
2010ರಲ್ಲಿ ನಮ್ ಏರಿಯಾದಲ್ಲಿ ಒಂದು ದಿನ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಅನೀಶ್ ತೇಜಸ್ ಈಗ ನಿರ್ದೇಶನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸೂಪರ್ ಹಿಟ್ 14 ಸಿನಿಮಾಗಳನ್ನು ನೀಡಿರುವ ಅನೀಶ್ ಇದೀಗ ಲವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಮತ್ತು ತಮ್ಮ ಲೈಫ್‌ಸ್ಟೈಲ್ ಬಗ್ಗೆ ಅನೀಶ್ ಮಾತನಾಡಿದ್ದಾರೆ.
'ನಿರ್ದೇಶನ ಮಾಡಲು ಆಸಕ್ತಿ ಮೂಡಿದ್ದೇ ನಾನು ನಟನೆ ಆರಂಭಿಸಿದ್ದಾಗ. ನಮ್ ಏರಿಯಾದಲ್ಲಿ ಒಂದು ದಿನ ಸಿನಿಮಾ ಶೂಟಿಂಗ್ ಸಮಯದಲ್ಲಿ ತಂತ್ರಜ್ಞರ ಜೊತೆ ಹೆಚ್ಚಿನ ಸಮಯ ಕಳೆದಿದ್ದೀನಿ ಆಗ ಸಿನಿಮಾ ಮಾಡುವುದರ ಬಗ್ಗೆ ತಿಳಿದುಕೊಂಡೆ. ನನ್ನ ಮೊದಲ ನಿರ್ದೇಶನ ರಾಮಾರ್ಜುನ ಸಿನಿಮಾ ಮಾಡುವಾಗ ಕ್ರಿಯೇಟಿವ್ ಕಿಕ್ ನೀಡಿತ್ತು. ಪಾತ್ರಗಳನ್ನು ಸೃಷ್ಟಿ ಮಾಡುವುದು ಹಾಗೂ ಇಲ್ಲದ ಪ್ರಪಂಚವನ್ನು ಸೃಷ್ಟಿ ಮಾಡುವುದು ನನಗೆ ತುಂಬಾನೇ ಇಷ್ಟ. ಸಿನಿಮಾ ನಿರ್ದೇಶನ ಮಾಡಿ ವೀಕ್ಷಕರನ್ನು ಮನೋರಂಜಿಸಿದಾಗ ನಮಗೆ ಸಿಗುವ ಖುಷಿ, ಕೆಲಸದ ತೃಪ್ತಿ ನಟನೆಗಿಂತಲೂ ಹೆಚ್ಚು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಅನೀಶ್ ಮಾತನಾಡಿದ್ದಾರೆ.
ಮನೆಯಲ್ಲಿ ಜಾರಿ ಬಿದ್ದು ಕಾಲು ಆಪರೇಷನ್ ಮಾಡಿಕೊಂಡ ಬಿಗ್ ಬಾಸ್ ಶ್ರುತಿ ಪ್ರಕಾಶ್
'ನನ್ನ ಹಿಂದಿನ ಸಿನಿಮಾ ಆರಾಮ್ ಅರವಿಂದ್ ಸ್ವಾಮಿ ಈಗಲೂ ವೀಕ್ಷಕರ ಮನಸ್ಸಿನಲ್ಲಿ ಉಳಿದಿದೆ. ಹಿಂದೆ ತಿರುಗಿ ನೋಡಿದಾಗ, 2010ರಿಂದ ನಾನು ಮಾಡಿರುವುದು ಕೇವಲ 14 ಸಿನಿಮಾಗಳು. ಈ ಸಮಯದಲ್ಲಿ ನಾನು ಇನ್ನೂ ಹೆಚ್ಚು ಮಾಡಬಹುದಿತ್ತು. ಒಂದು ಸಿನಿಮಾ ಮಾಡಲು ಸುಮಾರು ಒಂದು ವರ್ಷ ತೆಗೆದುಕೊಂಡಿದ್ದೀನಿ. ನಮ್ಮ ಹಿತೈಷಿಗಳು, ಅಭಿಮಾನಿಗಳು ಹಾಗೂ ವೀಕ್ಷಕರು ಒಂದು ಸಲಹೆ ಕೊಟ್ಟಿದ್ದಾರೆ..ನಾನು ಬ್ಯಾಕ್ ಟು ಬ್ಯಾಕ್ ಸಿನಿಮಾ ರಿಲೀಸ್‌ಗಳನ್ನು ನೀಡಬೇಕು ಎಂದು ಹೀಗಾಗಿ ಅದರ ಮೇಲೆ ಗಮನ ಹರಿಸುತ್ತಿದ್ದೀನಿ. ಈಗ ನನ್ನ ದಿನಚರಿಯನ್ನು ಬದಲಾಯಿಸಿಕೊಂಡಿದ್ದೀನಿ. ಬೆಳಗ್ಗೆ ಬೇಗ ಎದ್ದು ನನ್ನ ವರ್ಕೌಟ್ ಶುರು ಮಾಡುತ್ತೀನಿ ಅನಂತರ ಕಥೆ ಬರೆಯಲು ಶುರು ಮಾಡುತ್ತೀನಿ. ತಂತ್ರಜ್ಞರು ಮತ್ತು ತಂಡದವರು ರಾತ್ರಿ 8.30 ನಂತರ ಕೆಲಸ ಮಾಡುವುದಿಲ್ಲ ಹೀಗಾಗಿ ಬೇಗ ಮಲಗಿಕೊಂಡು ಬೆಳಗ್ಗೆ 5 ಗಂಟೆಗೆ ಎದ್ದೇಳುತ್ತೀನಿ. ಇದು ನನಗೆ ವರ್ಕ್ ಆಗುತ್ತಿದೆ ಏಕೆಂದರೆ ಬೆಳಗ್ಗೆ 10 ಗಂಟೆ ಅಷ್ಟರಲ್ಲಿ ನನ್ನ ಎಷ್ಟೊ ಕೆಲಸಗಳು ಮುಗಿದಿರುತ್ತದೆ' ಎಂದು ಅನೀಶ್ ಹೇಳಿದ್ದಾರೆ.
ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ; ಬಿಗ್ ಬಾಸ್ ಹನುಮಂತನಿಗೆ ಅವಮಾನಿಸಿದ್ದಕ್ಕೆ ಕ್ಷಮೆಯಾಚಿಸಿದ
'ಈಗ ನಾನು ನಿರ್ದೇಶನ ಮಾಡುತ್ತಿರುವ ಸಿನಿಮಾ ಲವ್. ಪಾತ್ರಧಾರಿಗಳು ಅನುಭವಿಸುವುದು ವೀಕ್ಷಕರಿಗೆ ತಮಾಷೆ ಅನಿಬಹುದು ಆದರೆ ಅವರಿಗೆ ನಿಜಕ್ಕೂ ಕಷ್ಟ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದೀನಿ. ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡಬೇಕು ಎಂದು ಕೆಲಸ ಮಾಡುತ್ತಿದ್ದೀನಿ. ಮೇ ತಿಂಗಳಿನಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಬರಬೇಕು' ಎಂದಿದ್ದಾರೆ ಅನೀಶ್.
ಅಂದು ಪತ್ನಿಗೆ ಕೈ ಹಿಡಿದು ನಡೆಸಿದ್ದು ಶಿವಣ್ಣ, ಇಂದು ಶಕ್ತಿಯಾಗಿ ನಿಂತಿದ್ದು ಗೀತಕ್ಕ; ಭಾವುಕರಾದ ತಾರಾ- ಶ್ರುತಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.