
ಸ್ಯಾಂಡಲ್‌ವುಡ್ ನಟ ರಘುವೀರ್ ಚಿರಪರಿಚಿತ ಹೆಸರು. ಚೈತ್ರದ ಪ್ರೇಮಾಂಜಲಿ ಹಾಗು ಶೃಂಗಾರ ಕಾವ್ಯ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದ ಈ ನಟ ಆಗರ್ಭ ಶ್ರೀಮಂತರ ಮನೆಯ ಮಗ. ಅಪ್ಪ ಪ್ರಸಿದ್ಧ ಕಾಂಟ್ರಾಕ್ಟರ್ ಆಗಿದ್ದು, ಹಣಕಾಸಿಗೆ ಯಾವುದೇ ಸಮಸ್ಯೆ ಇರಲಿಲ್ಲ. ರಘುವೀರ್‌ಗೆ ಚಿಕ್ಕಂದಿನಿಂದಲೂ ತಾವು ಸಿನಿಮಾ ನಟ ಆಗಬೇಕೆಂಬ ಕನಸಿತ್ತು. ಆದರೆ, ಅಪ್ಪನ ಬಳಿ ಕೇಳಿಕೊಂಡಿರಲಿಲ್ಲವಂತೆ. ಬಳಿಕ, ಒಮ್ಮೆ ಹೇಳಿಕೊಂಡು ತಮ್ಮ ಕನಸು ನನಸು ಮಾಡಿಕೊಂಡಿದ್ದರು.
ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಚೈತ್ರದ ಪ್ರೇಮಾಝಲಿ ಚಿತ್ರಕ್ಕೆ ಹಂಸಲೇಖಾ ಸಂಗೀತದಲ್ಲಿ ಇಂಪಾದ ಹಾಡುಗಳು ಮೂಡಿ ಬಂದಿದ್ದವು. ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಗೂ ಕೆಎಸ್ ಚಿತ್ರಾ ಕಂಠಸಿರಿಯಲ್ಲಿ ಮೂಡಿಬಂದಿದ್ದ ಹಾಡುಗಳು ಅಪಾರ ಜನಮನ್ನಣೆ ಗಳಿಸಿದ್ದವು. ಆ ಕಾಲದಲ್ಲಿ ರಘುವೀರ್ ನಟನೆಯ ಚೈತ್ರದ ಪ್ರೇಮಾಂಜಲಿ ಸಿನಿಮಾ ನೂರು ದಿನಗಳಿಗೂ ಮೀರಿ ಪ್ರದರ್ಶನ ಕಂಡಿದ್ದು ಭಾರೀ ಕಲೆಕ್ಷನ್ ಮಾಡಿತ್ತು. ಹಾಡುಗಳಂತೂ ಇಂದಿಗೂ ಜನರೂ ಮರೆತಿಲ್ಲ.
ಆದರೆ, ಶ್ರಂಗಾರ ಕಾವ್ಯ ಬಳಿಕ ಆ ಚಿತ್ರದ ನಟಿ ಸಿಂಧು ಜತೆಗೆ ನಟ ರಘುವೀರ್ ಅವರಿಗೆ ಲವ್ ಆಗಿಬಿಟ್ಟತು. ಸಿಂಧುವನ್ನು ಮದುವೆ ಮಾಡಿಕೊಳ್ಳುವುದಾಗಿ ರಘುವೀರ್ ಅಪ್ಪನಿಗೆ ಹೇಳಲು ಅವರಪ್ಪ ಒಪ್ಪಿರಲಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ಮಗನಿಗೆ ಬುದ್ಧಿ ಹೇಳಿದರೂ ಕೇಳದ ರಘುವೀರ್ ಮನೆಯಿಂದ ಹೊರಹೋಗಿ ಸಿಂಧುವನ್ನು ಮದುವೆಯಾಗಿ ಬೇರೆ ಸಂಸಾರ ಶುರುವಿಟ್ಟುಕೊಂಡರಂತೆ. ಆದರೆ ವಿಧಿ ಲಿಖಿತ ಬೇರೆಯೇ ಇತ್ತು, ಅದು ರಘುವೀರ್‌ಗೆ ಗೊತ್ತಿರಲಿಲ್ಲ ಅಷ್ಟೇ.
'40 ವರ್ಷ ಆದ್ರೂ ಫಿಗರ್-ಗಿಗರ್ ಮೆಂಟೇನ್ ಮಾಡ್ಕೊಂಡು..,ಯಾರ ಬಗ್ಗೆ ಹೀಗಂದ್ರು ಅದಿತಿ ಪ್ರಭುದೇವ..!?
ನಟಿ ಸಿಂಧು ಸುನಾಮಿ ಸಂತ್ತಸ್ತರಿಗೆ ಪರಿಹಾರ ನೀಡಲು ಹೋದಾಗ ಮೂಗಿನೊಳಗೆ ಧೂಳು ಸೇರಿಕೊಂಡು ಕೋಮಾಗೆ ಹೋಗಿಬಿಟ್ಟರಂತೆ. ಬಳಿಕ 2003ರಲ್ಲಿ ಯಾವುದೇ ಚಿಕಿತ್ಸೆ ಫಲಕಾರಿಯಾಗದೇ ಅವರು ತೀರಿಕೊಂಡರು. ಸಿಂಧು ಸತ್ತ ಬಳಿಕ ಖಿನ್ನತೆಗೆ ಜಾರಿದ ನಟ ರಘುವೀರ್ ಹಾಸಿಗೆ ಹಿಡಿದುಬಿಟ್ಟರಂತೆ. ಬಳಿಕ ಬೀದಿಬೀದಿ ಅಲೆಯುತ್ತಿದ್ದರಂತೆ. ಅವರು ಮನೆಯಿಂದ ಹೊರಗಡೆಯೇ ಅಲೆಯುತ್ತಿರುವದನ್ನು ನೋಡಿ ಅವರಪ್ಪ ಸಂಕಟಪಟ್ಟರಂತೆ.
ಆಗರ್ಭ ಶ್ರೀಮಂತೆ, ಐರ್ಲೆಂಡ್‌ನಲ್ಲಿ ಮಗ; ಮದ್ವೆಯಾದ್ರೂ ಒಂಟಿ ಬಾಳು, ಹೇಮಾ ಚೌಧರಿಗೆ ಇದೆಂಥ ಗೋಳು!
ಆಗ ರಘುವೀರ್ ತಂದೆ ತನ್ನ ಸಹೋದರಿಯ ಮಗಳೊಂದಿಗೆ ರಘುವೀರ್‌ಗೆ ಮತ್ತೊಂದು ಮದುವೆ ಮಾಡಿ ಹೊಸ ಜೀವನಪ್ರಾರಂಭಿಸಲು ಅವಕಾಶ ಮಾಡಿಕೊಟ್ಟರಂತೆ. ಆದರೆ, ರಘುವೀರ್ ದುರಂತ ಕಥೆ ಅಲ್ಲಿಗೇ ಮುಗಿಯಲಿಲ್ಲ. ಒಂದು ದಿನ ತೀವ್ರ ಹೊಟ್ಟೆನೋವಿನಿಂದ ಬಳಲಿದ ರಘುವೀರ್ ಯಾವ ಚಿಕಿತ್ಸೆಗೂ ಸ್ಪಂದಿಸದೇ ತೀರಿಕೊಂಡು ಬಿಟ್ಟರು. ಅತ್ತೆಯ ಮಗಳನ್ನು ಮನೆ ತುಂಬಿಸಿಕೊಂಡರೂ ರಘುವೀರ್ ಆಯಸ್ಸು ಮುಗಿದು ಹೋಗಿತ್ತು. 8 ಮೇ 2014ರಲ್ಲಿ ತಮ್ಮ 46ನೇ ವಯಸ್ಸಿಗೇ ನಟ ರಘುವೀರ್ ದುರಂತ್ಯ ಅಂತ್ಯ ಕಂಡರು.
ಕರಾವಳಿ ಅಂದ್ರೆ ಮಂಗಳೂರು ಅಷ್ಟೇ ಅಲ್ಲ, ಉತ್ತರ ಕನ್ನಡ ಜಿಲ್ಲೆ ಕೂಡ; ಮತ್ಸ್ಯಗಂಧ ಟೀಮ್‌ಗೆ ದಾರಿ ಬಿಡಿ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.