Cyber Complaint: ಮನೆಯಲ್ಲಿ ಪವಿತ್ರಾ ಲೋಕೇಶ್ ಇಲ್ಲದ ಕಾರಣ ಪೊಲೀಸ್ ವಾಪಸ್

Published : Jun 30, 2022, 02:44 PM ISTUpdated : Jun 30, 2022, 02:52 PM IST
Cyber Complaint: ಮನೆಯಲ್ಲಿ ಪವಿತ್ರಾ ಲೋಕೇಶ್ ಇಲ್ಲದ ಕಾರಣ ಪೊಲೀಸ್ ವಾಪಸ್

ಸಾರಾಂಶ

ಸೈಬರ್ ಠಾಣೆಗೆ ದೂರು ದಾಖಲಿಸಿದ ಪವಿತ್ರಾ ಲೋಕೇಶ್. ಮನೆಯಲ್ಲಿ ನಟಿ ಇಲ್ಲದ ಕಾರಣ ತಾಯಿ ಪಾರ್ವತಿ ಲೋಕೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.

ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಮತ್ತು ನರೇಶ್‌ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪವಿತ್ರಾ ಅವರಿಗೆ ಇದು ಮೂರನೇ ಮದುವೆ, ನರೇಶ್ ಅವರಿಗೆ ನಾಲ್ಕನೇ ಮದುವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಚಾರ ವೈರಲ್ ಆಗುತ್ತಿರುವ ಬೆನ್ನಲೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ನನ್ನ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ಸೈಬರ್ ಪೊಲೀಸರ ಮೊರೆಹೋಗಿದ್ದರು. 

ತನಿಖೆ ಆರಂಭ:

ಎರಡು ದಿನಗಳ ಹಿಂದೆ ಪವಿತ್ರಾ ಲೋಕೇಶ್ ಅವರು ಮೈಸೂರಿನಲ್ಲಿರುವ ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದರು. ಇಂದು ವಿಚಾರಣೆ ಆರಂಭಿಸಿರುವ ಪೊಲೀಸರು ಪವಿತ್ರಾ ನಿವಾಸಕ್ಕೆ ಭೇಟಿ ನೀಡಿದ್ದಾರೆ. ನಟಿ ಮನೆಯಲ್ಲಿ ಇಲ್ಲದ ಕಾರಣ ಹಿಂತಿರುಗಿದ್ದಾರೆ. ಪವಿತ್ರಾ ಅವರ ಪುತ್ರಿ ಹೈದರಾಬಾದ್‌ನಲ್ಲಿ ಇದ್ದಾರೆ, ಸಿನಿಮಾವೊಂದರ ಶೂಟಿಂಗ್ ಪ್ಯಾಚ್ ವರ್ಕ್‌ ಮಾಡಲು ಹೋಗಿದ್ದಾರೆ ಹೀಗಾಗಿ ಮನೆಯಲಿಲ್ಲ ಎನ್ನಲಾಗಿದೆ. 

ಈ ಸಮಯದಲ್ಲಿ ಪವಿತ್ರಾ ಅವರ ತಾಯಿ ಪಾರ್ವತಿ ಮಾತನಾಡಿದ್ದಾರೆ. 'ಪವಿತ್ರಾ ದೂರು ದಾಖಲಿಸಬೇಕು ಎಂದು ಶೂಟಿಂಗ್ ನಿಲ್ಲಿಸಿ ಬಂದಿದ್ದಳು. ಏನೆಂದು ದೂರು ಕೊಟ್ಟಿದ್ದಾಳೆ ಅಂತ ನನಗೆ ಗೊತ್ತಿಲ್ಲಆದರೆ ದೂರು ಕೊಟ್ಟಿರುವುದು ಯಾವ ವಿಚಾರಕ್ಕೆ ಅಂತಾನೂ ಹೇಳಿಲ್ಲ. ಈಗಿನ ಮಕ್ಕಳು ನಮಗೆ ಏನಾದರೂ ಹೇಳುತ್ತಾರಾ? ಸದ್ಯ ತೆಲುಗು ಸಿನಿಮಾ ಶೂಟಿಂಗ್ ಮಾಡುತ್ತಿದ್ದಾಳೆ. ಹಳೆ ಶೂಟಿಂಗ್‌ನ ಪ್ಯಾಚ್ ವರ್ಕ್‌ ಇದೆ ಅಂತ ಹೇಳಿ ಹೋಗಿದ್ದಾಳೆ. ಯಾವ ಚಿತ್ರ ಎನು ಎಂಬುದು ನನಗೆ ಗೊತ್ತಿಲ್ಲ. ಆದರೆ ಜುಲೈ 5ರಂದು ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮವಿದೆ. ಅವತ್ತಿಗೆ ಬರುವುದಾಗಿ ಹೇಳಿದ್ದಾಳೆ. ಇದಕ್ಕಿಂತ ಹೆಚ್ಚಾಗಿ ನನಗೆ ಏನೂ ಗೊತ್ತಿಲ್ಲ' ಎಂದು ಹೇಳಿದ್ದಾರೆ.

ನರೇಶ್ ಬಾಬು, ಪವಿತ್ರಾ ಲೋಕೇಶ್ ಹೀಗೆ ಮಾಡ್ತಾರೆ ಅಂತ ಗೊತ್ತಿರ್ಲಿಲ್ಲ!

ಟಾಲಿವುಡ್ ನಟ ಮಹೇಶ್ ಬಾಬು ಅವರ ಸಹೋದರ ನರೇಶ್ ಮತ್ತು ಪವಿತ್ರಾ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಗೊತ್ತಿಲ್ಲ. ಆದರೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಧ್ಯಮಗಳಲ್ಲಿ ತಮ್ಮ ಪತಿಗಿರುವ ಅಫೇರ್ ಮತ್ತು ಕುಟುಂಬಕ್ಕೆ ಮಾಡುತ್ತಿರುವ ಅನ್ಯಾಯಗಳ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮಗಳಲ್ಲಿ ಪವಿತ್ರಾ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ, ನರೇಶ್ ಅವರು ಇಂದು ಸುದ್ದಿಗೋಷ್ಠಿ ಮಾಡುವ ಮೂಲಕ ಸ್ಪಷ್ಟನೆ ಕೊಡಬೇಕು ಅಂದುಕೊಂಡಿದ್ದರು ಆದರೆ ಕಾರಣಾಂತರಗಳಿಂದ ಮುಂದೂಡಿದ್ದಾರೆ. 

ನಟಿ ಪವಿತ್ರಾ ಲೋಕೇಶ್ 2007ರಲ್ಲಿ ನಟ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದರು. ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಇಬ್ಬರಿಗೂ ಅದು ಎರಡನೇ ಮದುವೆಯಾಗಿತ್ತು. ಆದರೂ ಇಬ್ಬರ ವೈವಾಹಿಕ ಜೀವನದಲ್ಲಿ ಸಾಮರಸ್ಯವಿಲ್ಲದ ಕಾರಣ ಇಬ್ಬರು ಕಳೆದ ನಾಲ್ಕೈದು ವರ್ಷಗಳಿಂದ ಬೇರೆ ಬೇರೆ ವಾಸಿಸುತ್ತಿದ್ದಾರೆ ಎನ್ನುವ ಗುಸು ಗುಸು ಸ್ಯಾಂಡಲ್ ವುಡ್‌ನಲ್ಲಿ ಕೇಳಿಬರುತ್ತಿದೆ. ಆದರೆ ಇದ್ಯಾವುದರ ಬಗ್ಗೆಯೂ ಪವಿತ್ರಾ ಲೋಕೇಶ್ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಪವಿತ್ರಾ ಲೋಕೇಶ್ ಪತಿ ಸುಚೇಂದ್ರ ಪ್ರಸಾದ್ ಹಾಗೂ ಸಹೋದರ ಆದಿ ಲೋಕೇಶ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?