ಸಂಚಾರಿ ವಿಜಯ್‌ ನಟನೆಯ ಪುಕ್ಸಟ್ಟೆಲೈಫು ಟ್ರೈಲರ್‌ ಬಿಡುಗಡೆ

By Kannadaprabha News  |  First Published Sep 1, 2021, 12:20 PM IST
  • ಸಂಚಾರಿ ವಿಜಯ್‌ ನಟನೆಯ ಪುಕ್ಸಟ್ಟೆಲೈಫು ಟ್ರೈಲರ್‌ ಬಿಡುಗಡೆ
  • ಬಿಡುಗಡೆಯಾಗಿ ಒಂದೇ ಗಂಟೆಯಲ್ಲಿ 2 ಸಾವಿರ ಲೈಕ್ಸ್

ಸಂಚಾರಿ ವಿಜಯ್‌ ನಟನೆಯ ‘ಪುಕ್ಸಟ್ಟೆಲೈಫು’ ಚಿತ್ರದ ಟ್ರೈಲರ್‌ ಇಂದು 11 ಗಂಟೆಗೆ ಎ2 ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ‘ಪುರುಸೊತ್ತೇ ಇಲ್ಲ’ ಎಂಬ ಟ್ಯಾಗ್‌ಲೈನ್‌ ಇರುವ ಈ ಚಿತ್ರವನ್ನು ಅರವಿಂದ ಕುಪ್ಳೀಕರ್‌ ನಿರ್ದೇಶಿಸಿದ್ದಾರೆ, ನಾಗರಾಜ ಸೋಮಯಾಜಿ ನಿರ್ಮಿಸಿದ್ದಾರೆ.

ಈಗಾಗಲೇ ಬಿಡುಗಡೆ ಮಾಡಿರುವ ಮೋಷನ್‌ ಪೋಸ್ಟರ್‌ನಲ್ಲಿ ಬೀಗ ರಿಪೇರಿ ಮಾಡುವ ಯುವಕನ ಪಾತ್ರದಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ. ಸುಲ್ತಾನ್‌ ಕೀ ಮೇಕರ್ಸ್‌ ಎಂಬ ಆತನ ಪೆಟ್ಟಿಅಂಗಡಿ, ಬಾಡಿಗೆಗೆ ಇದೆ ಬೋರ್ಡ್‌ ಹಾಕಿರುವ ಪೊಲೀಸ್‌ ಸ್ಟೇಶನ್‌ ಕುತೂಹಲ ಕೆರಳಿಸುತ್ತದೆ. ಈಗಾಗಲೇ ಟ್ರೈಲರ್‌ಗೆ 2 ಸಾವಿರದಷ್ಟು ಲೈಕ್ಸ್ ಬಂದಿದೆ.

Tap to resize

Latest Videos

undefined

ನಾನು ಅವನಲ್ಲ ಅವಳು ಚಿತ್ರಕ್ಕೆ ಭಾರಿ ಟಿಆರ್‌ಪಿ!

ಚಿತ್ರದಲ್ಲಿ ಅಚ್ಯುತ ಕುಮಾರ್‌ ಪೊಲೀಸ್‌ ಪಾತ್ರದಲ್ಲಿ, ರಂಗಾಯಣ ರಘು ಅವರು ಸ್ವಾಮಿ ಪಾತ್ರದಲ್ಲಿ, ನಾಯಕಿ ಮಾತಂಗಿ ಪ್ರಸನ್ನ ವಕೀಲೆಯಾಗಿ ಕಾಣಿಸಿಕೊಂಡಿದ್ದಾರೆ.

ಸಂಚಾರಿ ವಿಜಯ್ ನಮ್ಮೊಂದಿಗೆ ಇಲ್ಲವಾದರೂ ಅವರು ಅಭಿನಯಿಸಿರುವ ಸಿನಿಮಾಗಳ ಮೂಲಕ ನಮ್ಮೆಲ್ಲರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಕೆಲವು ದಿನಗಳ ಹಿಂದೆ ಟಿವಿಯಲ್ಲಿ 'ನಾನು ಅವನಲ್ಲ ಅವಳು' ಸಿನಿಮಾ ಪ್ರಸಾರ ಮಾಡಲಾಗಿತ್ತು, ಹೆಚ್ಚಿನ ವೀಕ್ಷಣೆ ಪಡೆದುಕೊಂಡು ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವಿಜಯ್ ಅವರ ನೆನಪಲ್ಲಿ ಅವರ ಹುಟ್ಟುಹಬ್ಬದ ದಿನ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಮಗಳಿಗೆ 'ಗಿಯ' ಎಂದು ನಾಮಕರಣ ಮಾಡಿದ್ದಾರೆ.

click me!