ಯಶ್ ಅಲ್ಲ ತೆಲುಗು ಸ್ಟಾರ್ ನಟನಿಗೆ 'ಮಫ್ತಿ' ಖ್ಯಾತಿಯ ನರ್ತನ್ ಆಕ್ಷನ್ ಕಟ್

Published : Oct 25, 2022, 03:02 PM IST
ಯಶ್ ಅಲ್ಲ ತೆಲುಗು ಸ್ಟಾರ್ ನಟನಿಗೆ 'ಮಫ್ತಿ' ಖ್ಯಾತಿಯ ನರ್ತನ್ ಆಕ್ಷನ್ ಕಟ್

ಸಾರಾಂಶ

ಮಫ್ತಿ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಮುಂದಿನ ಸಿನಿಮಾ ತೆಲುಗಿನ ಖ್ಯಾತ ನಟನ ಜೊತೆ ಮಾಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಮಫ್ತಿ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಕೆಜಿಎಫ್ -2 ಬಳಿಕ ರಾಕಿಂಗ್ ಸ್ಟಾರ್ ಯಶ್ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಯಶ್‌ಗಾಗಿ ನರ್ತನ್ ಸುಮಾರು ಒಂದು ವರ್ಷಕ್ಕೂ ಅಧಿಕ ಸಮಯ ಕಥೆ ಸಿದ್ಧಪಡಿಸಿದ್ದರು. ಆದರೆ ನರ್ತನ್ ಅವರ ಕಥೆ ಯಶ್‌ರನ್ನು ಇಂಪ್ರೆಸ್ ಮಾಡಲು ವಿಫಲವಾಗಿದೆ ಎನ್ನುವ ಮಾತು ಕಳೆದ ಕೆಲವು ತಿಂಗಳ ಹಿಂದೆ ಕೇಳಿಬಂದಿತ್ತು. ಹಾಗಾಗಿ ಯಶ್ ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಚರ್ಚೆ ನಡೆಯುತ್ತಿದೆ. ಈ ನಡುವೆ ನಿರ್ದೇಶಕ ನರ್ತನ್ ಬಗ್ಗೆ ಮತ್ತೊಂದು ಸುದ್ದಿ ಕೇಳಿಬಂದಿದೆ.

ನಿರ್ದೇಶಕ ನರ್ತನ್ ಇದೀಗ ಸ್ಯಾಂಡಲ್ ವುಡ್‌ನಿಂದ ಟಾಲಿವುಡ್‌ಗೆ ಹಾರಿದ್ದು ರಾಮ್ ಚರಣ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಕಳೆದ ಕೆಲವು ತಿಂಗಳಿಂದ ನಟ ರಾಮ್ ಚರಣ್ ಮಫ್ತಿ ನಿರ್ದೇಶಕ ನರ್ತನ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಮಾತುಕತೆ ಅಂತಿಮ ಸುತ್ತಿಗೆ ಬಂದಿದ್ದು ರಾಮ್ ಚರಣ್ ಗ್ರೀನ್ ಸಿಗ್ನಲ್ ನೋಡುವುದೊಂದೆ ಬಾಕಿ ಇದೆ ಎನ್ನಲಾಗಿದೆ. ನರ್ತನ್ ಕಥೆ ಕೇಳಿ ರಾಮ್ ಚರಣ್ ಇಂಪ್ರೆಸ್ ಆಗಿದ್ದು ಕನ್ನಡ ನಿರ್ದೇಶಕ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

 

ಈ ಕಾರಣಕ್ಕೆ ಮಗು ಮಾಡಿಕೊಂಡಿಲ್ಲ ಎಂದ ರಾಮ್ ಚರಣ್ ಪತ್ನಿ ಉಪಾಸನಾ

ಅಂದಹಾಗೆ ನರ್ತನ್ ನಿರ್ದೇಶನದ ಮೊದಲ ಸಿನಿಮಾ ಮಫ್ತಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನರ್ತನ್ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಬಳಿಕ ಯಶ್ ಜೊತೆ ಸಿನಿಮಾ ಮಾಡಬೇಕಿದ್ದ ನರ್ತನ್ ಇದೀಗ ರಾಮ್ ಚರಣ್ ಜೊತೆ ಮಾಡಲು ಸಿದ್ಧರಾಗಿದ್ದಾರೆ. ಅಂದಹಾಗೆ ಕನ್ನಡ ನಿರ್ದೇಶಕರ ಜೊತೆ ನಟಿಸಲು ಬೇರೆ ಬೇರೆ ಭಾಷೆಯ ಕಲಾವಿದರು ತುದಿಗಾಲಿನಲ್ಲಿ ನಿಂತಿದ್ದಾರೆ. ಕನ್ನಡದಲ್ಲಿ ಕೆಜಿಎಫ್, 777 ಚಾರ್ಲಿ, ವಿಕ್ರಾಂತ್ ರೋಣ, ಕಾಂತಾರ ಸಿನಿಮಾಗಳು ದೊಡ್ಡ ಮಟ್ಟದ ಸದ್ದು ಮಾಡಿವೆ. ಹಾಗಾಗಿ ಬೇರೆ ಭಾಷೆಯ ಸ್ಟಾರ್ ಕಲಾವಿದರು ಕನ್ನಡಿಗರ ಜೊತೆ ಕೆಲಸ ಮಾಡುವ ಉತ್ಸಾಹ ತೋರಿಸುತ್ತಿದ್ದಾರೆ. 

ಕೋಟಿಗಟ್ಟಲೆ ಆಸ್ತಿಯ ಮಾಲೀಕ ಈ ಸೂಪರ್‌ ಸ್ಟಾರ್‌ ತಮ್ಮ ಮನೆ ತಾವೇ ಕ್ಲೀನ್‌ ಮಾಡೋದು

ಅಂದಹಾಗೆ ರಾಮ್ ಚರಣ್ ಸದ್ಯ ತಮಿಳು ನಿರ್ದೇಶಕ ಶಂಕರ್ ಜೊತೆ  ಸಿನಿಮಾ ಮಾಡುತ್ತಿದ್ದಾರೆ. ಆರ್ ಆರ್ ಆರ್ ಸೂಪರ್ ಸಕ್ಸಸ್ ಬಳಿಕ ರಾಮ್ ಚರಣ್ ಶಂಕರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಕಿಯಾರಾ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಈ ಸುದ್ದಿ ನಿಜವೇ ಆಗಿದ್ದರೆ ರಾಮ್ ಚರಣ್ ಅಭಿಮಾನಿಗಳಿದೆ ದೊಡ್ಡ ಹಬ್ಬವಾಗಲಿದೆ.    

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri
ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು: 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?