ನಾನು ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಮರ ಚೆನ್ನಾಗಿದ್ದರೆ ಮಾತ್ರ ನೆರಳು ಕೊಡುವುದು: ಮೇಘನಾ ರಾಜ್

By Vaishnavi Chandrashekar  |  First Published Feb 14, 2023, 3:38 PM IST

Recap ವಿಡಿಯೋ ಹಂಚಿಕೊಂಡ ಮೇಘನಾ ರಾಜ್. 2023ರಲ್ಲಿ ಸೆಟ್‌ ಮಾಡಿಕೊಂಡಿರುವ ಗೋಲ್‌, ಮಗನ ಜೊತೆ ಟ್ರ್ಯಾವಲ್‌ ಬಗ್ಗೆ ನಟಿ ಮಾತು...
 


ರಾಜ ಹುಲಿ ನಟಿ ಮೇಘನಾ ರಾಜ್‌ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೊಸ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 2022ರ recap ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಜೀವನ ಬೆಸ್ಟ್‌ ಕ್ಷಣ, ಮಗನ ಜೊತೆ ಪ್ರಯಾಣ, ಆರೋಗ್ಯ, ಭಯದ ರಿವೀಲ್ ಮಾಡಿದ್ದಾರೆ. 

- ನಿಮ್ಮ ಹೆಸರು?
ಮೇಘನಾ ರಾಜ್

Tap to resize

Latest Videos

- 2022ರಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ?
ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬಕ್ಕೆಂದು ಹಾಕಿದ ವಿಡಿಯೋ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು.

ಮೇಘನಾ ರಾಜ್ ವಯಸ್ಸೆಷ್ಟು, ಮಾತೃಭಾಷೆ ಯಾವುದು; ಗೂಗಲ್‌ನಲ್ಲಿ ಅಭಿಮಾನಿಗಳು ಹುಡುಕಿರುವ ಪ್ರಶ್ನೆಗೆ ಉತ್ತರ ಕೊಟ್ಟ ನಟಿ

- ಕಳೆದ ವರ್ಷಕ್ಕಿಂದ ಈ ವರ್ಷ ನಿಮ್ಮ ವೃತ್ತಿ ಬದುಕು ಅಥವಾ ವೈಯಕ್ತಿಕ ಬದುಕಿನಲ್ಲಿ ಏನು ಬದಲಾಗಿದೆ?
ಪ್ರತಿ ದಿನ ನನ್ನ ಜೀವನದಲ್ಲಿ ಬದಲಾವಣೆ ಕಾಣಿಸುತ್ತಿದೆ. ಮುಂಚೆ ಬದಲಾವಣೆ ಅಂದ್ರೆ ಹೆದರಿಕೊಳ್ಳುತ್ತಿದ್ದೆ ಬದಲಾವಣೆಯನ್ನು ತಡೆಯುತ್ತಿದ್ದೆ ಆದರೆ ಬದಲಾವಣೆ ಚೆನ್ನಾಗಿದೆ ಅನಿಸುತ್ತಿದೆ. ಒಳ್ಳೆಯ ರೀತಿಯಲ್ಲಿ ಬದಲಾವಣೆ ಕಾಣಿಸುತ್ತಿದೆ. ಬೆಳಗ್ಗೆ ಎದ್ದ ತಕ್ಷಣ ಖುಷಿ ಸಿಗುತ್ತಿದೆ.

- ಕಳೆದ ವರ್ಷ ಇದ್ದ ಮೇಘನಾಗೆ ಒಂದು ಸಲಹೆ?
This too shall pass. ಸಮಯ ಕೆಟ್ಟದಿರಲಿ ಒಳ್ಳೆಯದಿರಲಿ ಮುಂದೆ ಸಾಗಬೇಕು. ಆ ಕ್ಷಣ ನಮಗೆ ಟೆನ್ಶನ್ ಆಗಬಹುದು ಉತ್ತರ ಸಿಗದೇ ಇರಬಹುದು ಆದರೆ ಜೀವನ ಸಾಗುತ್ತದೆ.

- ಈ ವರ್ಷ ಏನನ್ನು ಹೊಸದಾಗಿ ಪ್ರಯತ್ನ ಪಡಲು ಇಷ್ಟ ಪಡುತ್ತೀರಾ?
ಹೆಚ್ಚಿಗೆ ಪ್ರವಾಸ ಮಾಡಬೇಕು. ಈ ವರ್ಷ ಮಗನ ಜೊತೆ ಎಲ್ಲಾದರೂ ಹೋಗಬೇಕು. ಮಕ್ಕಳ ಜೊತೆ ಪ್ರಯಾಣ ಮಾಡುವುದು ಕಷ್ಟ ಅಂತಾರೆ ಆದರೆ ಈಗ ಅವನನ್ನು ಸಂಭಾಳಿಸಬಹುದು. 

- ಸದ್ಯಕ್ಕೆ ಜೀವನದಲ್ಲಿ ಏನು ಮುಖ್ಯ?
ರಾಯನ್ ರಾಜ್‌ ಸರ್ಜಾಗಿಂತ ಜೀವನದಲ್ಲಿ ನನಗೆ ಏನೂ ಮುಖ್ಯವಿಲ್ಲ. 

- 2023ರಲ್ಲಿ ನಿಮ್ಮ ಗೋಲ್?
ರಾಯನ್ ನನಗೆ ತುಂಬಾನೇ ಮುಖ್ಯ ಅಷ್ಟೇ ಮುಖ್ಯವಾಗಿ ನನ್ನನ್ನು ನಾನು ನೋಡಿಕೊಳ್ಳಬೇಕು. ಮರ ತನ್ನನ್ನು ತಾನು ಚೆನ್ನಾಗಿ ನೋಡಿಕೊಂಡಿಲ್ಲ ಅಂದ್ರೆ ನೆರಳು ಕೊಡಲು ಆಗುವುದಿಲ್ಲ ಎಂದು ಒಂದು ಮಾತಿಗೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ನನ್ನನ್ನು ನಾನು ನೋಡಿಕೊಂಡಿಲ್ಲ ಅಂದ್ರೆ ರಾಯನ್‌ನ ನೋಡಿಕೊಳ್ಳುವುದು ಕಷ್ಟ. 

- ಯಾವುದರ ಬಗ್ಗೆ ಭಯವಿದೆ?
ಬಾಲ್ಯದಿಂದಲೂ ನನಗೆ ಕೆಲವೊಂದು ಘಟನೆಗಳನ್ನು ಮರುಕಳಿಸುವುದು ಅಂದ್ರೆ ಭಯ ಅಗುತ್ತಿತ್ತು. ಇವತ್ತು ಈ ಸಮಯಕ್ಕೆ ಈ ರೀತಿ ಮಳೆ ಬಂದಿದಕ್ಕೆ ಆಯ್ತು ಅಂದ್ರೆ ಮತ್ತೊಂದು ದಿನ ಏನಾದರೂ ಆದರೆ ಅದನ್ನು ಕೆನಕ್ಟ್‌ ಮಾಡಿಕೊಳ್ಳುವೆ. ಈ ಭಯಕ್ಕೆ ಏನೆಂದು ಕರೆಯುತ್ತಾರೆ ಗೊತ್ತಿಲ್ಲ.

- ಸದ್ಯಕ್ಕೆ ಖುಷಿಯಾಗಿದ್ದೀರಾ?
ಎಷ್ಟೋ ವಿಚಾರಗಳಲ್ಲಿ ಖುಷಿ ಸಿಗುತ್ತದೆ. ನಾನು ಖುಷಿಯಾಗಿರುವೆ. 

ಕೊನೆಗೂ ಮೇಘನಾ ರಾಜ್‌ ದುಬಾರಿ ಬ್ಯಾಗ್ ರಿವೀಲ್; ಮಗನ ವಸ್ತುಗಳಿಲ್ಲ ಎಂದು ಕಾಲೆಳೆದ ನೆಟ್ಟಿಗರು

- ಭವಿಷ್ಯದ ಒಂದು ದೊಡ್ಡ ಚಾಲೆಂಜ್‌?
ಆರೋಗ್ಯವಾಗಿರುವ ಆಹಾರ ಸೇವಿಸಬೇಕು, ಚೆನ್ನಾಗಿ ನಿದ್ರೆ ಮಾಡಬೇಕು ಹಾಗೂ ಪ್ಯಾರನಾಯಿಡ್‌ (ಅಸಮಂಜಸವಾಗಿ ಅಥವಾ ಗೀಳಿನ ಆತಂಕ, ಅನುಮಾನಾಸ್ಪದ ಅಥವಾ ಅಪನಂಬಿಕೆ) ಆಗಬಾರದು.   

 

click me!