ಎಂಡಿ ಶ್ರೀಧರ್ ಚಿತ್ರದಲ್ಲಿ ನಾಯಕಿ ಹೆಸರು ಅಂಕಿತಾ ಅಂತ್ಲೇ ಯಾಕಿರುತ್ತೆ..! ಯಕ್ಷಪ್ರಶ್ನೆಗೆ ಸಿಕ್ತಾ ಉತ್ತರ?

By Shriram Bhat  |  First Published Aug 18, 2024, 4:06 PM IST

ಟಾಮ್ ಅಂಡ್ ಜೆರ್ರಿ ರೀತಿಯಲ್ಲಿ ಜಂಬೂ ಸರ್ಕಸ್ ಚಿತ್ರದ ನಾಯಕ ಪ್ರವೀಣ ತೇಜ್ ಹಾಗೂ ನಾಯಕಿ ಅಂಜಲಿ ಎಸ್ ಅನೀಶ್ ಪಾತ್ರ ನಿರ್ವಹಿಸಿದ್ದಾರೆ ಎಂದು ಚಿತ್ರದ ಸಂಭಾಷಣೆಕಾರ ರಘು ನೀಡುವಲ್ಲಿ ವಿವರಿಸಿದರು. ಪೋಷಕ ನಟಿ ಲಕ್ಷ್ಮಿ ಸಿದ್ದಯ್ಯ ಜಗಳಗಂಟಿಯ ಪಾತ್ರ ಮಾಡಿದ್ದು..


ಕನ್ನಡದ ಚಲನಚಿತ್ರದ ಸುಪ್ರಸಿದ್ದ ನಿರ್ದೇಶಕ ಎಂ ಡಿ ಶ್ರೀಧರ್ ಇದುವರೆಗೂ ನಿರ್ದೇಶನ ಮಾಡಿದ ಸಿನಿಮಗಳೆಲ್ಲ ಸೂಪರ್ ಹಿಟ್. ಈಗ ಅವರ 'ಜಂಬೂ ಸರ್ಕಸ್' ಕೂಡ ಆ ನಿಟ್ಟಿನಲ್ಲಿ ಸಾಗುವಂತಿದೆ. ಅದಕ್ಕೆ ಸಾಕ್ಷಿಯಾಗಿ ಒಂದು ಇಂಪಾದ ಹಾಡು 'ಮನಸೂತೆ ಮನಸಾರೆ.. ಕವಿರಾಜ್ ಅವರ ಗೀತ ಸಾಹಿತ್ಯದಲ್ಲಿ ನಕುಲ ಅಭಯಂಕರ ಹಾಡಿರುವ ಈ ಹಾಡನ್ನು ವಾಸುಕಿ ವೈಭವ ಸಂಯೋಜನೆ ಮಾಡಿದ್ದಾರೆ. 

ಈ ಹಾಡನ್ನು ಬಿಡುಗಡೆ ಮಾಡುತ್ತಾ ಚಿತ್ರದ ಇನ್ನೆರಡು ಹಾಡು 'ಗ್ರಹಚಾರ...' ಹಾಗೂ 'ಗಾಂಚಲಿ ಗಂಗವ್ವ...' ಸಹ ಮಾಧ್ಯಮದರ ಮುಂದೆ ಕಳೆದ ಶನಿವಾರ ಎಂ ಎಂ ಬಿ ಲೆಗಸಿ ಸಭಾಂಗಣದಲ್ಲಿ ಅನಾವರಣ ಮಾಡಲಾಯಿತು. 'ಜಂಬೂ ಸರ್ಕಸ್' ಚಿತ್ರಕ್ಕೆ ಕಥಾ ಹಂದರ ಮೊದಲು ಬಂದಿದ್ದು ಹಾಸ್ಯ ನಟ ಸುಂದರ್ ವೀಣಾ ಅವರಿಂದ. ಅಲ್ಲಿಂದ ನಾವೆಲ್ಲ ಕುಳಿತು ಅದನ್ನು ಪಸಂದಾಗಿ ಮನರಂಜನೆ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಹಾಗೆ ಚಿತ್ರಕಥೆ ಸಿದ್ದ ಮಾಡಿದೆವು ಎಂದು ಕಾರ್ಯಕಾರಿ ನಿರ್ಮಾಪಕಿ ಸುಪ್ರೀತ ಶೆಟ್ಟಿ ಹೇಳಿಕೊಂಡರು. 

Tap to resize

Latest Videos

undefined

ಸಮಂತಾಗೆ ಈಗ ಜ್ಞಾನೋದಯ ಆಯ್ತಾ ಅಂತ ಕೇಳಿದ್ರೆ ಏನ್ ಹೇಳೋದು ಅಂತ ಯೋಚಿಸ್ತಿದೀರಾ..!?

ಈ ಚಿತ್ರಕ್ಕೆ ಎಂ ಡಿ ಶ್ರೀಧರ್ ಅಂತಹ ನಿರ್ದೇಶಕರು ಇದ್ದ ಮೇಲೆ ಸಿನಿಮಾಕ್ಕೆ ಒಂದು ದೊಡ್ಡ ತೂಕ ಬಂದಿತು ಎಂದು ಅವರು ಮೆಚ್ಚುಗೆ ತಿಳಿಸಿದರು. ನಿರ್ಮಾಪಕ ಎಚ್ ಸಿ ಸುರೇಶ್ ಈ ಜಂಬೂ ಸರ್ಕಸ್ ಅನ್ನು ನಿಮ್ಮ ಸಿನಿಮಾ ಎಂದು ಪ್ರೋತ್ಸಾಹಿಸಿ ಎಂದು ಮಾಧ್ಯಮದರನ್ನು ಹಾರೈಸುವಂತೆ ವಿನಂತಿಸಿಕೊಂಡರು. ಖ್ಯಾತ ನಿರ್ದೇಶಕ ಎಂ ಡಿ ಶ್ರೀಧರ್ ಜಂಬೂ ಸರ್ಕಸ್ ಸಿನಿಮಾದಲ್ಲೂ ಸಹ ನಾಯಕಿಯ ಹೆಸರನ್ನು ಅಂಕಿತ ಎಂದು ಮುಂದುವರೆಸಿದ್ದಾರೆ. 

ಅವರ ಮೊದಲ ಸಿನಿಮಾದಿಂದಲೂ ಸಹ ನಾಯಕಿಗೆ ಅಂಕಿತ ಎಂದೇ ಇರಬೇಕು ಎಂದು ಅವರ ಸಂಕಲ್ಪ ಯಾಕೆ ಮಾಡಿದ್ದಾರೆ ಎಂಬ ಗುಟ್ಟನ್ನು ಅವರು ಬಿಟ್ಟುಕೊಡಲಿಲ್ಲ. ವಾಸುಕಿ ವೈಭವ ಅವರ ಸುಶ್ರಾವ್ಯದ ಸಂಗೀತವನ್ನು ಕೊಂಡಾಡಿದ ನಿರ್ದೇಶಕ ಶ್ರೀಧರ್ ಜಂಬೂ ಸರ್ಕಸ್ ಸಿನಿಮಾವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಅಂದುಕೊಂಡಿದ್ದಾರೆ. 

ಅಂದಹಾಗೆ, ನಿರ್ದೇಶಕ ಶ್ರೀಧರ್ ಅವರು ಕಾರ್ಯಕಾರಿ ನಿರ್ಮಾಪಕಿ ಸುಪ್ರೀತ ಶೆಟ್ಟಿ ಅವರ ವಸ್ತ್ರ ವಿನ್ಯಾಸದ ಪರಿಣಿತಿಯನ್ನು ಹೊಗಳಿ ಅವರನ್ನು ತಮ್ಮ ಮುಂದಿನ ಸಿನಿಮಗಳಲ್ಲಿ ಸಹ ಜೊತೆಯಾಗಿದ್ದರೆ ಅನುಕೂಲ ಆಗುವುದು ಎಂದು ತಿಳಿಸಿದರು. ನಾಯಕ ಪ್ರವೀಣ ತೇಜ್  ಹಾಗೂ ನಾಯಕಿ ಅಂಜಲಿ ಅವರಿಗೆ ಪ್ರತಿಭೆ ಹೇರಳವಾಗಿದೆ. ಅವರಿಬ್ಬರೂ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಕ್ಕೆ ಏರಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು ನಿರ್ದೇಶಕ ಎಂ ಡಿ ಶ್ರೀಧರ್.

ಟಾಮ್ ಅಂಡ್ ಜೆರ್ರಿ ರೀತಿಯಲ್ಲಿ ಜಂಬೂ ಸರ್ಕಸ್ ಚಿತ್ರದ ನಾಯಕ ಪ್ರವೀಣ ತೇಜ್ ಹಾಗೂ ನಾಯಕಿ ಅಂಜಲಿ ಎಸ್ ಅನೀಶ್ ಪಾತ್ರ ನಿರ್ವಹಿಸಿದ್ದಾರೆ ಎಂದು ಚಿತ್ರದ ಸಂಭಾಷಣೆಕಾರ ರಘು ನೀಡುವಲ್ಲಿ ವಿವರಿಸಿದರು. ಪೋಷಕ ನಟಿ ಲಕ್ಷ್ಮಿ ಸಿದ್ದಯ್ಯ ಜಗಳಗಂಟಿಯ ಪಾತ್ರ ಮಾಡಿದ್ದು, ಈ ಚಿತ್ರದಲ್ಲಿ ಕೆಲಸ ಮಾಡಿದ್ದು ಸಮಾಧಾನ ಹಾಗೂ ಸಂತೋಷ ತಂದಿದೆ ಎಂದು ವಿವರಿಸಿದರು. 

ನಾಯಕ ಪ್ರವೀಣ ತೇಜ್ ಮಾತನಾಡುತ್ತಾ ನಾನು ಇಂದು ಚಿತ್ರರಂಗದಲ್ಲಿ ಇರೋದಕ್ಕೆ ನಿರ್ದೇಶಕ ಎಂ ಡಿ ಶ್ರೀಧರ್ ಕಾರಣ. ಅವರ ನಿರ್ದೇಶನದ ಸಿನಿಮಾ ಎಂದು ನಿರ್ಮಾಪಕ ಸುರೇಶ್ ಹೇಳಿದಾಗ ನಾನು ಕುಣಿದು ಕುಪ್ಪಳಿಸಿದೆ. ಅದಕ್ಕೆ ತಕ್ಕಂತೆ ಅವರು ನನಗೆ ವಿಭಿನ್ನವಾದ ಪಾತ್ರ ನಿರ್ವಹಣೆ ಸಹ ನೀಡಿ ಸಂತೋಷ ಇನ್ನೂ ಹೆಚ್ಚು ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕಿ ಅಂಜಲಿ ನನಗಿಂತ ಚನ್ನಾಗಿ ನೃತ್ಯ ಮಾಡಿದ್ದಾರೆ ಎಂಬ ವಿಚಾರವನ್ನು ನಾಯಕ ಪ್ರವೀಣ ತೇಜ್ ಹೇಳಿಕೊಂಡರು. 

ಪ್ರಿಯಾಂಕಾ ಚೋಪ್ರಾ ಬಾಯಿಂದ ಇದೆಂಥಾ ಮಾತು, ಲೈಫ್ ರಿಯಾಲಿಟಿ ಅಂದ್ರೆ ಇದೇನಾ..!?

ಒಳ್ಳೆ ಪಾತ್ರಗಳು ಕಷ್ಟ ಸಿಗುವುದು. ಅದು ನನ್ನ ಪಾಲಾಗಿದೆ ಈ ಚಿತ್ರದಲ್ಲಿ. ಇದಕ್ಕೆ ಎಲ್ಲರ ಪ್ರೋತ್ಸಾಹ ಬೇಕು ಎಂದು ಮನವಿ ಮಾಡಿಕೊಂಡರು ನಾಯಕಿ ಅಂಜಲಿ ಎಸ್ ಅನೀಶ್. ಖ್ಯಾತ ಛಾಯಾಗ್ರಾಹಕ ಎ ವಿ ಕೃಷ್ಣಕುಮಾರ್ ಹಲವು ಬಾರಿ ಭವಿಷ್ಯ ನುಡಿದದ್ದು ನಿಜವಾಗಿದೆ. ಜಂಬೂ ಸರ್ಕಸ್ ಇಂದ ನಾಯಕಿ ಅಂಜಲಿ ಹಾಗೂ ನಾಯಕ ಪ್ರವೀಣ್ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು. 

click me!