Love You Rachchu: 'ಲವ್ ಯು ರಚ್ಚು' ಟ್ರೈಲರ್ ರಿಲೀಸ್‌ಗೆ ಅಜಯ್ ಗೈರು, ಅಸಲಿ ಕತೆ ಏನು?

By Suvarna News  |  First Published Dec 17, 2021, 2:22 AM IST

* ಲವ್ ಯೂ ರಚ್ಚು ಚಿತ್ರದ ಪ್ರಚಾರದಿಂದ ಹೊರ ಉಳಿದ್ರಾ ನಟ ಅಜಯ್ ರಾವ್ ?

* ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ  ಆಗಲಿರುವ ಲವ್ ಯೂ ರಚ್ಚು

* ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಗೈರಾದ ನಾಯಕ ಅಜಯ್ ರಾವ್ 

* ಅಜಯ್ ರಾವ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ


ಬೆಂಗಳೂರು(ಡಿ. 17)  ಲವ್ ಯೂ ರಚ್ಚು (Love You Rachchu:)ಚಿತ್ರದ ಪ್ರಚಾರದಿಂದ ಹೊರ ಉಳಿದ್ರಾ ನಟ (Ajay Rao)ಅಜಯ್ ರಾವ್ ? ಎನ್ನುವ ಪ್ರಶ್ನೆ ಮೂಡಿದೆ. ಡಿ.31 ಕ್ಕೆ ಬಿಡುಗಡೆ  ಆಗಲಿರುವ ಲವ್ ಯೂ ರಚ್ಚು  ಚಿತ್ರದ ಟ್ರೈಲರ್ ( Trailer Release)ರಿಲೀಸ್ ಕಾರ್ಯಕ್ರಮಕ್ಕೆ ನಾಯಕ ಅಜಯ್ ರಾವ್  ಗೈರಾಗಿದ್ದಾರೆ.

ಲವ್ ಯೂ ರಚ್ಚು  ಆಕ್ಷನ್ ಸೀನ್ ಶೂಟಿಂಗ್ ದುರಂತದಿಂದ  ಉಂಟಾದ ಮನಸ್ತಾಪ ಮುಂದುವರೆದಿಯಾ? ಡಬ್ಬಿಂಗ್ ವಿಚಾರದಲ್ಲೂ  ನಾಯಕ ನಿರ್ಮಾಪಕ  ನಡುವೆ  ಗೊಂದಲ ಉಂಟಾಗಿತ್ತು ಎನ್ನುವ ಸುದ್ದಿಯೂ ಬಂದಿತ್ತು ಗುರುವಾರ ನಡೆದ ಟ್ರೈಲರ್‌ ಲಾಂಚ್  ಕಾರ್ಯಕ್ರಮದಲ್ಲಿ ನಾಯಕ ನಟನ ಗೈರು ಎದ್ದು ಕಾಣುತ್ತಿತ್ತು.

Tap to resize

Latest Videos

ಕಾರ್ಯಕ್ರಮದುದ್ದಕ್ಕೂ ಅಜಯ್ ರಾವ್ ಹೆಸರು ಪ್ರಸ್ತಾಪ ಆಗಲೇ ಇಲ್ಲ. ನಿರ್ಮಾಪಕ ಗುರುದೇಶ್ ಪಾಂಡೆ ಸಂಪರ್ಕಿಸಿದಾಗ ಜಾರಿಕೊಳ್ಳುವ ಉತ್ತರ ಅವರಿಂದ ಬಂತು. ಅಜಯ್ ರಾವ್ ಗೆ ಆರೋಗ್ಯ ಸರಿ ಇರಲಿಲ್ಲ ಎಂದವರು ಹೇಳಿದರು.

ಏನಾಗಿತ್ತು? ಕಳೆದ ಆಗಸ್ಟ್‌ 9ರಂದು ಬಿಡ​ದಿ ಹೋಬಳಿ ಜೋಗ​ನ​ಪಾ​ಳ್ಯ​ದಲ್ಲಿ ಲವ್‌ ಯು ರಚ್ಚು ಚಲನಚಿತ್ರದ ಚಿತ್ರೀ​ಕ​ರ​ಣದ ವೇಳೆ ವಿದ್ಯುತ್‌ ಅವಘಡ ಸಂಭ​ವಿ​ಸಿ ಸಾಹಸ ಕಲಾ​ವಿ​ದ​ ವಿವೇಕ್‌ ಮೃತ​ಪಟ್ಟು ಮತ್ತೊಬ್ಬ ಕಲಾ​ವಿದ ತೀವ್ರ​ವಾಗಿ ಗಾಯ​ಗೊಂಡಿದ್ದ. ಈ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ನಿರ್ದೇ​ಶಕ ಶಂಕರ ರಾಜ್‌, ಸಾಹಸ ನಿರ್ದೇ​ಶಕ ವಿನೋದ್‌ ಕುಮಾರ್‌, ಕ್ರೇನ್‌ ಚಾಲಕ ಮಹ​ದೇವ ವಿರುದ್ಧ ಬಿಡದಿ ಪೊಲೀ​ಸರು ಪ್ರಕ​ರಣ ದಾಖ​ಲಿ​ಸಿ​ಕೊಂಡಿದ್ದರು. ಸಿಜೆಎಂ ನ್ಯಾಯಾ​ಲಯ ಆರೋ​ಪಿ​ಗ​ಳಿಗೆ 14 ದಿನ​ಗಳ ನ್ಯಾಯಾಂಗ ಬಂಧ​ನದ ಆದೇಶ ನೀಡಿತ್ತು. ರಾಮ​ನ​ಗರ ಜಿಲ್ಲಾ ಕಾರಾ​ಗೃ​ಹ​ದಲ್ಲಿ ಆರೋ​ಪಿ​ಗ​ಳಿದ್ದು, ವಿಡಿಯೋ ಕಾನ್ಪ​ರೆನ್ಸ್‌ ಮೂಲಕ ನ್ಯಾಯಾ​ಧೀ​ಶರು ವಿಚಾ​ರಣೆ ನಡೆ​ಸಲಾಗಿತ್ತು.

Love You Rachchu: ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರದ ಅಜಯ್-ರಚ್ಚು ಚಿತ್ರದ ಟ್ರೇಲರ್ ರಿಲೀಸ್

ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ ಅಜಯ್‌ ರಾವ್‌ (Ajay Rao) ಮತ್ತು ರಚಿತಾ ರಾಮ್‌ (Rachita Ram) ಅಭಿನಯದ ಬಹು ನಿರೀಕ್ಷಿತ 'ಲವ್‌ ಯು ರಚ್ಚು' (Love You Rachchu) ಚಿತ್ರದ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ  ಬಿಡುಗಡೆಯಾಗಿದೆ. ಗುರು ದೇಶಪಾಂಡೆ (Guru Deshpande) ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶಂಕರ್ ರಾಜ್ (Shankar Raj) ಆ್ಯಕ್ಷನ್ ಕಟ್ ಹೇಳಿದ್ದಾರೆ. 'ಲವ್‌ ಯು ರಚ್ಚು' ಚಿತ್ರ ರೊಮ್ಯಾಂಟಿಕ್ ಕ್ರೈಮ್‌ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡಿದೆ.

ಬಿಡುಗಡೆಯಾದ 'ಲವ್‌ ಯು ರಚ್ಚು' ಟ್ರೇಲರ್‌ನಲ್ಲಿ ಅಜಯ್‌ ರಾವ್‌ ಹಾಗೂ ರಚಿತಾ ರಾಮ್‌ ಕಾಂಬಿನೇಷನ್ ಅದ್ಭುತವಾಗಿ ಮೂಡಿಬಂದಿದ್ದು, ಕೊಲೆಯ ಸುತ್ತ ಚಿತ್ರದ ಕಥೆ ಸಾಗುತ್ತದೆ ಎಂದು ಚಿತ್ರದ ನಿರ್ದೇಶಕರಾದ ಶಂಕರ್ ರಾಜ್ ಸುಳಿವು ಬಿಟ್ಟುಕೊಟ್ಟಿದ್ದಾರೆ. ಚಿತ್ರದಲ್ಲಿ ರಚಿತಾರಾಮ್ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರೈವರ್ ಅತ್ಯಾಚಾರ ಎಸಗಲು ಬಂದಾಗ ಅವನನ್ನು ಕೊಲೆ ಮಾಡುವ ನಾಯಕಿ. ನಾಯಕಿಯನ್ನು ಬಚಾವ್ ಮಾಡುವ ಸಲುವಾಗಿ ಏನು ಬೇಕಾದರೂ ಮಾಡಲು ಸಿದ್ದನಿರುವ ನಾಯಕನ ಸುತ್ತ ಚಿತ್ರ ಸಾಗುತ್ತದೆ. ಮುಖ್ಯವಾಗಿ ಆ ಕೊಲೆಯ ಬಗ್ಗೆ ತಿಳಿದ ವ್ಯಕ್ತಿ ಯಾರು ಎಂಬ ಪ್ರಶ್ನೆಯೇ ಚಿತ್ರದ ಸಸ್ಪೆನ್ಸ್. 

'ಲವ್‌ ಯು ರಚ್ಚು' ಚಿತ್ರದ ಟ್ರೇಲರ್‌ನ್ನು 'ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ಶುಭಕೋರಿದ್ದಾರೆ. ಈಗಾಗಲೇ  'ಲವ್‌ ಯು ರಚ್ಚು' ಚಿತ್ರದ 'ಮುದ್ದು ನೀನು' (Muddu Neenu) ವಿಡಿಯೋ ಸಾಂಗ್ ಬಿಡುಗಡೆಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸೌಂಡ್‌ ಮಾಡಿತ್ತು. ಇತ್ತೀಚೆಗೆ ಚಿತ್ರದ ಟೈಟಲ್ ಸಾಂಗ್ (Title Track) 'ಓಯ್ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ಬೋದಾ. ನಾ ಸೈಕಲ್ ಗ್ಯಾಪಲ್ಲಿ ಡೈಲಿ ಬಂದು ಲೈನ್ ಹಾಕ್ಬೋದಾ' ಎಂಬ ಸಾಲಿನ ಹಾಡು ಬಿಡುಗಡೆಯಾಗಿ ಸಂಗೀತ ಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿತ್ತು. 'ಭರ್ಜರಿ' ಚೇತನ್ ಕುಮಾರ್ (Chethan Kumar ) ಹಾಡಿಗೆ ಸಾಹಿತ್ಯ ರಚಿಸಿದ್ದು, ನವೀನ್ ಸಜ್ಜು (Naveen Sajju) ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿತ್ತು. ಕದ್ರಿ ಮಂಜುನಾಥ್ (Kadri Manikanth) ಸಂಗೀತ ಸಂಯೋಜನೆ ಈ ಹಾಡಿಗಿತ್ತು.

click me!