
ಸ್ಯಾಂಡಲ್‌ವುಡ್ ಮುದ್ದು ಮುಖದ ಚೆಲುವೆ, ಸೂಪರ್ ಮಾಮ್ ಮೇಘನಾ ರಾಜ್ ಪುತ್ರನ ಹೆಸರು ರಿವೀಲ್ ಮಾಡುವ ದಿನಾಂಕವನ್ನು ಡಿಫರೆಂಟ್ ಆಗಿ ರಿವೀಲ್ ಮಾಡಿದ್ದಾರೆ. ಪುತ್ರನಿಗೆ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಸಿನಿ ಆಪ್ತರು ಕರೆಯುವ ಹೆಸರುಗಳನ್ನು ಒಟ್ಟು ಗೂಡಿಸಿ, ವಿಡಿಯೋದಲ್ಲಿ ಸೇರಿಸಿದ್ದಾರೆ.
ಪುತ್ರನಿಗೆ 10 ತಿಂಗಳು ತುಂಬಿದ ಬಳಿಕ ಮೇಘನಾ ರಾಜ್ ನಾಮಕರಣ ಮಾಡುವ ತಯಾರಿ ಮಾಡಿಕೊಂಡಿದ್ದಾರೆ. ನಾಳೆ ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೊಟೆಲ್‌ನಲ್ಲಿ ನಾಮಕರಣ ನಡೆಯಲಿದೆ. ಇಷ್ಟು ದಿನಗಳ ಕಾಲ ಜ್ಯೂನಿಯರ್ ಚಿರು ಎಂದು ಕರೆಯಲಾಗಿತ್ತು, ಇದೀಗ ಜ್ಯೂನಿಯರ್ ಸಿಗೆ ಹೆಸರು ಬಂದಿದೆ.
'ಪ್ಯಾರಡೈಸ್ ಗೇಟ್ ಓಪನ್ ಮಾಡೋಣ. ನಮ್ಮ ಲಿಟಲ್ ಪ್ರಿನ್ಸ್‌ಗೆ ಈಗ ಹೆಸರು ಆಯ್ಕೆ ಮಾಡಲಾಗಿದೆ. ಪ್ರತಿ ಸಲ ಜ್ಯೂನಿಯರ್ C ಬಗ್ಗೆ ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳು 'ಏನ್ ಹೆಸರು ಜ್ಯೂನಿಯರ್‌ದು' ಅಂತ. ಈಗ ಕಿಂಗ್ ತಮ್ಮ ಪ್ರಿನ್ಸ್ ಹೆಸರು ಸೆಲೆಕ್ಟ್ ಮಾಡಿದ್ದಾರೆ. ಸೆಪ್ಟೆಂಬರ್ 3 ರಂದು ಹೆಸರು ರಿವೀಲ್ ಮಾಡುತ್ತಿರುವೆ,' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ.
ವಿಡಿಯೋ ಆರಂಭದಲ್ಲಿ ಜ್ಯೂನಿಯರ್ ಹುಟ್ಟಿದ ದಿನಾಂಕ ತೋರಿಸಲಾಗಿದೆ. ಆನಂತರ ಮೇಘನಾ ಹಾಗೂ ಚಿರು ಚರ್ಚ್‌ನಲ್ಲಿ ಉಂಗುರ ಬದಲಾಯಿಸಿಕೊಂಡು, ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ಷಣವನ್ನು ತೋರಿಸಲಾಗಿದೆ. ಇಬ್ಬರೂ ಧ್ರುವ ಸರ್ಜಾ ಮದುವೆಯಲ್ಲಿ ಒಂದೇ ರೀತಿಯ ಉಡುಪು ಧರಿಸಿದ ವಿಡಿಯೋ ತೋರಿಸಲಾಗಿದೆ. ಆನಂತರ ಜ್ಯೂನಿಯರ್‌ಗೆ ಕರೆಯಲಾಗುವ ಹೆಸರು ಸಿಂಬಾ, ಚಿಂಟು, ಬರ್ಫಿ, ಶಿಷ್ಯ, ಚಿರು ಬಚ್ಚ, ಮರಿ ಸಿಂಗಾ, ಮಿನಿಮಮ್, ಕುಟ್ಟಿ ಪಾ, ಮಂಚಿ ಎಂಬ ಹೆಸರುಗಳನ್ನು ತೋರಿಸಲಾಗಿದೆ. ಒಟ್ಟಿನಲ್ಲಿ ಚಿರಂಜೀವಿ ಮಗನ ಹೆಸರು ಏನಿರಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.