
ಕರುನಾಡ ಚತ್ರವರ್ತಿ ಡಾ. ಶಿವರಾಜ್ ಕುಮಾರ್ ಜುಲೈ 12ಕ್ಕೆ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಭಾರಿ ಹುಟ್ಟುಹಬ್ಬಕ್ಕೆ ಶಿವಣ್ಣನ ಹಲವು ಸಿನಿಮಾಗಳ ಸರ್ಪ್ರೈಸ್ ಕಾದಿದೆ. ಆ ಎಲ್ಲಾ ಸರ್ಪ್ರೈಸ್ ಗಳಿಗಿಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಸಿನಿಮಾದ ಟ್ರೀಟ್ ತುಂಬಾ ಸ್ಪೆಷಲ್ ಆಗಿದೆ. ಯಾಕಂದ್ರೆ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ ಎನ್ನುವ ಕುತೂಹಲ ಒಂದೆಡೆಯಾದರೆ ಮತ್ತೊಂದೆಡೆ ಪ್ಯಾನ್ ಇಂಡಿಯಾ ಸಿನಿಮಾ. ಹೌದು, ಈ ಮೂಲಕ ಶಿವಣ್ಣನ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಅಂದಹಾಗೆ ಇಂದು ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷೆಯ ಸಿನಿಮಾದ ಟೈಟಲ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ನಿರೀಕ್ಷೆ ಹೆಚ್ಚಿಸಿದೆ.
ಅಂದಹಾಗೆ ಅರ್ಜುನ್ ಜನ್ಯ ಸಾರಥ್ಯದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾಗೆ '45' ಎಂದು ಟೈಟಲ್ ಇಡಲಾಗಿದೆ. ಇಂದು ಹುಟ್ಟುಹಬ್ಬದ ಪ್ರಯುಕ್ತ 45 ಪೋಸ್ಟರ್ ರಿಲೀಸ್ ಮಾಡಲಾಗಿದೆ. ನಿಗೂಢವಾಗಿರುವ ಈ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಪೋಸ್ಟರ್ ಬಿಟ್ಟರೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ, ಯಾವ ರೀತಿಯ ಸಿನಿಮಾ ಎನ್ನುವ ಹೆಚ್ಚಿನ ಮಾಹಿತಿ ಇನ್ನು ಬಹಿರಂಗವಾಗಬೇಕಿದೆ.
ಶಿವಣ್ಣ 45 ಟೈಟಲ್ ರಿಲೀಸ್ ಮಾಡಿದ ಪರಭಾಷಾ ಸ್ಟಾರ್ಸ್
ಅಂದಹಾಗೆ 45 ಸಿನಿಮಾಗೆ ಎಂ ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ. ಅಂದಹಾಗೆ ಬೇರೆ ಬೇರೆ ಭಾಷೆಯ ಪೋಸ್ಟರ್ ಅನ್ನು ಆಯಾಯಾ ಭಾಷೆಯ ಸ್ಟಾರ್ ಕಲಾವಿದರು ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭಹಾರೈಸುವ ಜೊತೆಗೆ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ಹೌದು, ತೆಲುಗು ಪೋಸ್ಟರ್ ಅನ್ನು ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ, ತಮಿಳು ನಟ ಶಿವಕಾರ್ತಿಕೇಯನ್ ಮತ್ತು ಮಲಯಾಳಂನಲ್ಲಿ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಅನೌನ್ಸ್ ಮಾಡಿ ಶಿವಣ್ಣನಿಗೆ ಪ್ರೀತಿಯ ವಿಶ್ ಮಾಡಿದ್ದಾರೆ.
Shiva Rajkumar Birthday: ಶಿವಣ್ಣನಿಗೆ ಅರವತ್ತು, ಮನಸ್ಸಿಗೆ ಮೂವತ್ತು!
ಈ ಬಗ್ಗೆ ಶಿವರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದು ಪೋಸ್ಟರ್ ರಿಲೀಸ್ ಮಾಡಿದ ಪರಭಾಷಾ ಸ್ಟಾರ್ಸ್ ಗೆ ಧನ್ಯವಾದ ತಿಳಿಸಿದ್ದಾರೆ.
'ನನ್ನ ಮುಂದಿನ ಚಿತ್ರ '45', ಪೋಸ್ಟರ್ ನಿಮಗಾಗಿ. ಅರ್ಜುನ್ ಜನ್ಯ ರವರ ಚೊಚ್ಚಲ ನಿರ್ದೇಶನ ಹಾಗು ಎಂ.ರಮೇಶ್ ರೆಡ್ಡಿ ರವರ ನಿರ್ಮಾಣ. ನನ್ನ ಜನ್ಮದಿನದಂದು ಶೀರ್ಷಿಕೆಯನ್ನು ಪ್ರೀತಿಯಿಂದ ಬಹಿರಂಗಪಡಿಸಿದ್ದಕ್ಕಾಗಿ ಅಕ್ಕಿನೇನಿ ನಾಗಾರ್ಜುನ, ಶಿವಕಾರ್ತಿಕೇಯನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರಿಗೆ ಧನ್ಯವಾದಗಳು. ಅಭಿಮಾನಿ ದೇವರುಗಳಿಗೆ ನನ್ನ ಸಮಸ್ಕಾರ' ಎಂದು ಹೇಳಿದ್ದಾರೆ.
Happy Birthday Shivarajkumar: ಶಿವಣ್ಣನಿಗೆ ಆನ್‌ಸ್ಕ್ರೀನ್ ಡಿಫರೆಂಟ್ ರೂಪ ತಂದುಕೊಟ್ಟ ನಿರ್ದೇಶಕರಿವರು
ಅಂದಹಾಗೆ ನಿರ್ಮಾಪಕ ಎಂ ರಮೇಶ್ ರೆಡ್ಡಿ ಈಗಾಗಲೇ ಗಾಳಿಪಟ-2, 100, ನಾತಿಚರಾಮಿ ಸೇರಿದಂತೆ ಅನೇಕ ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಜೊತ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿದ್ದು 45 ಹೇಗೆ ಮೂಡಿಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.