ಟ್ರೋಲ್ ಎಂಜಾಯ್ ಮಾಡುತ್ತಿದ್ದೆ,ಕಾಂಟ್ರೋವರ್ಸಿ ಇಲ್ಲ ಅಂದ್ರೆ ಏನೋ ಮಿಸ್ ಆದ್ಹಂಗೆ: ರಶ್ಮಿಕಾ ಮಂದಣ್ಣ

Suvarna News   | Asianet News
Published : Feb 08, 2021, 10:01 AM IST
ಟ್ರೋಲ್ ಎಂಜಾಯ್ ಮಾಡುತ್ತಿದ್ದೆ,ಕಾಂಟ್ರೋವರ್ಸಿ ಇಲ್ಲ ಅಂದ್ರೆ ಏನೋ ಮಿಸ್ ಆದ್ಹಂಗೆ: ರಶ್ಮಿಕಾ ಮಂದಣ್ಣ

ಸಾರಾಂಶ

ಪೊಗರು ಸಿನಿಮಾ ಪ್ರಚಾರದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ರಶ್ಮಿಕಾ ಮಂದಣ್ಣ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿರುವ ಟ್ರೋಲ್‌ಗಳ ಬಗ್ಗೆ ಹಾಗೂ ಇದ್ದಕ್ಕಿದ್ದಂತೆ ಅವನ್ನು ನಿಲ್ಲಿಸಿರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. 

ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಅತಿ ಕಡಿಮೆ ಅವಧಿಯಲ್ಲಿಯೇ ಇಡೀ ಭಾರತೀಯ ಚಿತ್ರರಂಗವೇ ತನ್ನ ಕಡೆ ಮುಖ ಮಾಡಿ ನೋಡುವಂತೆ ಮಾಡಿದ ಪ್ರತಿಭಾನ್ವಿತೆ . ಮೊದಲ ಚಿತ್ರದ ಯಶಸ್ವಿ ಬೆನ್ನಲ್ಲೇ ಕರುನಾಡ ಕ್ರಶ್‌ ಎಂಬ ಕಿರೀಟ ಗಳಿಸಿಕೊಂಡ ರಶ್ಮಿಕಾ, ವೈಯಕ್ತಿಕ ಜೀವನದಲ್ಲಿ ಎಡವಿದ ನಂತರ ಸೋಷಿಯಲ್ ಮೀಡಿಯಾದಲ್ಲಿ  ಊಹಿಸಲಾಗದ ರೀತಿಯಲ್ಲಿ ಟ್ರೋಲ್ ಆದರು. ಈ ವಿಚಾರದ ಬಗ್ಗೆ ಮೂರು ವರ್ಷಗಳ ಬಳಿಕ ರಶ್ಮಿಕಾ ಇದೀಗ ಮೌನ ಮುರಿದಿದ್ದಾರೆ. 

ಮೂರು ವರ್ಷದ ನಂತರ ಕನ್ನಡಿಗರ ಮುಂದೆ ರಶ್ಮಿಕಾ ಮಂದಣ್ಣ; ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ! 

'ಟ್ರೋಲ್‌ಗಳನ್ನು ನೋಡಿ ನಾನು ಆರಂಭದಲ್ಲಿ ಬೇಸರ ಮಾಡಿಕೊಂಡಿದ್ದು ಇದೆ . ಎಷ್ಟೋ ದಿನಗಳು ನಿದ್ದೆಯೇ ಮಾಡಿಲ್ಲ. ನಾನಿಟ್ಟ ಕಣ್ಣೀರು ನನ್ನ ದಿಂಬಿಗೆ ಮಾತ್ರ ಗೊತ್ತು. ದಿನ ಕಳೆಯುತ್ತಿದ್ದಂತೆ, ಅದನ್ನು ಒಪ್ಪಿಕೊಂಡಿರುವೆ. ಪಾಸಿಟಿವ್ ಆಗಿ ತೆಗೊಳ್ಳೋಕೇ ಶುರು ಮಾಡಿದೆ. ಕಾಂಟ್ರವರ್ಸಿ ಇಲ್ಲ, ಅಂದರೆ ಏನೋ ಮಿಸ್ಸಿಂಗ್ ಅಂತ ಅನಿಸುತ್ತದೆ. ನಾನು ಇಷ್ಟ ಪಡುವ ಮಂದಿ ಹಾಗೂ ಅಮ್ಮ ಸದಾ ನನ್ನ ಜೊತೆ ಇದ್ದಾರೆ. ನಾನು ಬೇಸರ ಮಾಡಿಕೊಳ್ಳಲು ಅವರು ಬಿಡಲ್ಲ,' ಎಂದು ರಶ್ಮಿಕಾ ಮಾತನಾಡಿದ್ದಾರೆ. 

"

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ದುಬಾರಿ ನಟಿಯಾಗಿ, ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಬಗ್ಗೆ ಇತ್ತೀಚಿನ ದಿನಗಳಲ್ಲಿ ಟ್ರೋಲ್‌ ತುಂಬಾನೇ ಕಡಿಮೆಯಾಗಿದೆ. ಸಿನಿ ಜರ್ನಿ ಮುಂದುವರಿಯುತ್ತಿದ್ದಂತೆ, ತೆಲಗು, ತಮಿಳು, ಹಿಂದಿ ಚಿತ್ರಗಳಲ್ಲಿಯೂ ಅವಕಾಶವನ್ನು ಗಿಟ್ಟಿಸಿಕೊಂಡರು. ನ್ಯಾಷನಲ್ ಕ್ರಶ್ ಎಂದು ಪಟ್ಟವೂ ದಕ್ಕಿತು. ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮುರಿದು ಬಿದ್ದ ನಂತರ, ಈ ನಟಿಯ ವಿರುದ್ಧ ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು. ವಿಜಯ್ ದೇವರಕೊಂಡ ಜತೆ ಪೇರ್‌ ಮಾಡಲಾಗಿತ್ತು. ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ತಮ್ಮ ವೃತ್ತಿ ಜೀವನದ ಕಡೆ ಗಮನ ಕೊಟ್ಟ ರಶ್ಮಿಕಾ ಮಂದಣ್ಣ, ಈಗ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?