
ಬೆಂಗಳೂರು (ಜು.03): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ದರ್ಶನ್ ಅವರು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದರು ಎನ್ನಲಾಗಿದೆ. ದರ್ಶನ್ ಜೊತೆ ಇನ್ನೂ ಹಲವರು ಬಂಧನಕ್ಕೆ ಒಳಗಾಗಿದ್ದಾರೆ. ದರ್ಶನ್ ಸದ್ಯ ಕೇಂದ್ರ ಕಾರಾಗೃಹದಲ್ಲಿದ್ದಾರೆ. ದರ್ಶನ್ ಕೇಸ್ ಬಗ್ಗೆ ಕೆಲವರು ಅಭಿಪ್ರಾಯ ಹಂಚಿಕೊಂಡರೆ ಇನ್ನೂ ಕೆಲವರು ಮೌನವಹಿಸಿದ್ದಾರೆ. ಇದೀಗ ಸಂಗೀತ ಸಂಯೋಜಕ ವಿ. ಮನೋಹರ್ ಅವರು ದರ್ಶನ್ ಕೇಸ್ ಬಗ್ಗೆ ಮಾತನಾಡಿದ್ದಾರೆ.
ದರ್ಶನ್ ಪ್ರಕರಣವನ್ನು ವಿಧಿಯಾಟ ಅಂತೀನಿ. ಆಕಸ್ಮಿಕವಾಗಿ ಇದು ನಡೆದುಹೋಗಿದೆ. ಸತ್ತವನಂತೂ ಖಂಡಿತ ಒಳ್ಳೆಯವನಲ್ಲ. ಸಾವಿರಾರು ಹೆಣ್ಣು ಮಕ್ಕಳಿಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿರುವ ವಿಕೃತಕಾಮಿ ಎಂದು ಗುಡುಗಿದ್ದಾರೆ. ಅವನ ಪಾಪದ ಕೊಡ ತುಂಬಿದೆ ಅದಕ್ಕೆ ತಕ್ಕ ಶಿಕ್ಷೆ ಆಗಿದೆ. ಆದರೆ ಇದು ಪೊಲೀಸ್‌ನವರಿಂದ ಆಗಬೇಕಿತ್ತು. ಆದರೆ ದರ್ಶನ್ ಸರ್ ಬ್ಯಾಡ್ ಟೈಂ ಆಗಿರಬಹುದು. ಅವರು ಆ ಕಳಂಕದಿಂದ ಹೊರಬಂದು ಮೊದಲಿನಂತೆ ಸಿನಿಮಾದಲ್ಲಿ ಆಕ್ಟ್ ಮಾಡಲಿ ಎಂದು ವಿ. ಮನೋಹರ್ ಮಾತನಾಡಿದ್ದಾರೆ.
ದರ್ಶನ್ ಹೀರೋ ಆಗುವ ಮೊದಲೇನೇ ‘ಜನುಮದ ಜೋಡಿ’ ಚಿತ್ರಕ್ಕೆ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ರಲ್ವಾ ಆವಾಗಲೇ ಪರಿಚಯ ಇತ್ತು. ಆಗಾಗ ಮುಹೂರ್ತ ಕಾರ್ಯಕ್ರಮಗಳಲ್ಲಿ ಸಿಗುತ್ತಾ ಇದ್ವಿ. ದರ್ಶನ್ ಬಹಳ ಸಹೃದಯಿ ಮನುಷ್ಯ. ಅನೇಕರಿಗೆ ಕಷ್ಟದಲ್ಲಿ ಸಹಾಯ ಮಾಡಿದ್ದಾರೆ. ‘ಲಾಲಿಹಾಡು’ ಸಿನಿಮಾ ಸಮಯದಲ್ಲಿ ನನಗೂ ಸಹಾಯ ಮಾಡಿದ್ದರು. ಕೆಲಸ ಮಾಡುವಾಗ ನನಗೆ ಡಯಟ್ ಮಾಡೋದು ಹೇಗೆ? ಯಾವ ವ್ಯಾಯಾಮ ಮಾಡಬೇಕು ಎಲ್ಲಾ ಹೇಳ್ತಿದ್ದರು. ಅದಾದ್ಮೇಲೆ ಮಧ್ಯೆ ಗ್ಯಾಪ್ ಆಯ್ತು ಎಂದು ವಿ.ಮನೋಹರ್ ಮಾತನಾಡಿದ್ದಾರೆ.
ಸಿಟ್ಟನ್ನ ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನ ಕ್ಯಾರೆಕ್ಟರ್ ಮಾಡಬೇಕು: ದರ್ಶನ್‌ಗೆ ಹಂಸಲೇಖ ಕಿವಿಮಾತು
ಇತ್ತೀಚೆಗೆ ಈ ಘಟನೆ ಆಗೋ ಮೂರು ದಿನದ ಮುಂಚೆ ನಾನು ಫೋನ್ ಮಾಡಿ ಕೇಳಿದೆ, ದರ್ಶನ್ ಸರ್ ‘ಲಾಲಿಹಾಡು’ ಆದ್ಮೇಲೆ ನಾವು ಮತ್ತೆ ಮಾಡಿಲ್ಲ ಅಂತ. ಖಂಡಿತ ಜೊತೆಯಲಿ ಕೆಲಸ ಮಾಡೋಣ ಎಂದರು. ಅದಾದ್ಮೇಲೆ ಮೂರು ದಿನದಲ್ಲಿ ಈ ಪ್ರಕರಣ ಆಯ್ತು. ಈ ಕಳಂಕದಿಂದ ಅವರು ಹೊರ ಬರಲಿ ಮತ್ತೆ ಸಿನಿಮಾಗಳಲ್ಲಿ ಮಾಡಲಿ. ಇಂಥಹ ದುರ್ಘಟನೆಗಳು ಯಾವತ್ತೂ ಆಗದೆ ಇರಲಿ ಎಂದು ಆಶಿಸುತ್ತೇನೆ. ದರ್ಶನ್ ಸಿನಿಮಾ ಅಂದರೆ ನೂರಾರು ಜನ ಕೆಲ್ಸ ಮಾಡ್ತಾರೆ. ನೂರಾರು ಜನಕ್ಕೆ ಅನ್ನ ಸಿಗುತ್ತೆ ಎಂದು ದರ್ಶನ್ ಪ್ರಕರಣ ಕುರಿತು ಮನೋಹರ್ ಮಾತನಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.