
ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ರಾಜಕಾರಣ ಮುಖ್ಯಮಂತ್ರಿ ಚಂದ್ರು ತಮಗಿಂತ 10 ವರ್ಷ ಕಡಿಮೆ ವಯಸ್ಸಿನವರನ್ನು ಮದುವೆ ಮಾಡಿಕೊಳ್ಳುತ್ತಾರೆ. ಮದುವೆ ಆದ ಮೇಲೆ ಜೀವನ ಹೇಗೆ? ವ್ಯತ್ಯಾಸಗಳು ಬಂದರೆ ಹೇಗೆ? ಈಗ ಪತ್ನಿ ಯಾವ ಸ್ಥಾನದಲ್ಲಿ ಇದ್ದಾರೆ ಎಂದು ಹೆಮ್ಮೆಯಿಂದ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
'1983ರಲ್ಲಿ ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡಿದ್ದೆ. ಅಕೆಗೂ ನನಗೂ 10 ವರ್ಷ ವಯಸ್ಸಿನ ಅಂತರವಿದೆ. ತುಮಕೂರಿನ ಸಿರ ಎಂದ ಊರಿನಲ್ಲಿ ನಮ್ಮಂತೆ ಬಡ ಕುಟುಂಬದ ಹೆಣ್ಣು ಆಕೆ. ಆಗ ಹುಡುಗಿ ಸುಂದರವಾಗಿ ಇರಬೇಕು ಹಿಂಗೇ ಇರಬೇಕು ಅನ್ನೋ ಆಸೆ ಮತ್ತು ಕಲ್ಪನೆ ಕೂಡ ನನಗೆ ಇರಲಿಲ್ಲ. ಅಕ್ಕ ತಂಗಿಯರ ಮದುವೆ ಆದ ಮೇಲೆ ಮದುವೆ ಮಾಡಿ ಅಂತ ಮನೆಯಲ್ಲಿ ಹೇಳಿದ್ದೆ ಅದಿಕ್ಕೆ ಲೇಟ್ ಆಗಿ ಮದುವೆ ಆಗಿದ್ದು. ನನಗೆ 29-30 ವರ್ಷ ಆಗಿತ್ತು ಆ ಸಮಯದಲ್ಲಿ ಮನೆಯವರು ಮುಂದೆ ನಿಂತು ನೋಡಿ ಆಯ್ಕೆ ಮಾಡಿದ ಹುಡುಗಿ ಆಕೆ. ಆಗ ನನ್ನೊಟ್ಟಿಗೆ ರಾಜಾರಾಮ್ ಬಂದಿದ್ದರು...ಬ್ಲಾಂಕ್ ಆಗಿ ಹೇಳಿದೆ ನೋಡಲು ಹುಡುಗಿ ಚಿಕ್ಕ ವಯಸ್ಸಿನವರ ರೀತಿ ಇದ್ದಾರೆ ಅಲ್ಲದೆ ಸಣ್ಣಗಿದ್ದರು. ನನ್ನ ತಂದೆ ತಾಯಿ ಮತ್ತು ಆ ಕಾಲದಲ್ಲಿ ಮದುವೆ ಮಾಡಿಕೊಂಡವರಲ್ಲಿ ಸುಮಾರು 10 ವರ್ಷ ವಯಸ್ಸಿನ ಅಂತವಿತ್ತು.ಅಯ್ಯೋ ನಾನು ತಪ್ಪು ಮಾಡುತ್ತಿದ್ದೀನಿ 10 ವರ್ಷ ವ್ಯತ್ಯಾಸ ಇದೆ, ಸಿನಿಮಾ ಅಂದ್ಮೇಲೆ ಕೆಲಸ ಯಾವ ಗಳಿಗೆಯಲ್ಲಿ ಬೇಕಿದ್ದರೂ ಹೋಗುತ್ತದೆ ಅನ್ನೋ ಯೋಚನೆ ನಾನು ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ. ಸಿನಿಮಾ ಗ್ಯಾರಂಟಿ ಅಲ್ಲ. ನಾಟಕದವರು ಅಂದ್ರೆ ಹಲವು ಅನುಮಾನಗಳು ಇರುತ್ತದೆ ಇವರಿಗೆ ಯಾವ ಯಾವ ಸಂಬಂಧಗಳು ಇರುತ್ತದೋ ಏನೋ ಅಂತ ಹೀಗಾಗಿ ಹುಡುಗಿ ಮತ್ತು ಅವರ ಮನೆಯವರಿಗೆ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಸಿ ಬಿಡಿ ಎಂದು ಹೇಳಿದ್ದೆ' ಎಂದು ರ್ಯಾಪಿಡ್ ರಶ್ಮಿ ಜೊತೆ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ.
ಯಶ್ ಮಗಳಿಗೆ ಕೊಟ್ಟ ಕಲಘಟಗಿ ತೊಟ್ಟಿಲಿನಲ್ಲಿ ಅಭಿಷೇಕ್ ಮಗನ ನಾಮಕರಣ; ಅಂಬರೀಶ್ ಆಸೆ ಈಡೇರಿಸಿದ್ರಾ?
'ಮನೆಯವರು ಒಪ್ಪಿಕೊಂಡಿರುವುದಕ್ಕೆ ನನಗೂ ಒಪ್ಪಿಗೆ ಇತ್ತು ನನ್ನ ಕಡೆಯಿಂದ ಇಷ್ಟು ಹೇಳಿ ಅದರ ಮೇಲೂ ಒಪ್ಪಿಕೊಳ್ಳುತ್ತೀನಿ ಅಂದ್ರೆ ಅವರ ಇಷ್ಟ ಅಂದೆ. ಅವರ ಮನೆಗೆ ಹೋಗಿದ್ದಾಗ ನನಗೆ ಉಪ್ಪಿಟ್ಟು ಮಾಡಿಕೊಟ್ಟಿದ್ದರು. ನನಗೆ ಉಪ್ಪಿಟ್ಟು ತುಂಬಾನೇ ಇಷ್ಟ....ಅದನ್ನು ಊಟದ ರೀತಿಯಲ್ಲಿ ತಿನ್ನುತ್ತೀನಿ. ಮೊದಲು ಉಪ್ಪಿಟ್ಟು, ಆಮೇಲೆ ತುಪ್ಪದ ಜೊತೆ, ಆಮೇಲೆ ಮೊಸರು ಜೊತೆ ಆಮೇಲೆ ಉಪ್ಪಿಕಾಯಿ ಜೊತೆ ಹೀಗೆ......ಇವತ್ತಿಗೂ ಮೂರು ದಿನ ಬೇಕಿದ್ದರೂ ಕೂಡ ಉಪ್ಪಿಟು ತಿನ್ನುತ್ತೀನಿ. ನನ್ನ ಹೆಂಡತಿಯನ್ನು ನಾನು ನೋಡಿದ್ದು ಒಂದೇ ಒಂದು ಅರ್ಧ ಭಾಗ ಮಾತ್ ಒಂದು ಸಲ ತೋರಿಸಿದರು ಮತ್ತೊಂದು ಸಲ ತುಪ್ಪ ಹಾಕಲು ಬಂದಿದ್ದು. ನನಗೆ ಪೂರ್ತಿ ಮುಖ ಕಾಣಿಸಿರಲಿಲ್ಲ ಆದರೆ ಆಕೆ ಮಾತ್ರ ಕಿಟಕಿಯಿಂದ ನನ್ನನ್ನು ಸಂಪೂರ್ಣವಾಗಿ ನೋಡಿಕೊಂಡಿದ್ದಾರೆ. ಮದುವೆ ಮಾಡಿಕೊಂಡು ಈಗ 41 ವರ್ಷ ಆಗಿದೆ ತುಂಬಾ ಸಂತೋಷವಾಗಿ ಇದ್ದೀವಿ' ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಡ್ರೋನ್ ಪ್ರತಾಪ್ ರಚಿತಾ ರಾಮ್ ಮೇಲೆ ಕಣ್ಣು ಹಾಕಿದ್ದಾನೆ, ನನ್ನನ್ನು ಪೆದ್ದನಾಗಿ ಮಾಡ್ಬಿಟ್ಟ: ರವಿಚಂದ್ರನ್
'ಅಪ್ಪಿತಪ್ಪಿ ಅಂತ ಆಗಿದ್ದರೆ ಒಂದೆರಡು ಸಲ ಕಠಿಣವಾದ ಜಗಳ ಆಗಿರಬಹುದು. ಕಠಿಣ ಅಂದ್ರೆ ಒಂದೆರಡು ದಿನ ಮಾತನಾಡದೆ ಇರುವುದು. ಅರೇಂಜ್ಡ್ ಮ್ಯಾರೇಜ್‌ನಲ್ಲಿ ಗಂಡ ಹೆಂಡತಿ ಅಂದ್ಮೇಲೆ IQ ವ್ಯತ್ಯಾಸ ಇರುತ್ತದೆ ಏಕೆಂದರೆ ನಾನು Bsc ಮುಗಿಸಿ LLB ಓದುತ್ತಿದೆ ಹಾಗೆ ಸಿನಿಮಾ ನಟನಾಗಿದ್ದೆ ಸ್ವಲ್ಪ ಹೆಸರು ಮಾಡಿದ್ದೆ. ಆಕೆ ಓದಿರುವುದು ಕಡಿಮೆ ಇರುತ್ತದೆ. ಮದುವೆ ಆದ ಮೇಲೆ ಬೆಂಗಳೂರಿಗೆ ಮೊದಲ ಸಲ ಬಂದಿರುವುದು ಪ್ರಪಂಚದ ಜ್ಞಾನ ತುಂಬಾ ಕಡಿಮೆ. ಆ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಹೇಗೆ? ನಾವಿಬ್ಬರೂ ಯಾವುತ್ತೂ ನೋಡೇ ಇಲ್ಲ ಆದರೆ ಒಟ್ಟಿಗೆ ಇರಬೇಕು. ಇವತ್ತು ನನ್ನ ಎಲ್ಲಾ ವ್ಯವಹಾರವನ್ನು ನೋಡಿಕೊಳ್ಳುವ ಮಟ್ಟಕ್ಕೆ ಹೆಂಡತಿ ಬೆಳೆದಿದ್ದಾರೆ. ಭಾಷಣ ಮಾಡುತ್ತಾರೆ ರಾಜಕಾರಣಿ ಅದ್ರೂ ಸಿನಿಮಾ ಮಾಡಿದ್ರು ಸೀರಿಯಲ್‌ನಲ್ಲಿ ಮಾಡಿದ್ರು ಈಗ ಬ್ಯಾಂಕ್‌ನ ಡೈರೆಕ್ಟರ್ ಹಾಗೂ ಸಮಾಜದ ಅಧ್ಯಕ್ಷರು ಆಗಿದ್ದಾರೆ' ಎಂದಿದ್ದಾರೆ ಮುಖ್ಯಮಂತ್ರಿ ಚಂದ್ರು.
ಮನೆಯಲ್ಲಿ ತಂದೆಯ ಆತ್ಮ ಓಡಾಟಕ್ಕೆ ಭಯಪಟ್ಟ ನಟಿ ಅದ್ವಿತಿ-ಅಶ್ವಿತಿ; ನಾಯಿ ಬಳಿ ಪೌಡರ್ ವಾಸನೆ ಬಂದಿದ್ದು ಯಾಕೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.