
ಮುಂಗಾರು ಮಳೆ (Mungaru Male) ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ ಚಿತ್ರ. 2006ರಲ್ಲಿ ತೆರೆಗೆ ಬಂದಿರುವ ಈ ಚಿತ್ರವು ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಅಲ್ಲಿಯವರೆಗೆ ಇದ್ದ ಅನೇಕ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ನಟ ಗಣೇಶ್ (Golden Star Ganesh) ಹಾಗು ನಟಿ ಪೂಜಾ ಗಾಂಧಿ (Pooja Gandhi) ಜೋಡಿ ಈ ಚಿತ್ರದಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದ್ದರು. ಪ್ರೀತಮ್ ಗುಬ್ಬಿ ಕಥೆಗೆ ಯೋಗರಾಜ್ ಭಟ್ (Yogaraj Bhat) ಅವರು ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಬಳಿಕ ಕನ್ನಡ ಚಿತ್ರರಂಗ ಮತ್ತೊಂದು ಹಂತಕ್ಕೆ ಹೋಗಿದೆ ಎನ್ನಬಹುದು.
ಮುಂಗಾರು ಮಳೆ ಸಿನಿಮಾ ಸಕ್ಸಸ್ ಬಗ್ಗೆ ಹೇಳೋದಾದ್ರೆ, ಈ ಸಿನಿಮಾದಲ್ಲಿ ಚಿತ್ರಕಥೆ ಒಂದು ತೂಕವಾದರೆ ಸಂಗೀತ ಹಾಗೂ ಹಾಡುಗಳದ್ದು ಇನ್ನೊಂದು ತೂಕ. ಈಗಲೂ ಕೂಡ ಮುಂಗಾರು ಮಳೆ ಹಾಡುಗಳನ್ನು ಗುನುಗುವವರಿದ್ದಾರೆ, ಅಷ್ಟರಮಟ್ಟಿಗೆ ಮುಂಗಾರು ಮಳೆ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿ ಅಂದು ಇತಿಹಾಸ ಸೃಷ್ಟಿಸಿದ್ದವು. ಇಂದಿಗೂ ಕೂಡ ಆ ಹಾಡನ್ನು ನೆನಪಿಸಿಕೊಳ್ಳುತ್ತಾರೆ ಎಂಬುದು ಅಚ್ಚರಿಯೇ ಹೌದು. ಈ ಕ್ರೆಡಿಟ್ ಮನೋಮೂರ್ತಿ ಅವರಿಗೆ ಸಲ್ಲುತ್ತದೆ.
ಹೆಂಡ್ತಿ ಕಾಟನೂ ತಪ್ಪುತ್ತೆ, ಗರ್ಲ್‌ಫ್ರೆಂದೂ ಬಿಟ್ಟೋಗಲ್ಲ; ಯೋಗರಾಜ್ ಭಟ್ರ ಹೇಳಿದ್ದು ಕೇಳಿ ಸಾಕು!
ಹೌದು, ಮುಂಗಾರು ಮಳೆ ಸಿನಿಮಾದ ಸಂಗೀತ ಹಾಗೂ ಹಾಡುಗಳ ಟ್ಯೂನ್ ಮನೋಮೂರ್ತಿ (Mano Murthy) ಅವರದ್ದು. ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿದ್ದಾರೆ. 'ಅನಿಸುತಿದೆ ಯಾಕೋ ಇಂದು..' ಹಾಡನ್ನು ಹಾಡಿ ಬಾಲಿವುಡ್ ಗಾಯಕ ಸೋನಿ ನಿಗಮ್ ಕನ್ನಡಿಗರ ಮೆಚ್ಚುಗೆ ಗಳಿಸಿಬಿಟ್ಟರು. ಆ ಮೂಲಕ ಅವರು ಮುಂದಿನ ಒಂದು ದಶಕಗಳ ಕಾಲ ಕನ್ನಡ ಚಿತ್ರಗೀತೆಗಳಿಗೆ ಹಾಡುವ ಚಾನ್ಸ್ ಪಡೆದುಕೊಂಡರು. ಬಾಲಿವುಡ್ ಬಿಟ್ಟರೆ ಸೋನು ನಿಗಮ್ ಹೆಚ್ಚು ಹಾಡು ಹಾಡಿದ್ದು ಕನ್ನಡದಲ್ಲಿ ಎಂಬ ಇತಿಹಾಸ ಸೃಷ್ಟಿಗೆ ಈ ಮುಂಗಾರು ಮಳೆ ಕಾರಣ ಆಯ್ತು.
ಇದೀಗ ಮತ್ತೊಂದು ಇತಿಹಾಸ ಸೃಷ್ಟಿಯಾಗಲಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಕಾರಣ, ಮತ್ತೆ ಯೋಗರಾಜ್ ಭಟ್ ಹಾಗೂ ಮನೋಮೂರ್ತಿ ಜೋಡಿ ಸಿನಿಮಾವೊಂದಕ್ಕೆ ಜೊತೆಯಾಗಿದ್ದಾರೆ. ಆ ಸಿನಿಮಾ 'ಕುಲದಲ್ಲಿ ಕೀಳ್ಯಾವುದೋ' ಹೆಸರನ್ನು ಹೊಂದಿದ್ದು, ಈ ಚಿತ್ರವು ಯೋಗರಾಜ್ ಭಟ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿದೆ. ಈ ಬಗ್ಗೆ ಸ್ವತಃ ಮನೋಮೂರ್ತಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಅದೇನು ಹೇಳಿದ್ದಾರೆ ನೋಡಿ ಮನೋಮೂರ್ತಿಯವರು..!
ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ಚಿತ್ರ ಸಾಯಿ ಪಲ್ಲವಿ ಕೈ ತಪ್ಪಿದ್ದು ಹೇಗೆ? ಕಾಣದ ಕೈ ಯಾರದ್ದು?
'ನನ್ನ ಮತ್ತು ಯೋಗರಾಜ್ ಭಟ್ ರವರ ಕಾಂಬಿನೇಷನ್ನಲ್ಲಿ ಕುಲದಲ್ಲಿ ಕೀಳ್ಯಾವುದೋ ಕೆಲಸ ನಡೀತಾ ಇದೆ ಆದರೆ ಅವರು ನಿರ್ದೇಶನ ಮಾಡ್ತಿಲ್ಲ ಆ ಚಿತ್ರಕ್ಕೆ ಅವರ ಕಥೆ ಮತ್ತೆ ಅವರ ಬ್ಯಾನರ್ ನಲ್ಲಿ ಮೂಡಿ ಬರ್ತಾ ಇದೆ' ಎಂದಿದ್ದಾರೆ ಸಂಗೀತ ನಿರ್ದೇಶಕರಾದ ಮನೋ ಮೂರ್ತಿ. ಈ ಒತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿಲ್ಲವಾದರೂ ಅವರ ಬ್ಯಾನರ್ ಮೂಲಕ ಸಿನಿಮಾ ಬರುತ್ತಿದೆ ಎಂದರೆ ಅಲ್ಲಿ ಅವರ ಸ್ಪರ್ಶವಂತೂ ಯಾವುದೋ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ.
ಯೋಗರಾಜ್ ಭಟ್ ಅವರ ಕಥೆಯ ಜೊತೆ ಸಾಹಿತ್ಯವಂತೂ ಖಂಡಿತ ಇರುತ್ತದೆ. ಮನೋಮೂರ್ತಿ ಹಾಗು ಯೋಗರಾಜ್ ಭಟ್ ಸಂಗಮದಲ್ಲಿ ಮುಂಬರಲಿರುವ 'ಕುಲದಲ್ಲಿ ಕೀಳ್ಯಾವುದೋ' ಹೊಸದೊಂದು ಮ್ಯಾಜಿಕ್ ಮಾಡಲಿದೆ ಎಂದೇ ಎಲ್ಲರೂ ಭಾವಿಸಿದ್ದಾರೆ, ಅದಕ್ಕಾಗಿ ಕಾಯುತ್ತಿದ್ದಾರೆ.. ನಿರೀಕ್ಷೆ ಗರಿಗೆದರಿದೆ, ಸಿನಿಮಾ ತೆರೆಗೆ ಬರುವುದನ್ನೇ ಕಾಯಲಾಗುತ್ತಿದೆ.
ಹನುಮಂತ ನಾಟಕ ಮಾಡ್ತಾನೆ ಅನ್ನೋರು ನೋಡ್ಬೇಕಂತೆ ಇದು.. ಏನಂತೆ 'ಬಿಗ್ ಬಾಸ್' ಮ್ಯಾಟರ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.