ಕನಸು,ನನಸು,ಜೀವನ: MRF ಮೆಚ್ಚಿದ ಸಿನಿಪ್ರಿಯರು

Published : Aug 04, 2021, 05:42 PM IST
ಕನಸು,ನನಸು,ಜೀವನ: MRF ಮೆಚ್ಚಿದ ಸಿನಿಪ್ರಿಯರು

ಸಾರಾಂಶ

ಕನಸು,ನನಸು,ಭೂತಕಾಲ,ಭವಿಷ್ಯ ಕಾಲ ನಡುವೆ ನಡೆಯುವ ಸಮಾಗಮ. ನಾಳೆ ಏನೆಂದು ಯೋಚಿಸುವ ಜನರ ನಡುವೆ, ನಾಳೆ ಚಿಂತೆ ಏಕೆ ? ಚಿಂತಿಸಿದರೆ ಏನಾಗುವುದು ಎಂದು ಯುವ ನಿರ್ದೇಶಕ ಕ್ರಿತ್ವಿಕ್ ಕುತೂಹಲಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ.

ಕನಸು,ನನಸು,ಜೀವನ ಇತ್ಯಾದಿಗಳನ್ನ ಇಟ್ಟುಕೊಂಡು ಬಿಡುಗಡೆ ಆಗಿರುವ ಎಂ ಆರ್ ಎಫ್ ಅನ್ನೋ ಚಿತ್ರ ಚಿತ್ರಪ್ರೇಮಿಗಳ ಗಮನ ಸೆಳೆಯುತ್ತಿದೆ.

ತಮ್ಮ ವಿಶಿಷ್ಟ ಕಾರ್ಯಕ್ರಮ ಮತ್ತು ಸಂದರ್ಶನಗಳಿಂದ ಡಿಜಿಟಲ್ ಲೋಕದಲ್ಲಿ ಹೆಸರು ಮಾಡಿರುವ ಪತ್ರಕರ್ತ ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿರುವ ಈ ಕಿರು ಚಿತ್ರ  ಎಂ.ಆರ್. ಎಫ್ ಎಂಬ ಹೆಸರಿನಲ್ಲೇ ವಿಷಯಗಳನ್ನು ಬಿಗಿ ಹಿಡಿದು ಕೂರಿಸುವಂತೆ ಮಾಡಿದೆ.  ಅನಿರೀಕ್ಷಿತ, ಸುಳಿವು ತಿರುವುಗಳಿಂದ ಕೂಡಿರುವ ಕಿರು ಚಿತ್ರವೆಂದು ಸಿನಿಮಾದ ಟಿಸರ್ ನೋಡಿದರೆ ತಿಳಿಯುತ್ತದೆ.

ಕನಸು,ನನಸು,ಭೂತಕಾಲ,ಭವಿಷ್ಯ ಕಾಲ ನಡುವೆ ನಡೆಯುವ ಸಮಾಗಮ. ನಾಳೆ ಏನೆಂದು ಯೋಚಿಸುವ ಜನರ ನಡುವೆ, ನಾಳೆ ಚಿಂತೆ ಏಕೆ ? ಚಿಂತಿಸಿದರೆ ಏನಾಗುವುದು ಎಂದು ಯುವ ನಿರ್ದೇಶಕ ಕ್ರಿತ್ವಿಕ್ ಕುತೂಹಲಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ. ವರ ಶಾಪವಾದರೆ ಆಗುವ ಪರಿಣಾಮವೇನು, ಆಸೆ ದುರಾಸೆಗೆ ತಿರುಗಿದರೆ ಗಳಿಸುವುದಾದರು ಏನು ? ಎಂದು ಹೇಳುತ್ತಾ ಸಾಗುವ ಕಥೆಯಲ್ಲಿ ಹೊಸ ನಾಯಕ ನಟ ಮುಕುಂದ ರಾಮಸ್ವಾಮಿ ನಟನೆಯಲ್ಲಿ ಮಿಂಚುವ ಜೊತೆಗೆ ನಿರ್ಮಾಣವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

ಸ್ಟಾರ್‌ ಸುವರ್ಣದಲ್ಲಿ ಸೀತಾರಾಮ್‌ ಬಿನೋಯ್‌ ಬಿಡುಗಡೆ

ಇನ್ನು ಛಾಯಾಗ್ರಹಣ,ಸಂಗೀತ,ಸಂಕಲನ ಎಲ್ಲವೂ ವೃತ್ತಿಪರರ ಕೈಚಳಕದಿಂದ ಅಮೋಘವಾಗಿ ಮೂಡಿಬಂದಿದೆ. ಕನ್ನಡಿಯಲ್ಲಿ ಬಿಂಬದ ಹೊರತು ನಾಳಿನ ಭವಿಷ್ಯ ಕಾಣುವ ಹಾಗಾದರೆ, ಆಗುವ ಪರಿಣಾಮ ನಮ್ಮ ಕಲ್ಪನೆಗೂ ಮೀರಿದ್ದು. ಇನ್ನು  ಮೇಕಿಂಗ್ ಕೂಡ ಅಷ್ಟೆ ಚೆನ್ನಾಗಿದೆ.

ಒಂದು ಬಾರಿ ನೋಡಿ ಅರ್ಥವಾಗದೆ ಎರಡನೇ ಬಾರಿ ನೋಡುವ ಹಾಗೆ ಮಾಡುವಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತದೆ. ಹೊಸಬರ ಈ ಪ್ರಾಮಾಣಿಕ ಪ್ರಯತ್ನವನ್ನು ಕರ್ನಾಟಕದ ಚಿತ್ರರಸಿಕರು ನೋಡಿ ಬೆನ್ನು ತಟ್ಟಬೇಕಾದ ಅವಶ್ಯಕತೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?