ದೈವ ಸನ್ನಿಧಿಯಲ್ಲಿ ರಿಷಬ್ ಶೆಟ್ಟಿ ದಂಪತಿ: ಕೋಲದ ವಿಡಿಯೋ ಹಂಚಿಕೊಂಡ ಕಾಂತಾರ ನಟ!

By Govindaraj SFirst Published Jan 15, 2024, 2:30 AM IST
Highlights

ಮಂಗಳೂರು ಹೊರ ವಲಯದ ಗುರುಪುರ ವಜ್ರದೇಹಿ ಮಠದ ದೈವ ಸನ್ನಿಧಿಯಲ್ಲಿ ನಡೆದ ನೇಮೋತ್ಸವದಲ್ಲಿ ಪತ್ನಿ ಪ್ರಗತಿ ಶೆಟ್ಟಿ ಜೊತೆ  ರಿಷಬ್​ ಶೆಟ್ಟಿ ಕುಟುಂಬ  ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದಾರೆ. 

‘ಕಾಂತಾರ’ ಸಿನಿಮಾ ಮೂಲಕ ಸುದ್ದಿ ಮಾಡಿದ್ದ ಡಿವೈನ್ ಸ್ಟಾರ್ ರಿಷಬ್​ ಶೆಟ್ಟಿ ಕಾಂತಾರ 2 ಸಿನಿಮಾದ ಮೂಲಕ ಇದೀಗ ಮತ್ತೊಮ್ಮೆ ಸುದ್ದಿ ಮಾಡುತ್ತಿದ್ದಾರೆ. ಕೇವಲ ನಟ ಮಾತ್ರ ಅಲ್ಲ ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ, ತುಳು ನಾಡಿನ ಸಂಸ್ಕೃತಿ ಮೇಲೆ ಅಪಾರ ನಂಬಿಕೆ ಕೂಡ ಇಟ್ಟಿದ್ದಾರೆ. ಅಲ್ಲದೆ ಅದರಲ್ಲಿ ಬಹುತೇಕ ಅಂಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿ ಮಾದರಿಯಾಗಿದ್ದಾರೆ. ಇದೀಗ ಮಂಗಳೂರು ಹೊರ ವಲಯದ ಗುರುಪುರ ವಜ್ರದೇಹಿ ಮಠದ ದೈವ ಸನ್ನಿಧಿಯಲ್ಲಿ ನಡೆದ ನೇಮೋತ್ಸವದಲ್ಲಿ ಪತ್ನಿ ಪ್ರಗತಿ ಶೆಟ್ಟಿ ಜೊತೆ ರಿಷಬ್​ ಶೆಟ್ಟಿ ಕುಟುಂಬ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದಾರೆ.

‘ದೈವದ ಸನ್ನಿದಿಯಲ್ಲಿ, ಆಶೀರ್ವಾದ ಪಡೆದ ಕ್ಷಣಗಳು…’ ಎಂಬ ಶೀರ್ಷಿಕೆಯಡಿ ಈ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಹೊಸ ವರ್ಷಾರಂಭದ ಸಂದರ್ಭದಲ್ಲೂ ನಟ-ನಿರ್ದೇಶಕ ರಿಷಬ್​ ಶೆಟ್ಟಿ ನೇಮೋತ್ಸವದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ವಜ್ರದೇಹಿ ಮಠದ ಜಾತ್ರೆಯ ಸಂದರ್ಭ ಮೈಸಂದಾಯ ಮತ್ತು ಲೆಕ್ಕೇಸಿರಿ ದೈವಗಳ ನೇಮೋತ್ಸವ ನಡೆದಿತ್ತು. ಕೋಲದಲ್ಲಿ ಭಾಗಿಯಾಗಿದ್ದ ನಟನಿಗೆ ಮೈಸಂದಾಯ ದೈವ ಆಶೀರ್ವಾದ ಮಾಡಿತ್ತು. ʻಭಯ ಪಡಬೇಡ ನಾನಿದ್ದೇನೆʼ ಎಂದು ರಿಷಬ್ ಶೆಟ್ಟಿಗೆ ದೈವ ಅಭಯ ನೀಡಿದೆ.
 


ರಿಷಬ್ ಶೆಟ್ಟಿಯನ್ನು ಮೈಸಂದಾಯ ದೈವ ಆಲಂಗಿಸಿ, ಕಾಂತಾರ ರೀತಿಯಲ್ಲೇ ರಿಷಬ್‌ಗೆ ಆಶೀರ್ವಾದ ನೀಡಿದೆ. ದೈವದ ಅಭಯ ಪಡೆಯಲೆಂದೇ ರಿಷಬ್‌ ಮಂಗಳೂರು ಗುರುಪುರ ವಜ್ರದೇಹಿ ಮಠದ ದೈವ ಕೋಲಕ್ಕೆ ಆಗಮಿಸಿದ್ದರು. ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿ ದೈವದ ಅಭಯ ಪಡೆದಿದ್ದಾರೆ. ಏನೇ ಎದುರಾದರೂ ಕುಗ್ಗಬೇಡ ಎಂದು ರಿಷಬ್‌ ಅವರಿಗೆ ಸೂಚನೆ ಕೊಟ್ಟಿದೆ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ಆಶೀರ್ವದಿಸಿದೆ. ದೈವಾರಾಧನೆಯ ಕಟ್ಟುಪಾಡು ಅಧ್ಯಾಯನ ಮಾಡಿಕೊಂಡು, ದೈವದ ನೆಲೆಯನ್ನ ಅರಿತುಕೊಂಡು ಸಮಾಜಕ್ಕೆ ತೋರಿಸಬೇಕು ಎಂಬ ಇಚ್ಛೆಯಿಂದ ರಿಷಬ್‌ ಕೋಲಕ್ಕೆ ಆಗಮಿಸಿದ್ದಾರೆ.

ಇತ್ತೀಚೆಗಷ್ಟೇ ರಿಷಬ್​ ಶೆಟ್ಟಿ ಜನಪ್ರಿಯ ಸಿನಿಮಾ ನಿರ್ದೇಶಕ ಅಶುತೋಷ್ ಗೋವಾರಿಕರ್​ ಜೊತೆ ಕಾಣಿಸಿಕೊಂಡಿದ್ದರು. ಶುಕ್ರವಾರ ಮುಂಬೈನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂದಿನ ಪ್ರೊಜೆಕ್ಟ್​ ಕುರಿತು ಹಲವು ಊಹಾಪೋಹಗಳೆದ್ದಿವೆ. ಈ ಇಬ್ಬರ ಹೆಸರು ಕಳೆದ ಕೆಲ ಸಮಯದಿಂದ ಕೇಳಿಬರುತ್ತಿದೆ. ಒಟ್ಟಿಗೆ ಕಾಣಿಸಿಕೊಂಡ ನಂತರವಂತೂ ಇಬ್ಬರು ಸಿನಿಮಾ ಮಾಡಲಿದ್ದಾರೆಂದೇ ಹೇಳಲಾಯ್ತು. ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ಸೋಷಿಯಲ್​ ಮೀಡಿಯಾ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದರು. ಚಿತ್ರದ ಬಗ್ಗೆ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೆಟ್ ಮಾಡಿದ ಕಾಂತಾರ ಪ್ರೀಕ್ವೆಲ್ ಟೀಸರ್: 24 ಗಂಟೆಯಲ್ಲಿ ಎಷ್ಟು ವಿವ್ಸ್?

ಇನ್ನು ‘ಕಾಂತಾರ’ ಸಿನಿಮಾ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಚಿತ್ರ ರಿಲೀಸ್ ಆದ್ಮೇಲೆ 400 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಸೌಂಡ್ ಮಾಡಿತ್ತು. ‘ಕಾಂತಾರ’ ಭಾಗ 1ಕ್ಕೆ ಕಥೆ ರೆಡಿಯಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಇತ್ತೀಚಿಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆದಿತ್ತು.

click me!