ಧ್ರುವ ಸರ್ಜಾ ಚಿತ್ರದ ಮುಹೂರ್ತಕ್ಕೆ ರವಿಚಂದ್ರನ್‌ ಅತಿಥಿ

By Kannadaprabha News  |  First Published Aug 4, 2021, 11:25 AM IST
  • ಧ್ರುವ ಸರ್ಜಾ ಚಿತ್ರದ ಮುಹೂರ್ತಕ್ಕೆ ರವಿಚಂದ್ರನ್‌ ಅತಿಥಿ
  • ಜಿಸ್ಟಾರ್‌ ರವಿಚಂದ್ರನ್‌ ಅವರು ಮುಖ್ಯ ಅತಿಥಿ

ನಟ ಧ್ರುವ ಸರ್ಜಾ ಅವರ ಹೊಸ ಚಿತ್ರಕ್ಕೆ ಆಗಸ್ಟ್‌ 15ರಂದು ಅದ್ದೂರಿಯಾಗಿ ಮುಹೂರ್ತ ನಡೆಯಲಿದೆ. ಎ ಪಿ ಅರ್ಜುನ್‌ ನಿರ್ದೇಶನದ, ಉದಯ್‌ ಕೆ ಮಹ್ತಾ ನಿರ್ಮಾಣದ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.

ಈ ಸಂದರ್ಭದಲ್ಲಿ ರವಿಚಂದ್ರನ್‌, ಧ್ರುವ ಸರ್ಜಾ ಹಾಗೂ ಉದಯ್‌ ಮೆಹ್ತಾ ಜತೆಯಾಗಿ ತೆಗೆಸಿಕೊಂಡಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೋ ನೋಡಿದವರು ಧ್ರುವ ಸರ್ಜಾ ಚಿತ್ರದಲ್ಲಿ ಕ್ರೇಜಿಸ್ಟಾರ್‌ ನಟಿಸಲಿದ್ದಾರೆಯೇ ಎನ್ನುವ ಗುಮಾನಿ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿ 5 ಭಾಷೆ ಸಿನಿಮಾಗಳಲ್ಲಿ ಧ್ರುವ ನಟಿಸುತ್ತಿದ್ದು ಚಿತ್ರದ ಫಸ್ಟ್‌ ಲುಕ್‌ ಕೂಡ ಅದೇ ದಿನ ರಿವೀಲ್ ಮಾಡಲು ನಿರ್ಧರಿಸಲಾಗಿದೆ.

Tap to resize

Latest Videos

undefined

ಧ್ರುವ ಸರ್ಜಾಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಧ್ರುವ ಸರ್ಜಾ ಮತ್ತು ನಿರ್ದೇಶಕ ಎಪಿ ಆರ್ಜುನ್ ಬರೋಬ್ಬರಿ 9 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದು, ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಿದ್ದಾರೆ. ಕ್ಯೂಟ್ ಲವ್‌ ಸ್ಟೋರಿ ಹಾಗೂ ಭರ್ಜರಿ ಡೈಲಾಗ್‌ ಹೊಂದಿದೆ ಈ ಸಿನಿಮಾ.

click me!