
ಕನ್ನಡ ಚಿತ್ರರಂಗದ ಮುದ್ದು ಜೋಡಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ. ಹಲವು ವರ್ಷಗಳ ಕಾಲ ಪ್ರೀತಿಸಿ ಎರಡು ಸಂಪ್ರದಾಯದ ಪ್ರಕಾರ ಒಂದು ವಾರಗಳ ಕಾಲ ಅದ್ಧೂರಿಯಾಗಿ ಮದುವೆಯಾದ ಜೋಡಿ ಅಂದ್ರೆ ಇವರೇ. ಮದುವೆ ಮನೆಯಲ್ಲಿ ಸಂಬಂಧಿಕರಿಗಿಂತ ಸ್ನೇಹಿತರು ಮತ್ತು ಸಿನಿ ಆಪ್ತರು ಹೆಚ್ಚಾಗಿ ಭಾಗಿಯಾಗಿದ್ದರು. ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ ಜೂನ್ 7 ಮೇಘನಾ ಜೀವನದ ಕರಾಳ ದಿನವಾಗಿತ್ತು.
ಅಕ್ಟೋಬರ್ 17ರಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬವಿತ್ತು. ಕ್ರಿಸ್ಚಿಯನ್ ಸಂಪ್ರದಾಯದಲ್ಲಿ ನಡೆದ ಮದುವೆ ಫೋಟೋವನ್ನು ಅಪ್ಲೋಡ್ ಮಾಡಿ 'ಹ್ಯಾಪಿ ಬರ್ತಡೇ ನನ್ನ ಹ್ಯಾಪಿನೆಸ್. ಯಾರೇ ಬರಲಿ ಏನೇ ಆಗಲಿ ಒಂದು ಎರಡು ಅಲ್ಲ ನಾನು ಜೀವನದಲ್ಲಿ ಸದಾ ನಗುವುದಕ್ಕೆ ನೀನೇ ಕಾರಣ. ನನ್ನ ಪ್ರೀತಿಯ ಪತಿ ಚಿರು ಐ ಲವ್ ಯು' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಫೋಟೋ ಹಂಚಿಕೊಂಡು ನೆಚ್ಚಿನ ನಟನನ್ನು ನೆನಪಿಸಿಕೊಂಡಿದ್ದಾರೆ. ಚಿರು ಕುಟುಂಬಸ್ಥರು ಸಮಾಧಿಯನ್ನು ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾಯಿ ಅಮ್ಮಾಜಿ ಮಗನ ಸಮಾಧಿಗೆ ಪೂಜೆ ಸಲ್ಲಿಸುವಾಗ 'ಇಂತ ತಮ್ಮ( ಧ್ರುವ ಸರ್ಜಾ) ಸಿಗೋಕೆ ನೀನು ಪುಣ್ಯ ಮಾಡಿದಿ ಕಣೋ' ಎಂದು ಹೇಳುತ್ತಾರೆ. ಚಿರು ನಟನೆಯ ಕೊನೆ ಸಿನಿಮಾ ರಾಜ ಮಾರ್ತಾಂಡ ರಿಲೀಸ್‌ಗೆ ಸಜ್ಜಾಗಿದೆ, ಟೀಸರ್ ಮತ್ತು ಟ್ರೈಲರ್‌ನ ಪುತ್ರ ರಾಯನ್ ರಾಜ್ ಸರ್ಜಾ ಬಿಡುಗಡೆ ಮಾಡಿದ್ದನು.
ಮನೆಯಲ್ಲಿ ಆಗಲೇ ಮಗನಿದ್ದಾನೆ, ಮಗಳು ಬಂದಿರುವುದಕ್ಕೆ ಖುಷಿ ಇದೆ: Meghana Raj
ಸೈಮಾ ಅವಾರ್ಡ್ 2022:
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸೈಮಾ ಅವಾರ್ಡ್ ನಡೆಯಿತ್ತು. ಚಿರಂಜೀವಿ ಸರ್ಜಾಗೆ ನಮನ ಸಲ್ಲಿಸಲಾಗಿತ್ತು ಈ ವೇಳೆ ಚಿರು ಪರವಾಗಿ ಮೇಘನಾ ಬ್ಲ್ಯಾಕ್ ಲೇಡಿಯನ್ನು ಸ್ವೀಕರಿಸಿದ್ದಾರೆ.
'ಚಿರು ನಿಮ್ಮ ಬ್ಲ್ಯಾಕ್ ಲೇಡಿ ಕೊನೆಗೂ ಮನೆ ಸೇರಿತ್ತು. ಈ ಭಾವನೆಯನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ ಆದರೆ ಈ ಅವಾರ್ಡ್ ಸ್ವೀಕರಿಸುವಾಗ ನೀವು ಎಷ್ಟು ಖುಷಿ ಪಡುತ್ತಿದ್ದ ಹೇಗೆ ತಿಯಾಕ್ಟ್ ಮಾಡುತ್ತಿದ್ದೆ ಎನ್ನುವ ಕಲ್ಪನೆ ನನಗಿದೆ. ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ ಬೇಬಿ ಮಾ. ಈ ಪ್ರಶಸ್ತಿ ನೀನು ನೀನಾಗಿದ್ದು ಪ್ರಾಮಾಣಿಕವಾಗಿ ಇದದ್ದಕ್ಕೆ. ಆಫ್ ಸ್ಕ್ರೀನ್ ಜನರು ನಿನ್ನನ್ನು ತುಂಬಾನೇ ಇಷ್ಟ ಪಡುತ್ತಾರೆ ಹೀಗಾಗಿ ನಿನಗೆ ಈ ಅವಾರ್ಡ್ ಸೂಕ್ತ. ಈಗಲ್ಲೂ ನೀನು ನಮ್ಮ ಜೀವನದಲ್ಲಿ ನೂರಾರು ಮಿರಾಕಲ್ ಮಾಡುತ್ತಿರುವೆ ನಮ್ಮ ಸುತ್ತಲು ಸಂತೋಷ ತುಂಬಿರುವೆ' ಎಂದು ಮೇಘನಾ ಬರೆದುಕೊಂಡಿದ್ದಾರೆ. ಚಿರು ಫೋಟೋ ಮುಂದೆ ಮೇಘನಾ ಮತ್ತು ರಾಯನ್ ರಾಜ್ ಬ್ಲ್ಯಾಕ್ ಲೇಡಿ ಹಿಡಿದು ಫೋಸ್ ಕೊಟ್ಟಿದ್ದಾರೆ.
ಎರಡನೇ ಮದುವೆ ಬಗ್ಗೆ ಕೊನೆಗೂ ಮನಬಿಚ್ಚಿ ಮಾತನಾಡಿದ ಮೇಘನಾ ರಾಜ್
ಚಿರು-ರಾಯನ್ ಹಚ್ಚೆ:
ಕರ್ನಾಟಕದ ಮನೆ ಮಗಳು ಮೇಘನಾ ರಾಜ್ ಕ್ಯಾಲಿಫೋರ್ನಿಯಾದಲ್ಲಿಆಯೋಜಿಸಿಲಾಗಿದ್ದ ಫೆಸ್ಟಿವಲ್ ಆಫ್ ಗ್ಲೋಬ್ ಸಮಾರಂಭದಲ್ಲಿ ಭಾಗಿಯಾಗಿ FOG ಅವಾರ್ಡ್ ಪಡೆದಿದ್ದಾರೆ. ಮೇಘನಾ ರಾಜ್ ತಮ್ಮ ಎಡಗೈ ಮೇಲೆ Chiru ಎಂದು ಬರೆಸಿಕೊಂಡು R ಅಕ್ಷರದಿಂದ ಕೆಳಗೆ Raayan ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇಬ್ಬರೂ ಹೆಸರು ಹಚ್ಚೆ ಹಾಕಿಸಿಕೊಂಡಿರುವ ಎಡಗೈಯಲ್ಲಿ infinity ಟ್ಯಾಟೂ ಕೂಡ ಇದೆ. ಈ ಇನ್‌ಫಿನಿಟಿಯಲ್ಲಿ ಹಾರ್ಟ್ ಬೀಟ್‌ನ ಕೂಡ ಸೇರಿಸಲಾಗಿದೆ. ಲಾಸ್ ವೇಗಾಸ್ ಟ್ರಿಪ್‌ನ ಎಂಜಾಯ್ ಮಾಡುತ್ತಿರುವ ಮೇಘನಾ ರಾಜ್ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡಿ ಸಮಯ ಕಳೆಯುತ್ತಿದ್ದಾರೆ. 'When the breeze agrees to be a part of your picture' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.