ಮಗ ರಾಯನ್ ಹುಟ್ಟಿದ ಮೇಲೆ ಮೇಘನಾ ಕಮ್‌ಬ್ಯಾಕ್ ಮಾಡಿದ್ದು, ರಾಯನ್ ಖುಷಿ ತಂದುಕೊಟ್ಟಿದ್ದು ಹಾಗೂ ಜನರ ಅನುಕಂಪದ ಬಗ್ಗೆ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ರಿಯಾಲಿಟಿ ಶೋ ಮೂಲಕ ಕಮ್‌ಬ್ಯಾಕ್ ಮಾಡಿದವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿಯನ್ನು ನೋಡಿ ಕಲಿಯುವುದು ಹೆಚ್ಚಿದೆ. ಆದರೆ ಮೇಘನಾ ರಾಜ್ ಮುಂದಿನ ಹೆಜ್ಜೆಗಳ ಬಗ್ಗೆ ಜನರು ಏನನ್ನುತ್ತಿದ್ದರು? ರಾಯನ್ ಬಂದ್ಮೇಲೆ ಎಷ್ಟು ಬದಲಾವಣೆ ಆಗಿದೆ ಎಂದು ಹಂಚಿಕೊಂಡಿದ್ದಾರೆ.
ಕಮ್‌ಬ್ಯಾಕ್ ಪದ ಬೇಡ:
'ಏನಿದು ಕಮ್‌ಬ್ಯಾಕ್ ಪದ..ನನಗೆ ಅದು ಇಷ್ಟನೇ ಆಗುವುದಿಲ್ಲ. ಮದರ್‌ಹುಡ್ ಅನ್ನೋದು ಅಷ್ಟು ಸುಲಭವಾಗಿ ಇರಲಿಲ್ಲ. ಇತ್ತೀಚಿಗೆ ಬಹುತೇಕ ತಾಯಂದಿರು ಈ ಜರ್ನಿ ತುಂಬಾ ಸುಲಭವಾಗಿದೆ ಅನ್ನೋ ರೀತಿಯಲ್ಲಿ ಇರುತ್ತಾರೆ. ಈ ನಾನು ಮಾಡುತ್ತಿರುವುದು 30 ವರ್ಷಗಳ ಹಿಂದೆ ನನ್ನ ತಾಯಿ ಮಾಡಿದ್ದರು. ನನ್ನ ತಾಯಿ ಕೆಲಸ ಮಾಡಲೇ ಬೇಕಿತ್ತು ತಂದೆ ಕೂಡ ಕೆಲಸ ಮಾಡಲೇ ಬೇಕಿತ್ತು ಏಕೆಂದರೆ ದುಡಿಮೆ ಇರುವುದು ಸಿನಿಮಾದಿಂದಲೇ. ಹೀಗಾಗಿ ನಾನು ತಿಂಗಳು ಮಗು ಆಗಿದ್ದಾಗ ತಾತ ಅಜ್ಜಿ ಜೊತೆ ನನ್ನನ್ನು ಬಿಟ್ಟು ಕೆಲಸ ಮಾಡುತ್ತಿದ್ದರು. ಈಗ ಮಾಡರ್ನ್ ತಾಯಂದಿರಿಗೆ ಇರುವ ಪ್ರೆಶರ್‌ನಿಂದ ಒಬ್ಬರೇ ಮಾಡಿಕೊಳ್ಳಲು ಆಗುವುದಿಲ್ಲ. ಹಿಂದೆ ಒಂದು ಮಾತು ಹೇಳುತ್ತಿದ್ದರು ಒಂದು ಮಗು ಬೆಳೆಸುವುದು ಒಂದು ಹಳ್ಳಿ ಬೇಕು ಎಂದು. ಇಂದು ನಾನೇ ಏನೇ ಆಗಿದ್ದರೂ ಅಥವಾ ಇಲ್ಲಿಗೆ ಬಂದಿದ್ದರೂ ಅದಕ್ಕೆ ಕಾರಣ ನನ್ನ ಕುಟುಂಬ. ಮಗನನ್ನು ತಾಯಿ ತಂದೆ ಅಥವಾ ಅಕ್ಕನ ಜೊತೆ ಬಿಟ್ಟು ನಾನು ಕೆಲಸ ಮಾಡಲು ಸಾಧ್ಯವಾಗುತ್ತಿರುವುದು ಇಲ್ಲವಾದರೆ ಆಗುತ್ತಿರಲಿಲ್ಲ. ನನ್ನ ಸುತ್ತ ಇರುವುದು ಸೂಪರ್ ಮಹಿಳೆಗಳು ಇವರನ್ನು ನೋಡಿದರೆ ನನಗೆ ಏನೂ ಕಷ್ಟ ಇಲ್ಲ' ಎಂದು ಗೋಲ್ಡ್ ಕ್ಲಾಸ್ ವಿತ್ ಮಯೂರ ಸಂದರ್ಶನದಲ್ಲಿ ಮೇಘನಾ ಮಾತನಾಡಿದ್ದಾರೆ.
ಅಪ್ಪ ಎದುರು ಬಂದ್ರೆ ಅಳು ಬರುತ್ತೆ; ಮಿಸ್ ಡೀವಾ ಸ್ಪರ್ಧಿಯಲ್ಲಿ ಕೇಳಿದ ಪ್ರಶ್ನೆಗೆ KGF ನಟಿ ಕೊಟ ಉತ್ತರ ವೈರಲ್
ಅನುಕಂಪ ಬೇಡವೇ ಬೇಡ:
'ಚಿರು ಅಗಲಿದಾಗ ನಾನು ನಾಲ್ಕು ತಿಂಗಳ ಗರ್ಭಿಣಿ ಆಗಿದ್ದೆ. ನನಗೆ ಜನರಿಂದ ಯಾವುದೇ ರೀತಿ ಕರುಣೆ ಬೇಡ ಅವರು ನೋಡಿದಾಗ ನಗುತ್ತಿರಬೇಕು ಅಷ್ಟೇ. ಅನುಕಂಪ ಒಳ್ಳೆಯದೆ ಆದರೆ ತುಂಬಾ ದೂರ ಕರೆದುಕೊಂಡು ಹೋಗುವುದಿಲ್ಲ. ಎಷ್ಟು ದಿನ ಅನುಕಂಪ ತೋರಿಸುತ್ತಾರೆ ಅವರಿಗೆ ಅವರ ಜೀವನ ನೋಡಿಕೊಳ್ಳಲು ಸಾಕಷ್ಟು ಇರಲಿದೆ. ನಾನು ಒಳ್ಳೆಯದನ್ನು ಮಾಡುತ್ತಿದ್ದರೆ ಅದನ್ನು ನೋಡಿ ನೀವು ಮಾಡಿ ಆದರೆ ಯಾವುದೇ ಕಾರಣಕ್ಕೆ ಕೊರುಣೆ ತೋರಿಸಬೇಡಿ. ತುಂಬಾ ಜನರು ನನಗೆ ಆ ಸಮಯದಲ್ಲಿ ಅನುಕಂಪ ತೋರಿಸಿದ್ದಾರೆ. ಆ ಸಮಯದಲ್ಲಿ ತುಂಬಾ ಜನರಿಗೆ ನನ್ನನ್ನು ಹೇಗೆ ಎದುರಿಸಬೇಕು ಅನ್ನೋದು ಗೊತ್ತಾಗುತ್ತಿರಲಿಲ್ಲ. ರಾಯನ್ ಇಲ್ಲದಿದ್ದರೆ ನಾನು ಇಷ್ಟು ಖುಷಿಯಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ. ಈ ಘಟನೆ ನಡೆದ ಮೊದಲು ನನ್ನ ತಲೆಗೆ ಬಂದಿದ್ದು ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು. ರಾಯನ್ ಇಲ್ಲದಿದ್ದರೆ ನನ್ನ ಜೀವನ ಹೇಗೆ ಅನಿಸುತ್ತಿತ್ತು. ರಾಯನ್‌ನಿಂದ ನಾನು ಖುಷಿಯಾಗಿದ್ದೀನಿ. ಮೊದಲು ನನಗೆ ನಗುವುದಕ್ಕೆ ಭಯ ಆಗುತ್ತಿತ್ತು. ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಖುಷಿಯಾಗಿರುವುದನ್ನು ಕಲಿತಿದ್ದೀನಿ' ಎಂದು ಮೇಘನಾ ರಾಜ್ ಹೇಳಿದ್ದಾರೆ.
ಕೊನೆವರೆಗೂ ಅಪ್ಪಾಜಿ ಅವ್ರ ಸೊಂಟದ ಅಳತೆ 32 ಇತ್ತು, ಅವರ ಫಿಟ್ನೆಸ್‌ಗೆ ನಾನು ಫ್ಯಾನ್ಸ್: ಪುನೀತ್ ಹಳೆ ವಿಡಿಯೋ ವೈರಲ್