ಬಾರದ ಲೋಕಕ್ಕೆ ತೆರಳಿದ ಗೆಳೆಯ, ಮೇಕಪ್‌ ಮ್ಯಾನ್‌ಗಾಗಿ ಕಣ್ಣೀರಿಟ್ಟ ರಮೇಶ್ ಅರವಿಂದ್..!

Suvarna News   | Asianet News
Published : Aug 25, 2020, 10:36 AM IST
ಬಾರದ ಲೋಕಕ್ಕೆ ತೆರಳಿದ ಗೆಳೆಯ, ಮೇಕಪ್‌ ಮ್ಯಾನ್‌ಗಾಗಿ ಕಣ್ಣೀರಿಟ್ಟ ರಮೇಶ್ ಅರವಿಂದ್..!

ಸಾರಾಂಶ

20 ವರ್ಷಗಳಿಂದ ನಟ ರಮೇಶ್ ಅರವಿಂದ್‌ಗೆ ಮೇಕಪ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದ ಸೂರಿಬಾಬು ಕೊನೆಯುಸಿರೆಳೆದಿದ್ದಾರೆ. ಗೆಳೆಯನ ಬಗ್ಗೆ ರಮೇಶ್‌ ಹೇಳಿದ ಭಾವುಕ ಸಾಲುಗಳಿವು....  

ಕನ್ನಡ ಚಿತ್ರರಂಗದ ಅದ್ಭುತ ನಟರು, ಸಿನಿಮಾ ಕಾರ್ಮಿಕರು, ಬೆಸ್ಟ್‌ ಫ್ರೆಂಡ್‌ ಹಾಗೂ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ  ನೋಡುವ ಮನೋಭಾವವುಳ್ಳ ಏಕೈಕ ನಟ ರಮೇಶ್ ಅರವಿಂದ್. ತಮ್ಮೊಟ್ಟಿಗೆ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮೇಕಪ್‌ ಮ್ಯಾನ್‌ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ರಾಯಭಾರಿ ಆದ ಬಳಿಕ ರಮೇಶ್‌ ಮೊದಲ ವಿಡಿಯೋ..! ಇಲ್ಲಿದೆ ನೋಡಿ

ಸೂರಿಬಾಬು ಅವರು ಆಗಸ್ಟ್‌ 23ರಂದು ಹೈದರಾಬಾದ್‌ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ.  ಮೇಕಪ್‌ಮ್ಯಾನ್‌ ಅವರನ್ನೂ ಗೆಳೆಯನಂತೆ ನೋಡಿಕೊಳ್ಳುತ್ತಿದ್ದ ರಮೇಶ್ ಬರೆದ ಭಾವುಕ ಸಾಲುಗಳಿವು. 'ಸೂರಿಬಾಬು 20 ವರ್ಷಗಳಿಂದ ನನ್ನ ಮೇಕಪ್‌ ಮ್ಯಾನ್‌. ಅತ್ಯುತ್ತಮ ಕೆಲಸಗಾರ, ಶ್ರಮ ಜೀವಿ, ನಿಷ್ಠಾವಂತ. ನಾನು ನಟಿಸಿದ ಪ್ರತಿ ಶಾಟ್‌ ಹಿಂದೆ ಅವರ ಟಚ್ ಅಪ್ ಇರುತ್ತಿತ್ತು. ನಿನ್ನೆ ಹೈದರಾಬಾದ್‌ನಲ್ಲಿ ನಮ್ಮನ್ನು ಬಿಟ್ಟು ಅಗಲಿದ್ದಾರ. ಅವರ ಆತ್ಮಕ್ಕೆ ಶಾಂತಿ ಸಿಗಲಿ,' ಎಂದು ಬರೆದಿದ್ದಾರೆ.

 

ರಮೇಶ್‌ ತೆರೆಮೇಲೆ ಫ್ಲಾ ಲೆಸ್ ಆಗಿ ಮಿಂಚಲು ಸೂರಿಬಾಬು ಅವರ ಕೈಚಳಕವೇ ಕಾರಣ. ರಮೇಶ್‌ ಸಿನಿಮಾಗಳಲ್ಲಿ ಹಾಗೂ ಕಿರುತೆರೆ ಕಾರ್ಯಕ್ರಮಗಳಿಗೆ ಸೂರಿಬಾಬು ಅವರೇ ಮೇಕಪ್ ಮಾಡುತ್ತಿದ್ದರು. ಈಗಲೂ ರಮೇಶ್ ಪ್ರಾಯದ ಹುಡುಗನಂತೆ ಮೇಕಪ್‌ ಮಾಡುತ್ತಿದ್ದ ಸೂರಿಬಾಬು ಅವರಿಗೆ ಚಿತ್ರರಂಗದಿಂದ ಹಾಗೂ ಅಭಿಮಾನಿಗಳಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಕುಟುಂಬಸ್ಥರನ್ನು ಹಾಗೂ ಆಪ್ತ ಗೆಳೆಯನನ್ನು ಅಗಲಿರುವ ಸೂರಿ ಬಾಬು ಅವರ ಶತ್ಮಕ್ಕೆ ಶಾಂತಿ ಸಿಗಲಿ.

ಪೌರ ಕಾರ್ಮಿಕರಿಗೆ ರಮೇಶ್ ಅರವಿಂದ 'ಹೂಮಳೆ'

ಕನ್ನಡ ಕಿರುತೆರೆಯಿಂದ ಬೆಳ್ಳಿ ತರೆಗೆ ಕಾಲಿಟ್ಟ ರಮೇಶ್ ಅವರ ಸಿನಿ ಜರ್ನಿ ಹೂವಿನ ಹಾಸಿಗೆಯಿಂದ ತುಂಬಿರಲಿಲ್ಲ. ಸಾಕಷ್ಟು ಸೋಲನ್ನು ಎದುರಿಸಿಯೇ ಗೆಲವು ಕಂಡವರು. ಅವರ ಕಾರ್ಯಕ್ರಮ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ವೀಕೆಂಡ್ ವಿಥ್ ರಮೇಶ್ ಸಹ ಸಾಕಷ್ಟು ಜನ ಮನ್ನಣೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ಅವರು ನೀಡುವ ವ್ಯಕ್ತಿತ್ವ ವಿಕಸನ ಭಾಷಣಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅದ್ಭುತ ನಟನ ಸಿಂಪಲ್ ಜೀವನವೇ ಸಾಕಷ್ಟು ಅಭಿಮಾನಿಗಳನ್ನು ಹುಟ್ಟು ಹಾಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?