
ಫೆ.14ರಂದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ತಯಾರಿ ಆರಂಭವಾಗಿದ್ದು, ತಮ್ಮ ಮನೆತನದ ಶಾಸ್ತ್ರ ಸಂಪ್ರದಾಯದ ಬಗ್ಗೆ ಮಿಲನಾ ಹಂಚಿಕೊಂಡಿದ್ದಾರೆ.
'ಮದುವೆ ಶಾಸ್ತ್ರಗಳು ಆರಂಭವಾಗಿವೆ. ನಮ್ಮ ಕುಟುಂಬದಲ್ಲಿ ಮದುವೆ ಕಾರ್ಯಕ್ರಮ ಆರಂಭವಾಗುವ ಮುನ್ನ ಮಾಡುವ ಶಾಸ್ತ್ರವಿದು,' ಎಂದು ಮಿಲನಾ ಬರೆದು ಕೊಂಡಿದ್ದಾರೆ. ಮೂರು ಬಾಳೆಎಲೆ ಹಾಸಿ ದೇವರಿಗೆ ಪೂಜೆ ಸಾಮಾಗ್ರಿ ಬುತ್ತಿಯನ್ನು ನೀಡಿಲಾಗಿದೆ. ಪೂಜೆಯ ಹೆಸರು ಏನೆಂದು ತಿಳಿದಿಲ್ಲವಾದರೂ ನೋಟಕ್ಕೆ ಇದು ದಾಸಪ್ಪನ ಪೂಜೆ ಅಥವಾ ದೇವರಿಗೆ ಬೆಲ್ಲದನ್ನ ಸಮರ್ಪಣೆ ಮಾಡುತ್ತಿರುವುದು ಎನ್ನಬಹುದು.
"
ಸಾಂಪ್ರದಾಯಿಕ ಉಡುಗೆ ಅಲ್ಲದಿದ್ದರೂ ಮಿಲನಾ ತೊಟ್ಟ ಉಡುಗೆಯಲ್ಲಿ ಸುಂದರವಾಗಿ ಕಾಣಿಸುತ್ತಿರುವ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ತಮ್ಮ ಮದುವೆಗೆ ಕೃಷ್ಣ ಹಾಗೂ ಮಿಲನಾ ಡಿಸೈನರ್ ಉಡುಪುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು ಇಬ್ಬರ ಕುಟುಂಬದವರು ಕಂಚಿಯಲ್ಲಿ ಸೀರೆ ಶಾಪಿಂಗ್ ಮಾಡಿದ್ದಾರೆ. ಶೂಟಿಂಗ್ ಮಾಡುತ್ತಲೇ ಇಬ್ಬರೂ ತಮ್ಮ ಮದುವೆ ಅಮಂತ್ರಣ ಪತ್ರಿಕೆಯನ್ನು ಹಂಚಿದ್ದಾರೆ. ಮದುವೆ ಮಂಟಪದ ವಿನ್ಯಾಸ ಹೇಗಿರಲಿದೆ, ಯಾರೆಲ್ಲಾ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.
ಮಿಲನಾ ನಾಗರಾಜ್ ಮುಂದೆ ಮಿಲನಾ ಕೃಷ್ಣ ಆಗ್ತಾರಾ..?
ಅಂದ ಹಾಗೆ ಲವ್ ಮಾಕ್ಟೈಲ್ ಖ್ಯಾತಿಯ ಈ ಜೋಡಿ ಫೆಬ್ರವರಿ 14ಕ್ಕೆ ಸಪ್ತಪದಿ ತುಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.