ಕನ್ನಡ ಚಿತ್ರರಂಗದ ಉಳಿವು, ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು: ನಟ ರಿಷಬ್ ಶೆಟ್ಟಿ

By Kannadaprabha News  |  First Published Aug 19, 2024, 9:57 AM IST

ಸಾಮಾಜಿಕ ಮಾಧ್ಯಮಗಳಿಂದ ತೀವ್ರ ಸ್ಪರ್ಧೆ ನಡುವೆಯೂ ಅತ್ಯಂತ ಜವಾಬ್ದಾರಿಯುತವಾಗಿ ಸಮಯದ ಮಿತಿಯಲ್ಲಿ ನಿರಂತರವಾಗಿ ಸುದ್ದಿಗಳನ್ನು ಸುದ್ದಿ ವಾಹಿನಿಗಳು ಜನಸಾಮಾನ್ಯರಿಗೆ ತಲುಪಿಸುತ್ತಿವೆ ಎಂದು 'ಕಾಂತಾರ' ಖ್ಯಾತಿಯ ಚಿತ್ರನಟ ರಿಷಬ್ ಶೆಟ್ಟಿ ಶ್ಲಾಘಿಸಿದರು. 


ಬೆಂಗಳೂರು (ಆ.19): ಸಾಮಾಜಿಕ ಮಾಧ್ಯಮಗಳಿಂದ ತೀವ್ರ ಸ್ಪರ್ಧೆ ನಡುವೆಯೂ ಅತ್ಯಂತ ಜವಾಬ್ದಾರಿಯುತವಾಗಿ ಸಮಯದ ಮಿತಿಯಲ್ಲಿ ನಿರಂತರವಾಗಿ ಸುದ್ದಿಗಳನ್ನು ಸುದ್ದಿ ವಾಹಿನಿಗಳು ಜನಸಾಮಾನ್ಯರಿಗೆ ತಲುಪಿಸುತ್ತಿವೆ ಎಂದು 'ಕಾಂತಾರ' ಖ್ಯಾತಿಯ ಚಿತ್ರನಟ ರಿಷಬ್ ಶೆಟ್ಟಿ ಶ್ಲಾಘಿಸಿದರು. ನಗರದ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್‌ನಲ್ಲಿ 'ದಿ ನ್ಯೂ ಇಂಡಿಯನ್ ಟೈಮ್ಸ್ ಆಯೋಜಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ದಕ್ಷಿಣ ಭಾರತದ ದೃಶ್ಯ ಮಾಧ್ಯಮಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಕನ್ನಡ ಚಿತ್ರರಂಗದ ಉಳಿವು, ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಿದೆ. 

ನಿರಂತರವಾಗಿ ಕನ್ನಡ ಚಿತ್ರರಂಗಕ್ಕೆ ಬೆಂಬಲಿಸಿ, ಚಿತ್ರಗಳ ಏಳು, ಬೀಳಿನಲ್ಲಿ ಹೆಗಲಾಗಿ ನಿಂತು ಚಿತ್ರರಂಗ ಮತ್ತು ಕಲೆ, ಕಲಾವಿದರ ನೆರವಿಗೆ ಧಾವಿಸುತ್ತಿವೆ. ಈ ಮೂಲಕಕಲೆಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಿವೆ. ಇದರಿಂದಾಗಿ ಸಿನಿಮಾ ಹಾಗೂ ಕಲಾವಿದರನ್ನು ಜಗತ್ತಿಗೆ ಪರಿಚಯಿಸುವ ಮಹತ್ಕಾರ್ಯದಲ್ಲಿ ಮಾಧ್ಯಮದ ಕಾರ್ಯ ಪ್ರಶಂಸನೀಯ ಎಂದರು. ಸಾಮಾಜಿಕ ಜಾಲತಾಣಗಳಿಂದ ಸುದ್ದಿವಾಹಿನಿಗಳು ಅತ್ಯಂತ ಹೆಚ್ಚಿನ ಪೈಪೋಟಿಗೆ ಸಿಲುಕಿದ್ದರೂ ಸಮರ್ಥವಾಗಿ ನೇರ, ದಿಟ್ಟ, ನಿರಂತರವಾಗಿ ಖಚಿತ ಸುದ್ದಿಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿವೆ. ಸುದ್ದಿವಾಹಿನಿಗಳ ಎಲ್ಲ ವಿಭಾಗದ ಸಿಬ್ಬಂದಿಗಳು, ವರದಿಗಾರರು ಶ್ರಮದಿಂದ ಜಗತ್ತಿನೆಲ್ಲೆಡೆಯ ವಿದ್ಯಮಾನಗಳನ್ನು ಜನರು ತಾವು ಕುಳಿತಲ್ಲೇ ನೋಡುವ, ಓದುವಂತಾಗಿದೆ. 

Tap to resize

Latest Videos

ಆರೋಪ ಬಂದ ತಕ್ಷಣ ಪತ್ರಕರ್ತರನ್ನು ಬಂಧಿಸಿದ್ರೆ ಹೇಗೆ?: ಖಾರವಾಗಿಯೇ ಮಾತಾಡಿದ ಸಚಿವ ಪರಮೇಶ್ವರ್

ಇದೆಲ್ಲರದ ಹಿಂದಿನ ಶ್ರಮ ಪತ್ರಕರ್ತರದ್ದು ಎಂಬುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ದಿ ನ್ಯೂ ಇಂಡಿಯನ್ ಟೈಮ್ಸ್ (ಟಿಎನ್ ಐಟಿ) ಸಂಸ್ಥೆಯ ಸಂಸ್ಥಾಪಕ ಎ. ರಾಘವೇಂದ್ರ ಮಾತನಾಡಿ, 2023ರಲ್ಲಿಯೇ ದಕ್ಷಿಣ ಭಾರತದ ಎಲ್ಲ ಸುದ್ದಿವಾಹಿನಿಗಳ ಪತ್ರಕರ್ತರಿಗೆ ಮಾಧ್ಯಮ ಪ್ರಶಸ್ತಿ ಕೊಡುವ ನಿರ್ಧಾರ ಮಾಡಲಾಗಿತ್ತು. ಅಂತೆಯೇ, ಆ ಕನಸು ಇಂದು ನನಸಾಗಿದೆ. ಮಾಧ್ಯಮದವರು ಎಲ್ಲ ಕ್ಷೇತ್ರದ ಸಾಧಕರನ್ನು ಜಗತ್ತಿಗೆ ತೋರಿಸುತ್ತಾರೆ. ಆದರೆ, ಮಾಧ್ಯಮದವರನ್ನೇ ಗುರುತಿಸಿ ಗೌರವಿಸು ವುದು ತುಂಬಾ ವಿರಳ. ಕಲೆ, ಸಾಹಿತ್ಯ, ಸಾಂಸ್ಕೃ ತಿಕ, ರಾಜಕೀಯ, ಸಿನಿಮಾ ಹೀಗೆ ಎಲ್ಲ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲು ಸಾಕಷ್ಟು ಸಂಸ್ಥೆಗಳಿವೆ. 

ಆದರೆ, ನಮ್ಮ ಸಂಸ್ಥೆ ಮಾಧ್ಯಮ ಕ್ಷೇತ್ರದ ಸಾಧಕರನ್ನು ಗುರುತಿಸಿ, ಗೌರವ ಸಮರ್ಪಿಸುವ ಉದ್ದೇಶದಿಂದ ಕಳೆದ ಏಳು ವರ್ಷಗಳಿಂದ ಮಾಧ್ಯಮ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದೆ. ಇದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಹಿರಿಯ ಕಲಾವಿದರಾದ ಶ್ರೀನಾಥ್, ತಾರಾ ಸೇರಿದಂತೆ ನೆನಪಿರಲಿ ಪ್ರೇಮ್, ಅನಿರುದ್ಧ ಜಾತ್ಕರ್, ವಿಜಯ್ ರಾಘವೇಂದ್ರ, ಪ್ರಿಯಾಂಕಾ ಉಪೇಂದ್ರ, ಮಾಲಾಶ್ರೀ, ನಿರಂಜನ್ ದೇಶಪಾಂಡೆ, ವಚನಾನಂದಸ್ವಾಮೀಜಿ,ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.

ಸೋದರ, ಸೋದರಿ ಬಾಂಧವ್ಯ ಗಟ್ಟಿಗೊಳಿಸುವ ರಕ್ಷಾ ಬಂಧನ: ಈ ಹಬ್ಬ ಶುರುವಾಗಿದ್ದು ಮಹಾಭಾರತದ ದ್ರೌಪದಿಯಿಂದ!

ಬೇಸಿಗೆ, ಮಳೆ, ಚಳಿಯೆನ್ನದೆ ವರ್ಷ ಪೂರ್ತಿ ಜನರಿಗೆ ಸುದ್ದಿ ಮುಟ್ಟಿಸುವಂತ ಕೆಲಸವನ್ನು ಮಾಧ್ಯಮಗಳು ಮಾಡುತ್ತಿರುವುದು ಶ್ಲಾಘನೀಯ. ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಎಲ್ಲ ಮಾಧ್ಯಮಗಳಿಗೆ ಮತ್ತು ಪತ್ರಕರ್ತರಿಗೆ ಅಭಿನಂದನೆಗಳು. ಪ್ರಶಸ್ತಿ ಪಡೆದ ಎಲ್ಲ ಸಾಧಕರಿಗೆ ಶುಭಾಶಯಗಳು.
• ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದ

click me!