
ಸಿನಿಮಾ ಮಾತುಕತೆ ಹಾಗೂ ಚಿತ್ರೀಕರಣ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. 2021ರಲ್ಲಿ ಅದ್ಧೂರಿಯಾಗಿ ತೆರೆ ಕಾಣಲಿರುವ ಪೊಗರು ಚಿತ್ರ ಈಗಾಗಲೇ ಸಾಕಷ್ಟು ದಾಖಲೆ ನಿರ್ಮಿಸಿದೆ. ಪೋಸ್ಟರ್, ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಸುದ್ದಿಯಲ್ಲಿದೆ. ಈಗ ಹೊಸ ವಿಚಾರ ಏನೆಂದರೆ ಪೊಗರು ಚಿತ್ರದ ಖರಾಬು ಹಾಡನ್ನು ಇಲ್ಲೊಬ್ಬ ಕೋಲೆ ಬಸವ ನುಡಿಸಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ನೀವೂ ನೋಡಿ....
ಧ್ರುವ ಸರ್ಜಾಗೆ ಸಾಥ್ ಕೊಟ್ಟ ಆಟೋ ಚಾಲಕರು; ವಿಡಿಯೋ ಎಲ್ಲೆಡೆ ವೈರಲ್!
ಖರಾಬು ಹಾಡು 175 ಮಿಲಿಯನ್ ವೀಕ್ಷಣೆ ಪಡೆದು 2020ರಲ್ಲಿ ಭಾರತದ ಟಾಪ್ 50 ಹಾಡುಗಳಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ಚಂದನ್ ಶೆಟ್ಟಿ ಸಂಯೋಜನೆ ಹಾಗೂ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಊರೊಂದರಲ್ಲಿ ಕೋಲೆ ಬಸವ ತನ್ನ ನಾದಸ್ವರದಲ್ಲಿ ನುಡಿಸಿದ್ದಾನೆ. ಹಾಡು ನುಡಿಸುತ್ತಿದ್ದಂತೆ ಪಕ್ಕದಲ್ಲಿ ನಿಂತಿದ್ದ ಬಸವ ತಲೆಯಾಡಿಸಿದೆ. ಧ್ರುವ ಟ್ಟಿಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡು, 'ಪೊಗರು. ಜೈ ಹನುಮಾನ್' ಎಂದು ಟ್ಟೀಟ್ ಮಾಡಿದ್ದಾರೆ.
ಧ್ರುವ ಸರ್ಜಾ 'ದುಬಾರಿ'ಗೆ ಶ್ರೀಲೀಲಾ ನಾಯಕಿ; ಡಿಸೆಂಬರ್ 3ನೇ ವಾರದಿಂದ ಚಿತ್ರೀಕರಣ ಆರಂಭ!
ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ. ಇನ್ನೇನು ರಿಲೀಸ್ ಆಗುವುದೊಂದೇ ಬಾಕಿ. ಈ ನಡುವೆ ಧ್ರುವ ಸರ್ಜಾ ಅಣ್ಣನ ಹುಟ್ಟಿದ್ದಬ್ಬದ ದಿನದಂದು ನಂದ ಕಿಶೋರ್ ನಿರ್ದೇಶನ 'ದುಬಾರಿ' ಚಿತ್ರಕ್ಕೆ ಸಹಿ ಮಾಡಿದ್ದಾರೆ. ನಾಲ್ಕು ವರ್ಷಗಳಿಂದ ಶ್ರಮಪಟ್ಟು ಬೆಳೆಸಿದ್ದ ಕೊದಲನ್ನು ಕ್ಯಾನ್ಸರ್ ಮಕ್ಕಳಿಗೆ ದಾನ ಮಾಡಿದ್ದಾರೆ. ಹೊಸ ಲುಕ್ ಮೂಲಕ ಫ್ಯಾಮಿಲಿ ಕತೆಯಲ್ಲಿ ಧ್ರುವ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.