'40 ವರ್ಷ ಆದ್ರೂ ಫಿಗರ್-ಗಿಗರ್ ಮೆಂಟೇನ್ ಮಾಡ್ಕೊಂಡು..,ಯಾರ ಬಗ್ಗೆ ಹೀಗಂದ್ರು ಅದಿತಿ ಪ್ರಭುದೇವ..!?

By Shriram Bhat  |  First Published Jan 29, 2024, 4:55 PM IST

ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾ ಮಾಡಿ ಶೈನ್ ಆಗ್ಬೇಕು ಅನ್ನೋ ಧಾವಂತ ಇಲ್ಲ. ಹಾಗೆ ಮಾಡುವವರು ಮಾಡಿಕೊಳ್ಳಲಿ, ನನಗೇನೂ ಅಭ್ಯಂತರವಿಲ್ಲ ಅವರ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲ್ಲ...


ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಮದುವೆಯಾಗಿದ್ದರೂ ಸೌಂದರ್ಯವನ್ನು ಕಾಪಾಡಿಕೊಂಡಿರುವ ನಟಿ. ಸಿನಿಮಾ ನಟನೆಯಿಂದ ಇತ್ತೀಚೆಗೆ ಸ್ವಲ್ಪ ಅಂತರ ಕಾಯ್ದುಕೊಂಡಿರುವ ನಟಿ ಅದಿತಿ, ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ ಹಾಗು ರೀಲ್ಸ್ ಮೂಲಕ ಸದಾ ಸುದ್ದಿಯಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಆದಿತಿ ಪ್ರಭುದೇವ ಅವರ ಇತ್ತೀಚಿನ ಒಂದು ವೀಡಿಯೋ ವೈರಲ್ ಆಗಿದ್ದು ಭಾರೀ ನಗು ಉಕ್ಕಿಸುವಂತಿದೆ. 

ಸ್ನೇಹಿತೆಯರೊಂದಿಗೆ ಯಾವುದೋ ರೆಸ್ಟೋರೆಂಟ್‌ನಲ್ಲಿ ಕುಳಿತು ಮಾತನಾಡುತ್ತಿರುವ ನಟಿ ಅದಿತಿ, ನಗುನಗುತ್ತ ಹರಟೆ ಹೊಡೆಯುತ್ತಿದ್ದಾರೆ. ಮಾತನಾಡುತ್ತಿದ್ದ ಆದಿತಿ ಪ್ರಭುದೇವ ಬಾಯಿಂದ ಬಂದ ಆ ಮಾತು ಅಲ್ಲಿದ್ದವರೆಲ್ಲರಲ್ಲಿ ನಗು ತರಿಸಿತ್ತು. ಅದೇನೆಂದು ನೀವೇ ನೋಡಿ.. 'ನಂಗೆ ಹತ್ತು ಸಿನಿಮಾ ಆಫರ್ ಬಂದ್ರೆ ನಾನು ಅದರಲ್ಲಿ ಅಳೆದು ತೂಗಿ ಒಂದನ್ನು ಒಪ್ಪಿಕೊಳ್ತೀನಿ.. ನಂಗೆ 5 ವರ್ಷದಲ್ಲಿ ಬಹಳಷ್ಟು ಸಿನಿಮಾ ಮಾಡಿ ಗುಡ್ಡೆ ಹಾಕಿಬಿಡ್ಬೇಕು ಎಂಬ ಮನಸ್ಸಿಲ್ಲ. 

Tap to resize

Latest Videos

ಶ್ರೀ-ಪ್ರಣತಿ 'ಜಸ್ಟ್ ಪಾಸ್' ಫಸ್ಟ್ ಕ್ಲಾಸ್ ಟ್ರೇಲರ್ ವೈರಲ್; ಫೆಬ್ರವರಿ 9ರಂದು ಸಿನಿಮಾ ನೋಡಲು ರೆಡಿಯಾಗಿ!

ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾ ಮಾಡಿ ಶೈನ್ ಆಗ್ಬೇಕು ಅನ್ನೋ ಧಾವಂತ ಇಲ್ಲ. ಹಾಗೆ ಮಾಡುವವರು ಮಾಡಿಕೊಳ್ಳಲಿ, ನನಗೇನೂ ಅಭ್ಯಂತರವಿಲ್ಲ ಅವರ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲ್ಲ. ಆದರೆ, ವೈಯಕ್ತಿಕವಾಗಿ ನನಗೆ ಅದು ಇಷ್ಟವಿಲ್ಲ, ನಿಧಾನಕ್ಕೆ ಸಿನಿಮಾ ಸಂಖ್ಯೆ ಹೆಚ್ಚಾಗಲಿ, ಅರ್ಜೆಂಟ್ ಏನೂ ಇಲ್ಲ. 

ಆಗರ್ಭ ಶ್ರೀಮಂತೆ, ಐರ್ಲೆಂಡ್‌ನಲ್ಲಿ ಮಗ; ಮದ್ವೆಯಾದ್ರೂ ಒಂಟಿ ಬಾಳು, ಹೇಮಾ ಚೌಧರಿಗೆ ಇದೆಂಥ ಗೋಳು!

ಧಾವಂತದಲ್ಲಿ ಕೆಲಸ ಮಾಡಿ ಬಳಿಕ ಅನಾರೋಗ್ಯಕ್ಕೆ ಒಳಗಾಗಿ 'ಅಮ್ಮಾ, ಅಕ್ಕಾ.. ಹುಶಾರಿಲ್ಲ, ನನ್ನ ಹತ್ರ ಕಾಸಿಲ್ಲ, ನನ್ ಅಕೌಂಟ್‌ಗೆ ಹತ್ತು ಸಾವಿರ ಹಾಕಿ, ಅದೂ ಇದೂ ಅಂತ ಕಾಲ್ ಮಾಡೋಕೆ ನಂಗೆ ಇಷ್ಟವಿಲ್ಲ.. 40 ವರ್ಷ ಆದ್ರೂ 'ಫಿಗರ್ ಗಿಗರ್' ಮೆಂಟೇನ್ ಮಾಡ್ಕೊಂಡು ಹಾಯಾಗಿ ಹತ್ತರಲ್ಲಿ ಒಂದು ಸಿನಿಮಾ ಮಾಡ್ತೀನಿ ನಾನು' ಎಂದಿದ್ದಾರೆ ಅದಿತಿ ಪ್ರಭುದೇವ. ಅವರ ಮಾತಿನಿಂದ ಅಲ್ಲಿದ್ದವರು ನಗೆಗಡಲಿನಲ್ಲಿ ತೇಲಾಡಿದ್ದಾರೆ. ಇದೀಗ ಅದಿತಿ ಮಾತನಾಡಿರುವ ವೀಡಿಯೋ ಭಾರೀ ವೈರಲ್ ಆಗತೊಡಗಿದೆ.

ಕಪ್ಪು ಮೈ ಬಣ್ಣ, ಗೂನು ಬೆನ್ನಿನ ನಟಿ, 'ಮಿನುಗು ತಾರೆ' ಕಲ್ಪನಾ ದುರಂತ ಕಥೆಗೆ 'ಕಾರಣಕರ್ತ' ಯಾರು..!?

click me!