
ನವಿರಾದ ಪ್ರೇಮಕಥೆ ಜೂನಿ ಸಿನಿಮಾಗೆ ವಿಮರ್ಶಕರ ವಲಯದಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೈಭವ್ ಮಹಾದೇವ್ ಸಾರಥ್ಯದ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಹಾಗೂ ರಿಷಿಕಾ ಜೋಡಿಯಾಗಿ ನಟಿಸಿದ್ದರು. ಟ್ರೇಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಜೂನಿ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಮೊದಲ ದಿನ ಒಳ್ಳೆ ಓಪನಿಂಗ್ ಪಡೆದುಕೊಂಡ ಚಿತ್ರಕ್ಕೀಗ ಪ್ರೇಕ್ಷಕರ ಕೊರತೆ ಎದುರಾಗಿದೆ.
ಈ ಬಗ್ಗೆ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿರುವ ಪೃಥ್ವಿ, ದಿಯಾ (Dia Movie) ಸಿನಿಮಾವನ್ನು ಒಟಿಟಿಯಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ಅದೇ ತರ ಜೂನಿ (Juni) ಸಿನಿಮಾವನ್ನು ಮಾಡಬೇಡಿ. ಥಿಯೇಟರ್ ನಲ್ಲೇ ಬಂದು ನೋಡಿ ಎಂದು ಪ್ರೇಕ್ಷಕರಿಗೆ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಹೊಸಬರು ಹೊಸ ಪ್ರಯೋಗ ಮಾಡ್ತಾರೆ. ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಒಳ್ಳೆ ರಿವ್ಯೂ ಬಂದಾಗ ಜನ ಥಿಯೇಟರ್ ಗೆ ಬಂದು ಚಿತ್ರ ವೀಕ್ಷಿಸಬೇಕು. ಜೂನಿ ಈ ವರ್ಷದ ಅದ್ಭುತ ಸಿನಿಮಾಗಳಲ್ಲಿ ಒಂದು. ಮಾನಸಿಕ ರೋಗ ಇರುವ ಹುಡುಗಿಯಾಗಿ ರಿಷಿಕಾ ಹಾಗೂ ಆಕೆಯನ್ನು ಹುಚ್ಚನಂತೆ ಪ್ರೀತಿಸುವ ಪಾರ್ಥನಾಗಿ ಪೃಥ್ವಿ ಅಮೋಘವಾಗಿ ಅಭಿನಯಿಸಿದ್ದಾರೆ.
ಸಾಯುವುದಕ್ಕೆ ಎರಡು ದಶಕಗಳ ಮೊದಲೇ ಸಾವಿನ ಬಾಗಿಲು ತಟ್ಟಿ ಬಂದಿದ್ದರು ನಟ ವಿಷ್ಣುವರ್ಧನ್!
ಹೊಸತನ, ಹಗುರ, ಲವಲವಿಕೆಯಿಂದ ಕೂಡಿರುವ ಜೂನಿ ಥಿಯೇಟರ್ ನಲ್ಲಿ ನೋಡಲೇಬೇಕಾದ ಚಿತ್ರ. ಆದರೆ ಪ್ರೇಕ್ಷಕರು ಕೊರತೆಯನ್ನು ಚಿತ್ರತಂಡ ಎದುರಿಸುತ್ತಿದೆ. ಹೀಗಾಗಿ ನಾಯಕ ಪೃಥ್ವಿ ಸಿನಿರಸಿಕರಿಗೆ ಜೂನಿ ಚಿತ್ರ ನೋಡುವಂತೆ ಪ್ರೀತಿಯಿಂದ ಮನವಿ ಮಾಡಿಕೊಂಡಿದ್ದಾರೆ. ಜೂನಿ ಚಿತ್ರದಲ್ಲಿ ವಿಶೇಷ ಲವ್ ಸ್ಟೋರಿ ಇದೆ. ಇದನ್ನ ಅಷ್ಟೇ ಸುಂದರವಾಗಿಯೇ ಪರಸೆಂಟ್ ಮಾಡಿದ್ದಾರೆ ನವ ನಿರ್ದೇಶಕ ವೈಭವ್ ಮಹಾದೇವ್. ಜೂನಿ ಅನ್ನೋದು ಚಿತ್ರದ ನಾಯಕಿಯ ಹೆಸರಾಗಿದೆ. ಅದನ್ನೆ ಇಲ್ಲಿ ಟೈಟಲ್ ಮಾಡಲಾಗಿದೆ.
ದಿಯಾ ಚಿತ್ರದಲ್ಲೂ ನಾಯಕಿಯ ಹೆಸರು ದಿಯಾ ಅಂತಲೇ ಇತ್ತು. ಹಾಗಾಗಿಯೇ ಇದು ಕೂಡ ನಾಯಕಿ ಸುತ್ತವೇ ಇರೋ ಕಥೆ. ನಕುಲ್ ಅಭಯಂಕರ್ ಬೊಂಬಾಟ್ ಸಂಗೀತ . ಅಜಿನ್ ಬಿ, ಜಿತಿನ್ ದಾಸ್ ಮೋಡಿ ಮಾಡುವ ಕ್ಯಾಮರಾ ವರ್ಕ್ ಮಾಡಿದ್ದಾರೆ. ಇಷ್ಟೆಲ್ಲಾ ಎಲಿಮೆಂಟ್ ಇದ್ದರು ಜೂನಿಯತ್ತ ಚಿತ್ರಪ್ರೇಮಿಗಳು ಹೆಜ್ಜೆ ಇಡುತ್ತಿಲ್ಲ. ಒಳ್ಳೆ ಸಿನಿಮಾವನ್ನು ಪ್ರೇಕ್ಷಕಪ್ರಭು ಯಾವತ್ತು ಕೈಬಿಟ್ಟಿಲ್ಲ ಎಂಬ ನಿರೀಕ್ಷೆಯಲ್ಲಿ ಜೂನಿ ಸಿನಿಬಳಗ ಕಾಯುತ್ತಿದೆ ಎನ್ನಲಾಗಿದೆ.
RRR ಯಶಸ್ಸಿನ ಬಳಿಕ ರಾಮ್ ಚರಣ್ ಮಾತಿನ ಧಾಟಿಯೇ ಬದಲಾಯ್ತು; ಇದೇನಿದು ಜಾದೂ ಗುರೂ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.