'ನಂಜುಂಡಿ ಕಲ್ಯಾಣ'ಕ್ಕಿಂತ ಮೊದ್ಲು ಎಲ್ಲಿದ್ರು ಮಾಲಾಶ್ರೀ? ಮೂಲ ಯಾವುದು, ಕರ್ನಾಟಕಕ್ಕೆ ಎಲ್ಲಿಂದ ಬಂದ್ರು?

By Shriram Bhat  |  First Published Mar 31, 2024, 4:00 PM IST

ಕನ್ನಡದ 'ನಂಜುಂಡಿ ಕಲ್ಯಾಣ' ಸಿನಿಮಾಕ್ಕೆ ತಮ್ಮ ಮಗ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ದುರ್ಗಾ ಅವರನ್ನು ಆಯ್ಕೆ ಮಾಡಿದ ಪಾರ್ವತಮ್ಮ ರಾಜ್‌ಕುಮಾರ್ ಅವರು  'ಮಾಲಾಶ್ರೀ' ಎಂದು ಹೆಸರಿಟ್ಟರು. ಬಳಿಕ ನಡೆದಿದ್ದು ಪವಾಡ ಎಂಬಂತೆ, ದುರ್ಗಾ ಅವರು ಮಾಲಾಶ್ರೀ ಹೆಸರಿನಲ್ಲಿ..


ಕನ್ನಡ ಚಿತ್ರರಂಗದಲ್ಲಿ 'ಕನಸಿನ ರಾಣಿ' ಪಟ್ಟ ಪಡೆದು 80-90ರ ದಶಕದಲ್ಲಿ ಮಿಂಚಿದ್ದ ನಟಿ ಮಾಲಾಶ್ರೀ (Malashri)ಅವರು ಮೂಲತಃ ಕನ್ನಡದವರಲ್ಲ. ಕನ್ನಡ ಸಿನಿಮಾಗಳಲ್ಲಿ ನಟಿಸಿ ಭಾರೀ ಜನಪ್ರಿಯತೆ ಪಡೆದಿದ್ದ ನಟಿ ಮಾಲಾಶ್ರೀ, ನಭೋನಭವಿಷ್ಯತಿ ಎಂಬಂತೆ ಮೆರೆದವರು. ನಟ ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿ 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ನಟಿ ಮಾಲಾಶ್ರೀ, ಮೊದಲ ಚಿತ್ರದ ಮೂಲಕವೇ ರಾತ್ರೋರಾತ್ರಿ ಸ್ಟಾರ್ ನಟಿಯಾಗಿಬಿಟ್ಟರು.

ಅದ್ಭುತ ಎನಿಸುವ ನಟನೆ, ಮೈ ಛಳಿ ಬಿಟ್ಟು ಬಿಂದಾಸ್‌ ಆಗಿ ನಟಿಸಿದ್ದ ಮಾಲಾಶ್ರೀ ಮೋಡಿಗೆ ಕನ್ನಡ ಪ್ರೇಕ್ಷಕರು 'ಜೈ' ಎಂದುಬಿಟ್ಟರು. ನಂಜುಂಡಿ ಕಲ್ಯಾಣದ ಮೂಲಕ ಶುರುವಾದ ಮಾಲಾಶ್ರೀ ಚೈತ್ರಯಾತ್ರೆ ಬರೋಬ್ಬರಿ ಒಂದು ದಶಕಕ್ಕೂ ಹೆಚ್ಚು ಕಾಲ ಮುಂದುವರೆದಿತ್ತು. ಕನ್ನಡ ಚಿತ್ರಂಗದಲ್ಲಿ ನಟಿ ಮಾಲಾಶ್ರೀ ಅವರಷ್ಟು ಜನಪ್ರಿಯತೆ ಹಾಗೂ ಸಂಭಾವನೆ ಪಡೆದ ನಟಿ ಅಲ್ಲಿಯವರೆಗೂ ಬೇರೊಬ್ಬರಿಲ್ಲ. ಈಗಲೂ ಕೂಡ ಸಂಭಾವನೆಯನ್ನು ನಟಿಯರು ಹೆಚ್ಚು ಪಡೆಯುತ್ತಿರಬಹುದು, ಆದರೆ ಮಾಲಾಶ್ರೀ ರೀತಿ ಮನೆಮನೆಯಲ್ಲೂ ಮಾತನಾಡುವಷ್ಟು ಖ್ಯಾತಿ ಪಡೆದ ನಟಿ ಮತ್ತೊಬ್ಬರಿಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದು.

Tap to resize

Latest Videos

ನಟಿ 'ಕಲ್ಪನಾ ತೋಟ' ನಿಜವಾಗಿಯೂ ಅವರದ್ದಾಗಿತ್ತಾ; ಆ ಫಾರ್ಮ್ ಹೌಸ್ ಸತ್ಯ ಕಥೆಯೇನು?

ಅಂಥ ಮಾಲಾಶ್ರೀ ಮೂಲತಃ ಕನ್ನಡ ನಾಡಿನಲ್ಲಿ ಹುಟ್ಟಿಬೆಳೆದವರಲ್ಲ, ಆದರೆ ಈಗ ಕನ್ನಡನಾಡಿನ ಸೊಸೆಯಾಗಿದ್ದಾರೆ. ಹಾಗಿದ್ದರೆ ನಟಿ ಮಾಲಾಶ್ರೀ ಹಿನ್ನೆಲೆಯೇನು? ಎಲ್ಲಿಂದ ಎಲ್ಲಿಗೆ ಬಂದರು ಮಾಲಾಶ್ರೀ? ಹೌದು, ಮಾಲಾಶ್ರೀ ಮೂಲ ಪಂಜಾಬ್. ಪಾಂಡೇ ಕುಟುಂಬದ ಕುಡಿ ಮಾಲಾಶ್ರೀ ಕುಟುಂಬ ತುಂಬಾ ವರ್ಷಗಳ ಹಿಂದೆಯೇ ಹೈದ್ರಾಬಾದ್‌ನಲ್ಲಿ ನೆಲೆ ಕಂಡಿತು. ಹೀಗಾಗಿ ಮಾಲಾಶ್ರೀ ಅವರನ್ನು ಈಗಲೂ ಹೈದ್ರಾಬಾದ್ ಹುಡುಗಿ ಎಂದೇ ನಂಬಿದ್ದಾರೆ.

ಡ್ರೀಮ್ ಗರ್ಲ್ ಜತೆ ರೊಮಾನ್ಸ್ ಮಾಡಲು ಹಿಂದೇಟು ಹಾಕಿದ ಕನ್ನಡದ ಸ್ಟಾರ್ ನಟನಿಗೆ ಧಮೇಂದ್ರ ಮಾಡಿದ್ದೇನು?

ಮಾಲಾಶ್ರೀ ಬೆಳೆದಿದ್ದು ಹೈದ್ರಾಬಾದ್‌ನಲ್ಲಿ, ಮೂಲ ಹೆಸರು ದುರ್ಗಾ ಪಾಂಡೆ. ಅದೇ ಹೆಸರಿನಲ್ಲಿ ಸಾಕಷ್ಟು ಸಿನಿಮಾ ಅಡಿಷನ್‌ಗಳನ್ನು ಸಹ ಮಾಲಾಶ್ರೀ ಎದುರಿಸಿದ್ದರು ಎನ್ನಲಾಗಿದೆ. ಕನ್ನಡದ 'ನಂಜುಂಡಿ ಕಲ್ಯಾಣ' ಸಿನಿಮಾಕ್ಕೆ ತಮ್ಮ ಮಗ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ದುರ್ಗಾ ಅವರನ್ನು ಆಯ್ಕೆ ಮಾಡಿದ ಪಾರ್ವತಮ್ಮ ರಾಜ್‌ಕುಮಾರ್ ಅವರು  'ಮಾಲಾಶ್ರೀ' ಎಂದು ಹೆಸರಿಟ್ಟರು. ಬಳಿಕ ನಡೆದಿದ್ದು ಪವಾಡ ಎಂಬಂತೆ, ದುರ್ಗಾ ಅವರು ಮಾಲಾಶ್ರೀ ಹೆಸರಿನಲ್ಲಿ ಕನ್ನಡನಾಡಿನ ತುಂಬಾ ಖ್ಯಾತಿ ಪಡೆದು ಕನಸಿನ ರಾಣಿಯಾಗಿ ಮೆರೆದರು.

ಸಹನಟಿಯರ 'ಸೌಂದರ್ಯ'ದ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು; ಹಾಗೆ ಹೇಳಲು ಬಲವಾದ ಕಾರಣವೇನಿರಬಹುದು?

'ಮಾಲಾಶ್ರೀ ಕಾಲವನ್ನು ಈಗ 'ಗತ ವೈಭವ' ಎನ್ನಬಹುದು. ಸ್ಟಾರ್ ನಟರು ಸೇರಿದಂತೆ, ಅಂದಿನ ಎಲ್ಲಾ ನಟರೊಂದಿಗೆ ನಟಿಸಿರುವ ಹೆಗ್ಗಳಿಕೆ ಮಾಲಾಶ್ರೀ ಅವರದ್ದು. ಬಳಿಕ ಅವರು ನಿರ್ಮಾಪಕ ರಾಮು ಅವರನ್ನು ಮದುವೆಯಾಗಿ ಕನ್ನಡನಾಡಿನ ಸೊಸೆಯಾಗಿದ್ದಾರೆ. ಈಗ ಮಾಲಾಶ್ರೀ ಮಗಳು ಆರಾಧನಾ ರಾಮ್ 'ಕಾಟೇರ' ಚಿತ್ರದ ಮೂಲಕ ಸಿನಿಜರ್ನಿ ಶುರು ಮಾಡಿದ್ದಾರೆ. 

ನಾನೇನೂ ಹೇಳಲ್ಲ ಅಂತ ಹೇಳಿ 'ಸಲಾರ್ 2' ಕಥೆ ಸೀಕ್ರೆಟ್ ಎಲ್ಲಾನೂ ಹೇಳ್ಬಿಟ್ರಾ ಪ್ರಥ್ವಿರಾಜ್ ಸುಕುಮಾರನ್?

click me!