
ದಶಕಗಳಿಂದ ಸಿನಿ ಪ್ರೇಮಿಗಳನ್ನು ಮನೋರಂಜಿಸುತ್ತಿರುವ ಚಿತ್ರಮಂದಿರಗಳು ಒಂದೊಂದಾಗಿ ನೆಲಸಮ ಮಾಡಲಾಗುತ್ತಿದೆ. ಮಾಲ್, ಮಲ್ಟಿಪ್ಲೆಕ್ಸ್ ಮತ್ತು ಓಟಿಟಿ ಫ್ಲಾಟ್‌ಫಾರ್ಮ್ ಬಂದ ನಂತರ ಚಿತ್ರಮಂದಿರಕ್ಕೆ ಹೋಗುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆದರಲ್ಲೂ ನಮ್ಮ ಕರ್ನಾಟಕದಲ್ಲಿ ಪ್ರತಿ ಕನ್ನಡ ಚಿತ್ರ ಫರ್ಸ್ಟ್ ಡೇ ಫರ್ಸ್ಟ್ ಶೋವನ್ನು ಚಿತ್ರಮಂದಿಗಳಲೇ ಸೆಲೆಬ್ರೇಟ್ ಮಾಡಲಾಗುತ್ತಿತ್ತು. ಆದರೆ, ಕೋವಿಡ್ ಸಂಕಷ್ಟದಿಂದ ಚಿತ್ರಮಂದಿರಗಳಿನ್ನೂ ಓಪನ್ ಆಗಿಲ್ಲ. ಮಲ್ಟಿಪ್ಲೆಕ್ಸ್ ಆದಿಯಾಗಿ ಪ್ರತೀ ಮಂದಿರಗಳೂ ಮತ್ತಷ್ಟು ಕಷ್ಟ ಎದುರಿಸಬೇಕಾಗಿದೆ.
ಕಪಾಲಿ ಥಿಯೇಟರ್ ಪಕ್ಕದ 2 ಕಟ್ಟಡ ಕುಸಿತ
ಧರೆಗುರುಳುತ್ತಿರುವ ಸೆಂಟ್ರಲ್ ಟಾಕೀಸ್ ಇರುವುದು ಮಂಗಳೂರಿನಲ್ಲಿ. ಈ ಸ್ಥಳದಲ್ಲಿ ಮಾಲ್ ನಿರ್ಮಾಣವಾಗಲಿದೆ ಎಂದು ಮಾತುಗಳು ಕೇಳಿ ಬರುತ್ತಿದೆ. ರಾಜ್ಯದಲ್ಲಿರುವ ಅತಿ ಹಳೆಯ ಚಿತ್ರಮಂದಿರಗಳಲ್ಲಿ ಇದೂ ಒಂದು.
ಸೆಂಟ್ರಲ್ ಟಾಕೀಸ್ ಮಾಲೀಕ ಸುಧೀರ್ ಕಾಮತ್ ಹೇಳುವ ಪ್ರಕಾರ ಅವರ ತಂದೆ ಜನಾರ್ಧನ್ ಕಾಮತ್ ಈ ಚಿತ್ರಮಂದಿರವನ್ನು 1941ರಲ್ಲಿ ಸ್ಥಾಪಿಸಿದ್ದರು. ಮೊದಲಿಗೆ ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದು, ಆನಂತರ ರಾಜ್‌ಕುಮಾರ್, ಸುದೀಪ್, ವಿಷ್ಣುವರ್ಧನ್ ಮತ್ತು ದರ್ಶನ್ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದವು. ಅಂದಿನ ಕಾಲದಲ್ಲಿ ಈ ಸ್ಥಳಕ್ಕೆ 70 ಪೈಸೆ ಬೆಲೆ ಇದ್ದು, ಇಂದು ಕೋಟಿಗೆ ಮಾರಾಟವಾಗಿದೆಯಂತೆ.
ಬಾಗಿಲು ಮುಚ್ಚಲಿರುವ ಮತ್ತೊಂದು ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರ
ಕೆಲವು ವರ್ಷಗ ಹಿಂದೆ ತುಳು ಸಿನಿಮಾಗಳನ್ನು ಹಾಕಲಾಗುತ್ತಿತು. ಸೆಂಟ್ರಲ್ ಟಾಕೀಸ್ ಜೊತೆ ತುಂಬಾ ಕನೆಕ್ಟ್ ಆಗುತ್ತಿದ್ದ ಜನರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳು ಶೇರ್ ಆಗುತ್ತಿವೆ. ಈ ಫೋಟೋಗೆ ಮಿಸ್ ಯು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.