
ನಟ ದರ್ಶನ್ ಬಳ್ಳಾರಿ ಜೈಲ್‌ಲಿಗೆ ಶಿಫ್ಟ್ ಆಗಿ 20 ದಿನಗಳು ಕಳೆದವು. ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಸಹವಾಸ ಮಾಡಿ ಮೋಜು ಮಸ್ತಿ ಮಾಡಿಕೊಂಡಿದ್ದ ದಾಸನಿಗೆ ಬಳ್ಳಾರಿ ಜೈಲು ಅಸಲಿ ಸೆರೆಮನೆಯ ದರ್ಶನ ಮಾಡಿಸಿದೆ. ಬಳ್ಳಾರಿಯ ಜೈಲಿನ ಕಟ್ಟುನಿಟ್ಟಿನ ರೂಲ್ಸ್ ಎದುರು ದಾಸ ಸುಸ್ತಾಗಿದ್ದಾರೆ. ಇವತ್ತು ದರ್ಶನ್‌ನ ನೋಡೋದಕ್ಕೆ ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಮಗನ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. ಅಮ್ಮನ ಅಪ್ಪುಗೆಯಲ್ಲಿ ದಾಸ ಸಮಾಧನ ಪಟ್ಟಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಒಂದು ಎಮೋಷನಲ್ ಕ್ರಿಯೇಟ್ ಆಗಿದೆ ಯಾಕಂದ್ರೆ ಕನ್ನಡದ ಟಾಪ್ ಸೆಲೆಬ್ರಿಟಿ ದರ್ಶನ್ ತೂಗುದೀಪ್ ತನ್ನ ತಾಯಿ ಮೀನಾ ತೂಗುದೀಪರನ್ನ ಭೇಟಿ ಮಾಡಿದ ಘಟನೆ ನಡೆದಿದೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಮೇಲೆ ಇದೇ ಮೊದಲ ಬಾರಿ ಮೀನಾ ತೂಗುದೀಪ್ ಜೈಲಿಗೆ ಹೋಗಿ ಮಗನನ್ನ ನೋಡಿ ಬಂದಿದ್ದಾರೆ.
ಈ ಹಿಂದೆ ಪರಪ್ಪನ ಅಗ್ರಹಾರದಲ್ಲಿದ್ದಾಗ ಒಂದೊಮ್ಮೆ ಜೈಲಿಗೆ ಬಂದು ದರ್ಶನ್‌ನ ಸಂತೈಸಿದ್ರು ಮೀನಾ ತೂಗುದೀಪ್. ಆದರೆ ಪರಪ್ಪನ ಅಗ್ರಹಾರದಲ್ಲಿ ದರ್ಬಾರ್ ಮಾಡೋದಕ್ಕೆ ಹೋಗಿ ಲಾಕ್ ಆದ ದರ್ಶನ್‌ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಲ್ಲಿಗೆ ಬಂದ ಮೇಲೆ ನನ್ನ ನೋಡೋಕೆ ಮನೆಯವರು ಬಳ್ಳಾರಿಗೆ ಬರಬೇಕು ನನಗೆ ಬೆಂಗಳೂರು ಸುತ್ತ ಮುತ್ತ ಜೈಲು ಇದ್ರೆ ಶಿಫ್ಟ್ ಮಾಡಿ ಅಂತ ದರ್ಶನ್ ಬೇಡಿಕೆ ಇಡುತ್ತಿದ್ದಾರೆ. ಆದರೆ ಬಳ್ಳಾರಿ ಆದರೇನು ಬೆಳಗಾವಿ ಆದರೇನು ಬೆಂಗಳೂರು ಆದರೇನು ಮಗನನ್ನು ನೋಡೋಕೆ ಜೈಲಿಗೆ ಹೋಗಬೇಕಲ್ವಾ. ಹೀಗಾಗೆ ಮೀನಾ ತೂಗುದೀಪ್ ದರ್ಶನ್ಗಾಗಿ ಬಳ್ಳಾರಿಗೆ ಹೋಗಿ ಬಂದಿದ್ದಾರೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಸ್ಥಿತಿ ಕಂಡು ಮೀನಾ ತೂಗುದೀಪ್ ಕಣ್ಣೀರಿಟ್ಟಿದ್ದಾರೆ. ಅಮ್ಮ ಮೀನಾ ಮಗ ದರ್ಶನ್ರ ಅಪ್ಪಿ ಅತ್ತಿದ್ದಾರೆ..
ಲೈವ್ ಇರಲ್ಲ, ಎಕ್ಸಟ್ರಾ ವಿಡಿಯೋ ಕೊಡಲ್ಲ; ಬಿಗ್ ಬಾಸ್ ಸೀಸನ್ 11ರ ಬಗ್ಗೆ ಮುಚ್ಚಿಟ್ಟಿದ್ದ ಬೇಸರದ ಸತ್ಯ ಇಲ್ಲಿದೆ!
ಸಂದರ್ಶಕರ ಕೋಠಡಿಯಲ್ಲಿ ದರ್ಶನ್ ಸ್ಥಿತಿ ಕಂಡು ಮೀನಮ್ಮ ಅಕ್ಷರಶಃ ಕಣ್ಣೀರು ಹಾಕಿದ್ದಾರಂತೆ. ನಗುನಗುತ್ತಲೇ ಅಮ್ಮನ ಭೇಟಿಗೆ ಬಂದಿದ್ದ ದರ್ಶನ್, ಅಮ್ಮನನ್ನ ಕಂಡು ಭಾವುಕರಾಗಿದ್ದಾರೆ. ತಾಯಿ ಮೀನಾ ಜೊತೆಗೆ ದರ್ಶನ್ ಅಕ್ಕ, ಭಾವ, ಹಾಗೂ ಅಕ್ಕನ ಮಕ್ಕಳು ಭೇಟಿಗೆ ಬಂದಿದ್ದರು. ಇವರೆಲ್ಲರು ದರ್ಶನ್ ಸ್ಥಿತಿ ಕಂಡು ಮರುಗಿದ್ದಾರೆ. ಮನೆಯಿಂದ ತಂದ ಒಂದಿಷ್ಟು ಡ್ರೈಪ್ರೂಟ್ಸ್ ನ ದರ್ಶನ್ ಕೈಗಿಟ್ಟು ಮರಳಿ ಬಂದಿದ್ದಾರೆ. ದರ್ಶನ್ ಇಷ್ಟು ಎತ್ತರಕ್ಕೆ ಬೆಳೆಯೋದರ ಹಿಂದೆ ಮೀನಮ್ಮನ ಶ್ರಮ ಇದೆ. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದ ಹೆಸರಾಂತ ಖಳನಟ. ಆದರೆ ತೂಗುದೀಪ ಶ್ರೀನಿವಾಸ್ 52ರ ಹರೆಯದಲ್ಲೇ ಅನಾರೋಗ್ಯದಿಂದ ನಿಧನರಾದ್ದರು. ಆಗ ದರ್ಶನ್‌ಗೆ ಜಸ್ಟ್ 17 ವರ್ಷ ವಯಸ್ಸು. ಓದಿನಲ್ಲಿ ಅಷ್ಟೇನು ಆಸಕ್ತಿಯಿಲ್ಲದ ದರ್ಶನ್‌ಗೆ ತಂದೆಯಂತೆ ನಟನಾಗುವ ಆಸೆಯಿತ್ತು. ತಾಯಿ ಮೀನಾ ತೂಗುದೀಪ ಮಗನ ಆಸೆಗೆ ಸಾಥ್ ಕೊಟ್ಟು ಬೆನ್ನುಲುಬಾಗಿ ನಿಂತಿಕೊಂಡರು. ಎತ್ತರಕ್ಕೆ ಬೆಳೆದು ನಿಂತು ಹೆಸರು ಕೀರ್ತಿ ಸಂಪಾಧಿಸಿರೋ ದರ್ಶನ್ ಅಮ್ಮನನ್ನ ನೋಡಿಕೊಳ್ಳಬೇಕಿತ್ತು. ಆದರೆ ಮಗನನ್ನೇ ಜೈಲಿನಲ್ಲಿ ನೋಡೋ ಸ್ಥಿತಿ ಮೀನಾ ತೂಗುದೀಪ್ ಅವರಿಗೆ ಬಂದಿದ್ದು ಮಾತ್ರ ನಿಜಕ್ಕೂ ಬೇಸರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.