ಫನ್ನಿ ರಿಸೆಪ್ಷನ್ ಫೋಟೋ ಶೇರ್ ಮಾಡಿಕೊಂಡ ಮೇಘನಾ ರಾಜ್‌; ಚಿರಂಜೀವಿ ಪೋಸ್ ನೋಡಿ!

By Suvarna News  |  First Published Mar 2, 2021, 11:23 AM IST

ಫ್ಯಾನ್‌ ಪೇಜ್‌ನಲ್ಲಿ ಹರಿದಾಡುತ್ತಿದೆ ಮೇಘನಾ ರಾಜ್‌, ಚಿರಂಜೀವಿ ಸರ್ಜಾ ಆರತಕ್ಷತೆ ಫೋಟೋ. ಮೇಘನಾ ಮುಖದಲ್ಲಿ ಮಂದಹಾಸ....


ಕನ್ನಡ ಚಿತ್ರರಂಗದ ಮನೆ ಮಗಳು ಮೇಘನಾ ರಾಜ್‌ ಹಾಗೂ ಚಿರಂಜೀವಿ ಸರ್ಜಾ ಮದುವೆ ಇಡೀ ಕರ್ನಾಟಕದ ಜನತೆಗೆ ಹಬ್ಬವಿದ್ದಂತೆ ಇತ್ತು. ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಕ್ಯೂಟ್‌ ಕಪಲ್‌ಗೆ ಆಶೀರ್ವದಿಸಲು ಅಭಿಮಾನಿಗಳು ಗುಂಪು ಗುಂಪಲ್ಲಿ ಬಂದಿದ್ದನ್ನು ನೋಡಿದರೆ ದೃಷ್ಟಿ ತೆಗೆಯುವಂತಿತ್ತು.  ಅಬ್ಬಾ!! ಎಷ್ಟು ಅಭಿಮಾನಿಗಳು ಈ ಜೋಡಿಗೆ ಎಂದು ಹುಬ್ಬೇರಿಸುವಂತೆ ಭಾಸವಾಗಿದ್ದು ಸುಳ್ಳಲ್ಲ. 

'ರಾಜ ಮಾರ್ತಾಂಡ' ಬರ್ತಿದ್ದಾನೆ ದಾರಿ ಬಿಡಿ; ಜೂ. ಚಿರು ಅಮೃತ ಹಸ್ತದಿಂದ ಟ್ರೈಲರ್ ಬಿಡುಗಡೆ! 

Tap to resize

Latest Videos

undefined

ಮೇಘನಾ ಮುಖದಲ್ಲಿ ಜೂನಿಯರ್ ಚಿರು ಮಂದಹಾದ ಮೂಡಿಸಿದರೆ, ಅವರ ಅಭಿಮಾನಿಗಳು ಮತ್ತೊಂದು ರೀತಿಯಲ್ಲಿ ಮೇಘನಾ ಮುಖದಲ್ಲಿ ನಗು ತರಿಸಲು ಯತ್ನಿಸುತ್ತಿದ್ದಾರೆ. ವಿಭಿನ್ನವಾಗಿ ಫೋಟೋ ಎಡಿಟ್‌ ಮಾಡಿ ಚಿರಂಜೀವಿ ಈಗಲೂ ನಮ್ಮೊಂದಿಗೆ ಇದ್ದಾರೆಂಬ ಭಾವ ಮೂಡುವಂತೆ ಮಾಡುತ್ತಲೇ ಇರುತ್ತಾರೆ. ಮೇಘನಾ ಹಾಗೂ ಚಿರು ಆರತಕ್ಷತೆ ಫೋಟೋ ಶೇರ್ ಮಾಡಿಕೊಂಡು, ಅಭಿಮಾನಿಗಳು 'ಅಣ್ಣ-ಅತ್ತಿಗೆ' ಎಂದು ಬರೆದುಕೊಂಡಿದ್ದಾರೆ. 

ಚಿರಂಜೀವಿ ಸುಸ್ತಾಗಿ ಚೇರ್ ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಾ ಮೇಘನಾ ಮುಖ ನೋಡುತ್ತಿದ್ದಾರೆ. ಫೋಟೋ ತುಂಬಾನೇ ಕ್ಯೂಟ್ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ. 

ಸ್ನೇಹಿತರ ಜೊತೆ ಪೊಗರು ನೈಟ್‌ ಶೋ ವೀಕ್ಷಿಸಿದ ಮೇಘನಾ ರಾಜ್! 
2020 ಜೂನ್‌ ತಿಂಗಳಲ್ಲಿ ಹೃದಯಾಘಾತದಿಂದ ಚಿರಂಜೀವಿ ಅಕಾಲಿಕ ಮರಣಕ್ಕೆ ತುತ್ತಾದರು. ಚಿರಂಜೀವಿ ಕೊನೆಯ ಬಾರಿ ಅಭಿನಯಿಸಿದ 'ರಾಜ ಮಾರ್ತಾಂಡ' ಸಿನಿಮಾ ಟ್ರೈಲರ್ ಬಿಡುಗಡೆಯಾಗಿ 2 ಮಿಲಿಯನ್ ವೀಕ್ಷಣೆ ಪಡೆದಿದೆ. ಅಪ್ಪನ ಕಡೆಯ ಚಿತ್ರದ ಟ್ರೈಲರ್ ಅನ್ನು ಮಗ ರಿಲೀಸ್ ಮಾಡಿ, ಸಾಥ್‌ ಕೊಟ್ಟಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

 

click me!