
'ಜನರ ಮನಸ್ಥಿತಿಯೇ ಹಾಗೆ. ನೀವೇ ಒಮ್ಮೆ ನೋಡಿಬಿಡಿ. ಯಾರಾದರೂ ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ವಿಡಿಯೋ ಹಾಕಿದರೆ, ಮೊದಲಿಗೆ ನಾಲ್ಕೈದು ನೆಗೆಟಿವ್ ಕಮೆಂಟ್ಸ್ ಬಂದರೆ ಸಾಕು, ಆ ವಿಡಿಯೋದ ಬಗ್ಗೆ ಪಾಸಿಟಿವ್ ಕಮೆಂಟ್ ಹಾಕಲು ಬಂದವರು ಕೂಡ ಮನಸ್ಸನ್ನು ಬದಲಿಸಿ ನೆಗೆಟಿವ್ ಹಾಕಿ ಹೋಗ್ತಾರೆ. ಎಲ್ಲರೂ ನೆಗೆಟಿವ್ ಬರೆದಿರುವಾಗ ನಾನು ಪಾಸಿಟಿವ್ ಬರೆದರೆ, ನನ್ನನ್ನೇ ಹುಚ್ಚ ಎಂದುಕೊಳ್ತಾರೆ ಎಂದು ಏನೂ ಬರೆಯದೇ ಹೋಗ್ತಾರೆ, ಇಲ್ಲವೇ ನೆಗೆಟಿವ್ ಕಮೆಂಟೇ ಹಾಕ್ತಾರೆ. ಇದು ಇಂದಿನ ಹೆಚ್ಚಿನ ಜನರ ಮನಸ್ಥಿತಿ' ಎಂದು ವಿವರಿಸುತ್ತಲೇ ನಟ ಮಾಸ್ಟರ್ ಆನಂದ್ ನೋವಿನಿಂದ ಒಂದು ವಿಡಿಯೋ ಮಾಡಿದ್ದಾರೆ. ಅದುವೇ ಕೇರಳದಲ್ಲಿ ಈಚೆಗೆ ನಡೆದ ದೀಪಕ್ ಎನ್ನುವವರ ಆತ್ಮಹ*ತ್ಯೆಯ ಪ್ರಕರಣದ ಕುರಿತು ಅವರು ಮಾಡಿರುವ ವಿಡಿಯೋ ಇದು.
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಲು, ಲೈಕ್ಸ್ ಗಳಿಸಲು ಈಚೆಗೆ ಕೇರಳದಲ್ಲಿ, ಶಿಮ್ಜಿತಾ ಮುಸ್ತಫಾ ಎಂಬಾಕೆ ಅನ್ಯಾಯವಾಗಿ ದೀಪಕ್ ಎನ್ನುವವರ ಪ್ರಾಣವನ್ನೇ ಬಲಿ ಪಡೆದ ಘಟನೆ ಸೋಷಿಯಲ್ ಮೀಡಿಯಾದಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಿರುವುದು ಇದಾಗಲೇ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಬಸ್ನಲ್ಲಿ ಹೋಗುವಾಗ ಈ ಇನ್ಫ್ಲುಯೆನ್ಸರ್ ದೀಪಕ್ ಎನ್ನುವವರು ತನ್ನ ಖಾಸಗಿ ಅಂಗ ಟಚ್ ಮಾಡಿದಂತೆ ವಿಡಿಯೋ ಮಾಡಿ 2 ಲಕ್ಷ ವ್ಯೂವ್ಸ್ ಪಡೆದುಕೊಂಡಿದ್ದಾಳೆ. ಇವಳು ವಿಡಿಯೋ ಹಾಕಿದಾಗ ಅದನ್ನು ಬೆಂಬಲಿಸಿ ದೀಪಕ್ ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿರುವ ಕಾರಣ, ಮನನೊಂದ ದೀಪಕ್ ಅವರು ಸಾವಿನ ಹಾದಿ ತುಳಿದಿದ್ದಾರೆ.
ಅವರು ಸತ್ತ ಮೇಲೆ ಈ ಪ್ರಕರಣದ ವಿಮರ್ಶೆ ನಡೆದು, ಈ ಶಿಮ್ಜಿತಾ ಮುಸ್ತಫಾದ್ದೇ ತಪ್ಪು ಎನ್ನುವುದು ತಿಳಿದಿದೆ. ಈ ವಿಷಯವಾಗಿಯೇ ಮಾತನಾಡಿದ ಮಾಸ್ಟರ್ ಆನಂದ್, ಒಬ್ಬರು ತಪ್ಪು ಎಂದು ಸಾಬೀತು ಮಾಡಲು ಸಾಯಲೇಬೇಕಾ ಎಂದು ಪ್ರಶ್ನಿಸಿದ್ದಾರೆ. ಸತ್ತ ಮೇಲೆ ಅನಾಲಿಸಿಸ್ ಮಾಡಿ, ದೀಪಕ್ ಅವರದ್ದು ತಪ್ಪಿಲ್ಲ ಎನ್ನುವುದು ತಿಳಿದಿದೆ. ಆಕೆ ವಿಕೃತವಾಗಿ ನಗುವುದು ತಿಳಿದಿದೆ. ಆದರೆ ಅವಳು ಮೊದಲೇ ಈ ವಿಡಿಯೋ ಪೋಸ್ಟ್ ಮಾಡಿದಾಗ, ಇದರ ಬಗ್ಗೆ ಅಲ್ಲಿಯವರು, ಆಕೆಯ ಫಾಲೋವರ್ಸ್ ಯಾರೂ ಯಾಕೆ ದನಿ ಎತ್ತಲಿಲ್ಲ ಎನ್ನುವುದು ಆನಂದ್ ಅವರ ಪ್ರಶ್ನೆ. ಅವಳು ವಿಡಿಯೋ ಹಾಕಿದಾಗ, ದೀಪಕ್ ಅವರದ್ದೇ ತಪ್ಪು ಎನ್ನುವಂತೆ ಬಿಂಬಿಸಲಾಯಿತು. ಆಗಲೇ ಪರಾಮರ್ಶೆ ಮಾಡಿದ್ದರೆ, ಅಮಾಯಕನ ಜೀವ ಕಾಪಾಡಬಹುದಿತ್ತು. ಆದರೆ ಒಬ್ಬ ನಿರಪರಾಧಿ ಎಂದು ಪ್ರೂವ್ ಮಾಡಲು ಆತ ಸಾವಿನ ಹಾದಿ ತುಳಿಯಬೇಕಾಯಿತು. ಇದು ಎಷ್ಟು ಘೋರ ಅಲ್ಲವೆ ಎಂದು ಆನಂದ್ ಪ್ರಶ್ನಿಸಿದ್ದಾರೆ.
ಇದು ಕೇರಳದ ಘಟನೆ ಎಂದು ಸುಮ್ಮನೇ ಕುಳಿತುಕೊಳ್ಳುವಂತಿಲ್ಲ. ಇಂಥ ಘಟನೆ ಎಲ್ಲಿ ಬೇಕಾದರೂ ಆಗಬಹುದು. ಆದ್ದರಿಂದ ದಯವಿಟ್ಟು ಇಂಥ ವಿಡಿಯೋ ನೋಡಿದಾಗ ಏಕಾಏಕಿ ಜಡ್ಜ್ ಮಾಡಬೇಡಿ. ಇಂಥವರೇ ತಪ್ಪು ಎಂದು ತೀರ್ಮಾನ ತೆಗೆದುಕೊಳ್ಳಬೇಡಿ, ಈ ಮೂಲಕ ಅಮಾಯಕರ ಜೀವ ತೆಗೆದುಕೊಳ್ಳಬೇಡಿ. ಒಂದು ವಿಡಿಯೋ ವೈರಲ್ ಆದರೆ, ಅದರ ಸತ್ಯಾಸತ್ಯತೆ ಎಂದು ಎಂದು ಪರಾಮರ್ಶಿಸಿ ಎಂದು ಮಾಸ್ಟರ್ ಆನಂದ್ ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.