯಿಂದ ಅಪಘಾತದ ಸುದ್ದಿ ಬಂದಿದೆ. ನಟ ಸಂಚಾರಿ ವಿಜಯ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
"
ರಸ್ತೆ ಅಪಘಾತದಲ್ಲಿ ನಟ ಸಂಚಾರಿ ವಿಜಯ್ ಗಂಭೀರ ಗಾಯಗೊಂಡಿದ್ದಾರೆ. ವಿಜಯ್ ಅವರ ತಲೆ ಹಾಗೂ ಬಲತೊಡೆಗೆ ಗಂಭೀರ ಪೆಟ್ಟು ಬಿದ್ದಿದೆ.
ಮೆಜೆಸ್ಟಿಕ್ ಕರಾಳ ಸತ್ಯ ತೆರೆದಿಟ್ಟಿದ್ದ ಸಂಚಾರಿ ವಿಜಯ್
ಬೈಕ್ ನಲ್ಲಿ ಸ್ನೇಹಿತರ ಜೊತೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೆದುಳಿನ ಭಾಗದಲ್ಲಿ ತೀವ್ರವಾಗಿ ರಕ್ತಸ್ರಾವ ವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ನಟ ವಿಜಯ್ ಪರಿಸ್ಥಿತಿ ಚಿಂತಾಜನಕವಾಗಿದ್ದು ಬನ್ನೇರು ಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜೆಪಿ ನಗರದ 7th ಪೇಸ್ ನಲ್ಲಿ ಅಪಘಾತವಾಗಿದೆ. ಸ್ನೇಹಿತ ನವೀನ್ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದರು. ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಸಂಚಾರಿ ವಿಜಯ್ ಆರೋಗ್ಯ ವಿಚಾರಿಸಲು ನಟ ಸತೀಶ್ ನೀನಾಸಂ ಆಸ್ಪತ್ರೆಗೆ ಆಗಮಿಸಿದ್ದಾರೆ. ಬೈಕ್ ಸ್ಕಿಡ್ ಆಗಿ ಬಿದ್ದಿದ್ದೇವೆ ಎಂದು ನವೀನ್ ಹೇಳಿಕೆ ನೀಡಿದ್ದಾರೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತವಾಗಿದೆ.
"
ವಿಜಯ್ ನಮ್ಮ ಕುಟುಂಬದ ಆಧಾರಸ್ತಂಭ, ಆತ ಸುಮ್ಮನೆ ಕೂರುವ ವ್ಯಕ್ತಿ ಅಲ್ಲ. ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದ. ನಿನ್ನೆಯೂ ಅಂತದ್ದೇ ಕೆಲಸ ಮುಗಿಸಿ ಬರುವಾಗ ಅವಘಡವಾಗಿದೆ. ವೈದ್ಯರು 48 ಗಂಟೆ ಅವಲೋಕನ ಮಾಡಬೇಕು ಎಂದಿದ್ದಾರೆ ನಾಳೆಗೆ 48 ಗಂಟೆ ಕಂಪ್ಲೀಟ್ ಆಗಲಿದೆ, ದಯವಿಟ್ಟು ನನ್ನ ಸಹೋದರನಿಗಾಗಿ ಪ್ರಾರ್ಥಿಸಿ ಎಂದು ವಿಜಯ್ ಸಹೋದರ ಸಿದ್ಧೇಶ್ ಕುಮಾರ್ ಕೇಳಿಕೊಂಡಿದ್ದಾರೆ.
ಯಮಹಾ ಆರ್ ಒನ್ ಫೈ ಗಾಡಿಯಲ್ಲಿ ತೆರಳುತ್ತಿದ್ದರು. ಸ್ನೇಹಿತ ನವೀನ್ ಕಾಲಿಗೆ ಪೆಟ್ಟಾಗಿದ್ದು ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ವಿಜಯ್ ಆರಾಮಾಗಿದ್ದಾರೆ. ಬಿಪಿ ಪಲ್ಸ್ ರೇಟ್ ಸರಿಯಾಗಿದೆ. ಅನಸ್ಥೆಶಿಯಾ ಕೊಟ್ಟಿರುವುದರಿಂದ ಪ್ರಜ್ನಾಹೀನ ಸ್ಥಿತಿಯಲ್ಲಿದ್ದಾರೆ. ಪ್ರಾಣಕ್ಕೆ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ನಟ ನೀನಾಸಂ ಸತೀಶ್ ತಿಳಿಸಿದ್ದಾರೆ.
'ನಾನು ಅವನಲ್ಲ ಅವಳು ಚಿತ್ರದ ನಟನೆಗೆ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಒಗ್ಗರಣೆ, ದಾಸವಾಳ, ಸಿಪಾಯಿ, ಜಂಟಲ್‌ಮ್ಯಾನ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೇಲೊಬ್ಬ ಮಾಯಾವಿ, ತಲೆದಂಡ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಅವಸ್ಥಾಂತರ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದ್ದವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.