ಶ್ರೀಮುರಳಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಬ್ಬರಿಸಲಿರುವ ‘ಬಘೀರ’ ಚಿತ್ರದ ಶೂಟಿಂಗ್ ಡಿಸೆಂಬರ್ ಅಥವಾ ಜನವರಿಯಿಂದ ಆರಂಭವಾಗಲಿದೆ ಎಂದು ನಿರ್ದೇಶಕ ಡಾ. ಸೂರಿ ತಿಳಿಸಿದ್ದಾರೆ. ಈ ಹಿಂದೆ ಅವರು ಶ್ರೀಮುರಳಿ ನಟನೆಯ ‘ಮದಗಜ’ ಶೂಟಿಂಗ್ ಮುಗಿದ ಕೂಡಲೇ ‘ಬಘೀರ’ ಚಿತ್ರೀಕರಣ ಶುರು ಮಾಡುವುದಾಗಿ ತಿಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ ಸೂರಿ, ‘ಬಘೀರ ಚಿತ್ರದ ಶೂಟಿಂಗ್ ಮುಂದಕ್ಕೆ ಹೋಗಿರುವುದಕ್ಕೆ ಕೋವಿಡ್ ಕಾರಣವಲ್ಲ. ಬದಲಿಗೆ ಈ ಚಿತ್ರದ ಸಬ್ಜೆಕ್ಟೇ ಸಾಕಷ್ಟುಪೂರ್ವ ತಯಾರಿ ಬೇಡುತ್ತದೆ. ಈಗ ಸ್ಕಿ್ರಪ್ಟ್ ಕೆಲಸ ಆಲ್‌ಮೋಸ್ಟ್ ಮುಗಿಯುತ್ತಾ ಬಂದಿದೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ತಾಂತ್ರಿಕ ತಂಡದ ರಚನೆಯೂ ಪ್ರಗತಿಯಲ್ಲಿದೆ. ಚಿತ್ರದ ಕೆಲಸ ಒಂದು ಹಂತಕ್ಕೆ ಬಂದ ಬಳಿಕ ಅಪ್‌ಡೇಟ್ ಮಾಡುತ್ತೇನೆ’ ಎಂದಿದ್ದಾರೆ.
ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಹ್ಯಾಪಿಲೀ ಮ್ಯಾರೀಡ್
ಹೊಂಬಾಳೆ ಫಿಲಂಸ್ ಬ್ಯಾನರ್‌ನಡಿ ವಿಜಯ್ ಕಿರಗಂದೂರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ದಿ ಜಂಗಲ್ ಬುಕ್’ನಲ್ಲಿ ಮೋಗ್ಲಿಯನ್ನು ರಕ್ಷಿಸುವವನು ಬಘೀರ. ನಮ್ಮ ಚಿತ್ರದಲ್ಲಿ ಸಮಾಜವೇ ಮೋಗ್ಲಿ. ಬಘೀರ ಸಮಾಜವನ್ನು ರಕ್ಷಿಸುತ್ತಾನೆ’ ಹೀಗನ್ನುತ್ತಾರೆ ತಮ್ಮ ಬಹುನಿರೀಕ್ಷಿತ ‘ಬಘೀರ’ ಸಿನಿಮಾದ ಬಗ್ಗೆ ಒಂದು ಕಿಂಡಿ ತೆರೆಯುತ್ತಾರೆ ನಿರ್ದೇಶಕ ಡಾ. ಸೂರಿ. ಈ ಹಿಂದೆ ಇವರು ‘ಲಕ್ಕಿ’ ಸಿನಿಮಾ ನಿರ್ದೇಶಿಸಿದ್ದರು, ‘ಕ್ವಾಟ್ಲೆ ಸತೀಶ’ ಚಿತ್ರ ನಿರ್ಮಿಸಿದ್ರು. ಸದ್ಯ ಕೆಜಿಎಫ್ 2 ಟೀಮ್ ಜೊತೆಗಿದ್ದಾರೆ.