ಮನೆಯಲ್ಲೇ 'ಲವ್‌ ಮಾಕ್‌ಟೇಲ್‌' ವೀಕ್ಷಣೆ: ಡಾರ್ಲಿಂಗ್‌ಗೆ ಟಿಕೆಟ್ ಹಣ ಕಳುಹಿಸಿದ ಫ್ಯಾನ್..

Suvarna News   | Asianet News
Published : Mar 18, 2020, 01:04 PM IST
ಮನೆಯಲ್ಲೇ 'ಲವ್‌ ಮಾಕ್‌ಟೇಲ್‌' ವೀಕ್ಷಣೆ: ಡಾರ್ಲಿಂಗ್‌ಗೆ ಟಿಕೆಟ್ ಹಣ ಕಳುಹಿಸಿದ ಫ್ಯಾನ್..

ಸಾರಾಂಶ

ಅಮೇಜಾನ್‌ ಪ್ರೈಮ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ 'ಲವ್‌ ಮಾಕ್‌ಟೇಲ್‌'. ಚಿತ್ರ ವೀಕ್ಷಿಸಿದ ಅಭಿಮಾನಿ ನಿರ್ದೇಶಕನಿಗೆ ಮೇಲ್‌ ಮಾಡಿ ಹೇಳಿದ್ದೇನು?  

ನಟ ಕೃಷ್ಣ ಎಂದಾಕ್ಷಣ ತಲೆಗೆ ಹೊಳೆಯುವುದು 'ಡಾರ್ಲಿಂಗ್' ಅನ್ನೋ ಪದ. ಇದಕ್ಕೆ ಕಾರಣ 2013ರಲ್ಲಿ ತೆರೆಕಂಡ 'ಮದರಂಗಿ' ಚಿತ್ರ. ಚಿತ್ರದ ಮುಖ್ಯ ಹಾಡು 'ಡಾರ್ಲಿಂಗ್ ಡಾರ್ಲಿಂಗ್...' ಕೃಷ್ಣನ ಐಡೆಂಟಿಟಿ ಹೆಸರಾಗಿ ಉಳಿಯಿತು. 

ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್‌ ನಟನೆಯ ಲವ್‌ ಮಾಕ್‌ಟೇಲ್‌ ಚಿತ್ರ ಸಿನಿಮಾಗಳಿಗಿಂತಲೂ ಡಿಜಿಟಲ್‌ ಮೀಡಿಯಾದಲ್ಲಿ ಹೆಚ್ಚಿನ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಚಿತ್ರ ವೀಕ್ಷಿಸಿದ ಅಭಿಮಾನಿಯೊಬ್ಬ ಡಾರ್ಲಿಂಗ್‌ ಕೃಷ್ಣನಿಗೆ ಟಿಕೆಟ್‌ ಹಣವನ್ನು ವರ್ಗಾಯಿಸಿದ್ದಾರೆ.

ಹುಡುಗರ ಕ್ರಶ್‌ 'ನಿಧಿಮಾ'; ರಿಯಲ್‌ ಲೈಫಲ್ಲೂ ಮಿಲನಾ ಹೀಗೆನಾ?

ಹೌದು! ಚಿತ್ರ ವೀಕ್ಷಿಸಿದ ಅಭಿಮಾನಿ ನಟ ಕೃಷ್ಣನಿಗೆ ಮೇಲ್‌ ಮಾಡಿ ಚಿತ್ರದ ಬಗ್ಗೆ ಒಳ್ಳೇಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೇ ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಸಾಧ್ಯವಾಗದ ಕಾರಣ ಟಿಕೆಟ್‌ ಹಣವನ್ನೂ ಕಳುಹಿಸಲು ಅಕೌಂಟ್‌ ನಂಬರ್‌ ಕೇಳಿದ್ದರಂತೆ. ಆಗಿದ್ದಾಗಲೆಂದು ಕೃಷ್ಣ ಸುಮ್ಮನೆ ಅಕೌಂಟ್‌ ನಂಬರ್ ಕಳುಹಿಸಿದ್ದಾರೆ. ಮರು ದಿನ ನೋಡಿದರೆ ಅಕೌಂಟ್‌ಗೆ ಅಭಿಮಾನಿ 200 ರೂ. ಟ್ರಾನ್ಸ್‌ಫರ್‌ ಮಾಡಿದ್ದಾರಂತೆ. ಈ ಬಗ್ಗೆ ಕೃಷ್ಣ ವೆಬ್‌ಸೈಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ದಿಯಾ - ಲವ್ ಮಾಕ್ಟೇಲ್ ಚಿತ್ರ ಮಂದಿರದಾಚೆ ಫುಲ್ ಕ್ಲಿಕ್, ನೆಟ್ಟಿಗರು ಫುಲ್ ಖುಷ್!

ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೀಕ್ಷಿಸಿದ ಅಭಿಮಾನಿಯೊಬ್ಬ ರಿಷಬ್‌ ಶೆಟ್ಟಿಗೆ ಪತ್ರ ಬರೆದು, ಚಿತ್ರ ತುಂಬಾ ಚೆನ್ನಾಗಿದೆ. ಚಿತ್ರಮಂದಿರದಲ್ಲಿ ನೋಡದ್ದಕ್ಕೆ ಪಶ್ಚಾತ್ತಾಪವಿದೆ, ಎಂದು ಹೇಳಿ ಟಿಕೆಟ್ ಹಣವನ್ನು ಮನಿ ಆರ್ಡರ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಪೆಷಲ್ ಡೇಟ್ ಮಿಸ್ ಮಾಡ್ಕೊಂಡ ಶ್ರೀಮುರಳಿ…. ಪತ್ನಿಗಾಗಿ ನೈಲ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಶೆಫ್ ಆದ ನಟ
ಮೈಸೂರಿನಲ್ಲಿ ಕಿಚ್ಚನ ಹವಾ; 'ಮಾರ್ಕ್' ಸಕ್ಸಸ್ ಬೆನ್ನಲ್ಲೇ ಅಭಿಮಾನಿಗಳ ಜೊತೆ ಸುದೀಪ್ ಸಿನಿಮಾ ವೀಕ್ಷಣೆ!