ಸರಿತಾ ಬಿಟ್ಟರೆ ಸುಧಾರಾಣಿ ನನ್ನ ಫೇವರೆಟ್ ನಟಿ; ಹೀಗಂದಿದ್ರು ಕನ್ನಡದ ಮೋಸ್ಟ್ Top ಸ್ಟಾರ್ ನಟ!

By Shriram Bhat  |  First Published Mar 31, 2024, 8:57 PM IST

'ನಾನು ನನ್ನ ಸಿನಿಮಾಗಳಲ್ಲಿ ಬಹಳಷ್ಟು ಹೀರೋಯಿನ್‌ಗಳ ಜತೆ, ಮಹಿಳಾ ಕಲಾವಿದರ ಜತೆ ನಟಿಸಿದ್ದೇನೆ. ನಾನು ಯಾರನ್ನೂ ಇಷ್ಟಪಟ್ಟು ಅವರನ್ನೇ ನನ್ನ ಸಿನಿಮಾಗಳಲ್ಲಿ ನಾಯಕಿಯನ್ನಾಗಿ ಹಾಕಿಕೊಳ್ಳಿ ಎಂದು ಯಾವ ನಿರ್ಮಾಪಕರು ಹಾಗು ನಿರ್ದೇಶಕರನ್ನೂ ಕೇಳಿಲ್ಲ.


ಕನ್ನಡದಲ್ಲಿ ಡಾ ರಾಜ್‌ಕುಮಾರ್ (Dr Rajkumar) ಹಾಗೂ ಡಾ ವಿಷ್ಣುವರ್ಧನ್ (Dr Vishnuvardhan) ಅವರನ್ನು ಮೇರು ನಟರೆಂದು ಗುರುತಿಸಲಾಗುತ್ತದೆ. ಜತೆಗೆ, ಶಂಕರನಾಗ್ (Shankar Nag), ಅಂಬರೀಷ್ (Ambareesh) ಅವರನ್ನು ಸಹ ಟಾಪ್ ಸ್ಟಾರ್ ನಟರೆಂದು ಕರೆಯಲಾಗುತ್ತದೆ. ಅಂತ ನಟರಲ್ಲಿ ಒಬ್ಬರು, ತಮ್ಮ ಸಹನಟಿಯರನ್ನು ಅತ್ಯಂತ ಗೌರವದಿಂದ ಕಾಣುವ ಕನ್ನಡದ ಹಿರಿಯ ಕಲಾವಿದರೊಬ್ಬರು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತಮ್ಮ ಜತೆ ಸಿನಿಮಾಗಳಲ್ಲಿ ನಟಿಸಿದ ಸಹನಟಿಯರಲ್ಲಿ ತಮಗೆ ಇಷ್ಟವಾದ ನಟಿ ಯಾರು ಎಂಬ ಸೀಕ್ರೆಟ್‌ಅನ್ನು ಬಿಚ್ಚಿಟ್ಟಿದ್ದಾರೆ. 

'ನಾನು ನನ್ನ ಸಿನಿಮಾಗಳಲ್ಲಿ ಬಹಳಷ್ಟು ಹೀರೋಯಿನ್‌ಗಳ ಜತೆ, ಮಹಿಳಾ ಕಲಾವಿದರ ಜತೆ ನಟಿಸಿದ್ದೇನೆ. ನಾನು ಯಾರನ್ನೂ ಇಷ್ಟಪಟ್ಟು ಅವರನ್ನೇ ನನ್ನ ಸಿನಿಮಾಗಳಲ್ಲಿ ನಾಯಕಿಯನ್ನಾಗಿ ಹಾಕಿಕೊಳ್ಳಿ ಎಂದು ಯಾವ ನಿರ್ಮಾಪಕರು ಹಾಗು ನಿರ್ದೇಶಕರನ್ನೂ ಕೇಳಿಲ್ಲ. ಶೂಟಿಂಗ್ ಸ್ಪಾಟ್‌ನಲ್ಲಿ ಕ್ಯಾಮೆರಾ ಮುಂದೆ ನಟಿಯರೊಂದಿಗೆ ನಟಿಸುವುದನಮ್ನು ಬಿಟ್ಟರೆ ನನಗೆ ಬೇರೆ ಗೊತ್ತಿಲ್ಲ. ವಿಶ್ರಾಂತಿ ವೇಳೆಯಲ್ಲಿ ಉಭಯ ಕುಶಲೋಪರಿ ಎಂಬಂತೆ ಒಂದೋ ಎರಡೋ ಮಾತು ಆಡಿದರೆ ಮುಗಿಯಿತು ಅಷ್ಟೇ. ನಾನಿರುವುದೇ ಹಾಗೆ' ಎಂದಿದ್ದಾರೆ ಕನ್ನಡದ ಮೇರು ನಟ ಸಾಹಸಸಿಂಹ. 

Tap to resize

Latest Videos

'ನಂಜುಂಡಿ ಕಲ್ಯಾಣ'ಕ್ಕಿಂತ ಮೊದ್ಲು ಎಲ್ಲಿದ್ರು ಮಾಲಾಶ್ರೀ? ಮೂಲ ಯಾವುದು, ಕರ್ನಾಟಕಕ್ಕೆ ಎಲ್ಲಿಂದ ಬಂದ್ರು?

ಈಗ ಹೀಗೆ ಹೇಳಿರುವುದು ಬೇರೆ ಯಾರೂ ಅಲ್ಲ, ನಟ ವಿಷ್ಣುವರ್ಧನ್ ಎಂಬುದು ಗೊತ್ತಾಗಿರುತ್ತದೆ. ಹೌದು, ನಟ ವಿಷ್ಣುವರ್ಧನ್ ಮಾಧ್ಯಮದ ಮುಂದೆ ಒಮ್ಮೆ ಮಾತನಾಡುವ ವೇಳೆ ಸಹನಟಿಯರ ಬಗ್ಗೆ, ಆಯ್ಕೆಯಲ್ಲಿ ತಾವು ಮೂಗು ತೂರಿಸುವುದಿಲ್ಲ ಎಂಬ ಬಗ್ಗೆ ಹಾಗೂ ತಮ್ಮ ಇಷ್ಟದ ನಟಿಯರು ಯಾರು ಎಂಬ ಬಗ್ಗೆ ಹೇಳಿದ್ದರು. 'ನನ್ನ ಜತೆ ನಟಿಸಿದವರಲ್ಲಿ ಸರಿತಾ (Sariitha) ಬಿಟ್ಟರೆ ನನಗೆ ಇಷ್ಟವಾಗುವ ನಟಿ ಅಚ್ಚಗನ್ನಡದ ಕಲಾವಿದೆ ಸುಧಾರಾಣಿ (Sudharani).

ಶರತ್ ಸಿಗಲಿಲ್ಲ, ಗಂಗೂಲಿಯೂ ಕೈ ಹಿಡಿಯಲಿಲ್ಲ; 'ಮನೆಹಾಳಿ' ಪಟ್ಟದ ನಟಿ ನಗ್ಮಾ ಮುಂದೇನ್ ಮಾಡ್ತಾರಂತೆ?

ಸುಹಾಸಿನಿ (Suhasini) ಕೂಡ ಇಷ್ಟವಾಗಿದ್ದಾರೆ. ಆದರೆ, ಯಾರನ್ನೂ ನಾನು ಡಿಮ್ಯಾಂಡ್ ಮತ್ತೆ ನನ್ನ ಸಿನಿಮಾಗೆ ಹಾಕಿಕೊಳ್ಳಿ ಎಂದಿಲ್ಲ' ಎಂದಿದ್ದರು. ಇನ್ನೂರು (200) ಸಿನಿಮಾಗಳಲ್ಲಿ ನಟಿಸಿರುವ ನಟ ವಿಷ್ಣುವರ್ಧನ್ ಸಿನಿಮಾಗಳಲ್ಲಿ ಹಿರೋಯಿನ್‌ಗಳು ರಿಪೀಟ್ ಆಗಿದ್ದು ತುಂಬಾ ಕಡಿಮೆ ಎಂದೇ ಹೇಳಬಹುದು. ಅದಕ್ಕೆ ಸ್ವತಃ ವಿಷ್ಣುವರ್ಧನ್ ಕೂಡ ಕಾರಣ ಎಂಬುದು ಅವರದೇ ಮಾತಿನ ಮೂಲಕ ಬಹಿರಂಗವಾಗಿದೆ.

ನಟಿ 'ಕಲ್ಪನಾ ತೋಟ' ನಿಜವಾಗಿಯೂ ಅವರದ್ದಾಗಿತ್ತಾ; ಆ ಫಾರ್ಮ್ ಹೌಸ್ ಸತ್ಯ ಕಥೆಯೇನು?

ಸಹನಟಿ ಯಾರೇ ಆಗಿದ್ದರೂ ನಟಿಸುವುದಷ್ಟೇ ತಮ್ಮ ಕೆಲಸ ಎಂದು ಅಷ್ಟನ್ನೆ ಮಾಡುತ್ತಿದ್ದರು ವಿಷ್ಣುವರ್ಧನ್. 'ನಾನು ಸುಚಿತ್ರಾ ಹಾಗು ಭಾರತಿ ಅವರನ್ನು ಬಿಟ್ಟರೆ ನನ್ನ ಹೃದಯವನ್ನು ಇನ್ಯಾರಿಗೂ ಕೊಟ್ಟಿಲ್ಲ' ಎಂದಿದ್ದಾರೆ ನಟ ವಿಷ್ಣುವರ್ಧನ್. ಒಟ್ಟಿನಲ್ಲಿ ಕನ್ನಡದ ಈ ಮೇರು ನಟ ವ್ಯಕ್ತಿತ್ವದಲ್ಲಿ ಕೂಡ ಮೇರೆಉ ಪರ್ವತದಂತೆ ಎತ್ತರದ ಹಾಗು ತೂಕವುಳ್ಳ ವ್ಯಕ್ತಿ ಎನ್ನಬಹುದು. 

ಡ್ರೀಮ್ ಗರ್ಲ್ ಜತೆ ರೊಮಾನ್ಸ್ ಮಾಡಲು ಹಿಂದೇಟು ಹಾಕಿದ ಕನ್ನಡದ ಸ್ಟಾರ್ ನಟನಿಗೆ ಧಮೇಂದ್ರ ಮಾಡಿದ್ದೇನು?

click me!