* ಹಿರಿಯ ನಟ ಅನಂತ್ ನಾಗ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್
* ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ನೀಡಲು ನಿರ್ಧಾರ.
* ವಿವಿಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಮಾಹಿತಿ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ, (ಜುಲೈ.14) : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ನಾಳೆ(ಜುಲೈ 15) ಕೋಲಾರದ 'ನಂದಿನಿ ಪ್ಯಾಲೇಸ್' ಸಭಾಂಗಣದಲ್ಲಿ ನಡೆಯಲಿದೆ.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿಸೇವೆ ಸಲ್ಲಿಸಿರುವ ಮೂವರನ್ನು ಗುರುತಿಸಿ ನಾಳೆ(ಜು.15) ಕೋಲಾರ ಜಿಲ್ಲೆಯಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧಾರ ಮಾಡಲಾಗಿದೆ.
ಉತ್ತರ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಕಾರ್ಯಕ್ರಮ ಇದಾಗಿದ್ದು,ಹಿರಿಯ ನಟ ಅನಂತ್ ನಾಗ್, ಶಹನಾಯ್ ವಾದಕರಾದ ಎಸ್.ಬಲ್ಲೇಶ್ ಭಜಂತ್ರಿ ಹಾಗೂ ಲಿಟರೇಚರ್ ಪದವಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಕೊಡುಗೆಗಾಗಿ ಬೆಂಗಳೂರಿನ ಶರದ್ ಶರ್ಮ ಅವರಿಗೆ 'ಡಾಕ್ಟರ್ ಆಫ್ ಸೈನ್ಸ್’ ಅವರಿಗೆ ಪದವಿ ನೀಡಲು ನಿರ್ಧಾರ ಮಾಡಲಾಗಿದೆ.
ಪ್ರಸ್ತುತ ಕಾಲಕ್ಕೆ ಬೇಕಾದ ಉತ್ತಮ ಸಿನಿಮಾ ಗಾಳಿಪಟ 2: ಅನಂತನಾಗ್
ನಾಳೆ(ಶುಕ್ರವಾರ) ಕೋಲಾರ ಹೊರಹೊಲಯದಲ್ಲಿರುವ ನಂದಿನಿ ಪ್ಯಾಲೇಸ್‌ನಲ್ಲಿ ನಡೆಯಲಿರುವ ಮೊದಲನೇ ವರ್ಷದ ವಿ.ವಿಯ ಘಟಿಕೋತ್ವವ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ ಸೇರಿದಂತೆ ಮತ್ತಿತರ ಗಣ್ಯರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದ್ದಾರೆ. ಜೊತೆಗೆ ವಿವಿಧ ವಿಷಯಗಳಲ್ಲಿ ಮೊದಲ ರ್ಯಾಂಕ್ ಪಡೆದಿರುವ ಸುಮಾರು 41 ಅಭ್ಯರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ಪ್ರೊ. ನಿರಂಜನ ವಾನಳ್ಳಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಇನ್ನು ಹಿರಿಯ ನಟ ಅನಂತ್ ನಾಗ್ ಅವರು ಕನ್ನಡ, ಹಿಂದಿ, ಮರಾಠಿ, ಮಲೆಯಾಳಿ ಸೇರಿದಂತೆ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತದಲ್ಲಿ ತಮ್ಮದೆಯಾದ ಛಾಪು ಮೂಡಿಸಿರುವ ಕೆಲವೇ ಕೆಲವು ನಟರಲ್ಲಿ ಅನಂತ್ ನಾಗ್ ಅವರು ಸಹ ಒಬ್ಬರು ಆಗಿರೋದು ವಿಶೇಷವಾಗಿದ್ದು,ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಅಭೂತಪೂರ್ವ ಕೊಡುಗೆಯನ್ನು ಗುರುತಿಸಿ ಹಿರಿಯ ನಟ ಅನಂತ್ ನಾಗ್ ಅವರಿಗೆ ವಿಶ್ವವಿದ್ಯಾಲಯವು ಡಿ.ಲಿಟರೇಚರ್ ಪದವಿ ನೀಡಲು ತೀರ್ಮಾನಿಸಿದೆ.
ಇನ್ನು ಹೆಸರಾಂತ ಶಾಹನಾಯ್ ವಾದಕರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಆಗಿರುವ ಎಸ್ ಬಲ್ಲೇಶ್ ಭಜಂತ್ರಿ ಅವರು ಸಂಗೀತ ಕ್ಷೇತ್ರದಲ್ಲಿ ನೀಡಿರುವ ಸೇವೆಯನ್ನು ಗುರುತಿಸಿ ಬೆಂಗಳೂರು ಉತ್ತರ ವಿ.ವಿಯು ದಿ.ಲಿಟರೇಚರ್ ಪದವಿನೀಡಿ ಗೌರವಿಸಲು ನಿರ್ಧರಿಸಿದ್ದು.ಎಸ್ ಬಲ್ಲೇಶ್ ಭಜಂತ್ರಿ ಅವರು ಭಾರತರತ್ನ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಶಾಹನ್ ವಾಯ್ ವಾದಕರಾದ ಬಿಸ್ಮಿಲ್ಲಾ ಖಾನ್ ಅವರ ಶಿಷ್ಯರು ಸಹ ಆಗಿದ್ದಾರೆ.40 ವರ್ಷಗಳ ಕಾಲ ಬಿಸ್ಮಿಲ್ಲಾ ಖಾನ್ ಅವರ ಜೊತೆ ಶಹನ್ ವಾಯ್ ನುಡಿಸಿರುವ ಹೆಗ್ಗಳಿಕೆ ಎಸ್.ಬಲ್ಲೇಶ್ ಭಜಂತ್ರಿ ಅವರಿಗೆ ಸಲ್ಲುತ್ತದೆ.
ಇನ್ನು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆಗಿರುವ ಕೊಡುಗೆ ನೀಡಿರುವ ಬೆಂಗಳೂರಿನ ಐ ಸ್ಪಿರ್ಟ ಸಾಪ್ಟ್ ರ್ವೇ ಕಂಪನಿಯ ಸಹಾ₹ ಸಂಸ್ಥಾಪಕರು ಆಗಿರುವ ಶರತ್ ಶರ್ಮ ಅವರಿಗೂ ಬೆಂಗಳೂರು ಉತ್ತರ ವಿವಿ ಯಿಂದ ಗೌರವ ಡಾಕ್ಟರೇಟ್ ಪದವಿಗೆ ನೀಡಲು ನಿರ್ಧಾರ ಮಾಡಲಾಗಿದೆ. ಡಿಜಿಟಲ್ ಪೇಮೆಂಟ್ ನ ಹಿಂದಿನ ರೂವಾರಿಯೂ ಆಗಿರುವ ಶರತ್ ಶರ್ಮ ಅವರು ವಿಶೇಷವಾಗಿ ಯುಪಿಐ ಡಿಜಿಟಲ್ ಪೇಮೆಂಟ್ ನ ಸೂತ್ರದಾರಿ ಆಗಿರುವುದು ಇವರ ವಿಶೇಷ.ಇವರ ಸಾಧನೆಯನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹಲವಾರು ಗಣ್ಯರು ಕೊಂಡಾಡಿದ್ದಾರೆ.