ಅಣ್ಣಾವ್ರು ಅಪ್ಪು ಊಟ ಮಾಡುವ ಅಪರೂಪದ ಫೋಟೋ ಹಂಚಿಕೊಂಡ ಜಮೀರ್ ಅಹ್ಮದ್‌!

Published : Sep 28, 2024, 03:16 PM ISTUpdated : Sep 28, 2024, 03:17 PM IST
ಅಣ್ಣಾವ್ರು ಅಪ್ಪು ಊಟ ಮಾಡುವ ಅಪರೂಪದ ಫೋಟೋ ಹಂಚಿಕೊಂಡ ಜಮೀರ್ ಅಹ್ಮದ್‌!

ಸಾರಾಂಶ

ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರು ಒಟ್ಟಿಗೆ ಊಟ ಮಾಡುತ್ತಿರುವ ಅಪರೂಪದ ಫೋಟೋವನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕೂಡ ಇದ್ದಾರೆ. ಯಾವ ಸಂದರ್ಭದಲ್ಲಿ ತೆಗೆದ ಫೋಟೋ ಎಂಬುದು ತಿಳಿದಿಲ್ಲ.

ಬೆಂಗಳೂರು (ಸೆ.28): ಕನ್ನಡ ಚಿತ್ರರಂಗದ ಧ್ರುವತಾರೆ ವರನಟ ಡಾ ರಾಜ್ ಕುಮಾರ್ ಮತ್ತು ನಟ ಪುನೀತ್ ರಾಜ್‌ ಕುಮಾರ್ ಅವರು ತಮ್ಮ ಮನೆಯಲ್ಲಿ ಊಟ ಮಾಡುತ್ತಿರುವ ಅಪರೂಪದ ಫೋಟೋವನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಹಂಚಿಕೊಂಡಿದ್ದಾರೆ. ಜೊತೆಗೆ ರಾಘವೇಂದ್ರ ರಾಜ್ ಕುಮಾರ್ ಕೂಡ ಇದ್ದು, ಯಾವಾಗ ತೆಗೆದಿರುವ ಫೋಟೋ ಎಂದು ಜಮೀರ್ ಬಹಿರಂಗಪಡಿಸಿಲ್ಲ.

ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್ಐ‌ಟಿ ದಿಢೀರ್ ದಾಳಿ: ಮಹತ್ವದ ದಾಖಲೆ ವಶಕ್ಕೆ

ಫೋಟೋದಲ್ಲಿ ಸ್ವತಃ ಊಟ ಬಡಿಸುತ್ತಿರುವುದು ಕಾಣಿಸುತ್ತಿದೆ. ಚಿಕನ್, ಮಟನ್ , ಕಬಾಬ್, ಮುದ್ದೆ ಸಲಾಡ್‌ಗಳು ಟೇಬಲ್ ತುಂಬಾ ಕಾಣುತ್ತಿದೆ. ಯಾವ ಫಂಕ್ಷನ್, ಸಂದರ್ಭಯಾವುದು ಎಂಬುದನ್ನು ಜಮೀರ್ ಬಹಿರಂಗಪಡಿಸಿಲ್ಲ.

ಹೊಸೂರು ಟಾಟಾ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ, ಬೆಂಕಿ ನಂದಿಸಲು ಹರಸಾಹಸ!

ಕನ್ನಡ ಚಿತ್ರರಂಗದ ಲೆಜೆಂಡ್ಸ್ ದಿವಂಗತ ಡಾ.ರಾಜಕುಮಾರ್ ಜಿ ಮತ್ತು ದಿವಂಗತ ಶ್ರೀ.ಪುನೀತ್ ಕುಮಾರ್ ಅವರೊಂದಿಗೆ ಮರೆಯಲಾಗದ ಕೆಲವು ಸುವರ್ಣ ನೆನಪುಳು ಎಂದು ಎರಡು ಫೋಟೋವನ್ನು ಪೋಸ್ಟ್ ಮಾಡಿ ಕ್ಯಾಪ್ಷನ್ ಬರೆದಿದ್ದಾರೆ.  ಇಂದು ಮದ್ಯಾಹ್ನ 12 ಗಂಟೆಗೆ ಪೋಸ್ಟ್ ಮಾಡಿರುವ ಈ ಫೋಟೋ ಇಲ್ಲಿವರೆಗೆ 10 ಸಾವಿರಕ್ಕೂ ಹೆಚ್ಚು ವೀಕ್ಷಣೆ  ಪಡೆದಿದೆ. ಆದರೆ ಹಲವು ಮಂದಿ ಕಮೆಂಟ್‌ ಮಾಡಿ ನೀವು ಕನ್ನಡಲ್ಲೇ ಅಡಿಬರಹ ಬರೆಯುತ್ತಿದ್ದರೆ ಒಳ್ಳೆಯದಿತ್ತು ಎಂದು ಕಮೆಂಟ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!