ಮದ್ವೆ ಆದ್ಮೇಲೆ ಜಗ್ಗೇಶ್‌ಗೆ ಪತ್ನಿ ಪರಿಮಳ ಕೊಟ್ಟ ಮೊದಲ ಗಿಫ್ಟ್‌ ಇದು!

Suvarna News   | Asianet News
Published : Mar 18, 2020, 12:27 PM IST
ಮದ್ವೆ ಆದ್ಮೇಲೆ ಜಗ್ಗೇಶ್‌ಗೆ ಪತ್ನಿ ಪರಿಮಳ ಕೊಟ್ಟ ಮೊದಲ ಗಿಫ್ಟ್‌ ಇದು!

ಸಾರಾಂಶ

57ನೇ ವಸಂತಕ್ಕೆ ಕಾಲಿಟ್ಟ ನವರಸ ನಾಯಕ ಹುಟ್ಟು ಹಬ್ಬವನ್ನು ಸರಳವಾಗಿ ರಾಯರ ಸನ್ನಿಧಾನದಲ್ಲಿ ಆಚರಿಸಿಕೊಂಡಿದ್ದಾರೆ. ಇದೇ ಸಂತಸದಲ್ಲಿ ಅಭಿಮಾನಿಗಳ ಜೊತೆ ಪತ್ನಿ ಕೊಟ್ಟ ಮೊದಲ ಗಿಫ್ಟ್‌ ಏನೆಂದು ಬಹಿರಂಗಗೊಳಿಸಿದ್ದಾರೆ.

ಸ್ಯಾಂಡಲ್‌ವುಡ್‌‌ನ ಓನ್ಲಿ ಮಾಸ್ಟರ್‌ ಆ್ಯಕ್ಟರ್‌ ಜಗ್ಗೇಶ್‌ ಮಾರ್ಚ್‌ 17ರಂದು 57ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಹಾಗೂ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಈ ಸಂಭ್ರಮದಲ್ಲಿ ಮದುವೆಯಾದ ಮೊದಲ ವರ್ಷ ಪತ್ನಿ ಪರಿಮಳ ಶುಭಾಶಯ ತಿಳಿಸಿದ ರೀತಿಯನ್ನು ಅಭಿಮಾನಿಗಳೆದುರು ತೆರೆದಿಟ್ಟಿದ್ದಾರೆ. ಹೌದು! ಪರಿಮಳ ಕೈಯಾರೆ ತಯಾರಿಸಿದ ಗ್ರೀಟಿಂಗ್‌ ಕಾರ್ಡ್‌ನಲ್ಲಿ 'I Love you' ಜೊತೆಗೆ 'Jaggi never never change. I can never bear it, sweet' ಎಂದು ಬರೆದ ಕಾರ್ಡ್ ತೋರಿಸಿದ್ದಾರೆ. ಈ ಫೋಟೋವನ್ನು ಜಗ್ಗೇಶ್ ಸೋಷಿಯಲ್ ಮೀಡಿಯಾ ಪುಟಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಸ್ಯಾಂಡಲ್‌ವುಡ್‌ ಯಂಗ್ ಕಪಲ್‌ ಪರಿಮಳ-ಜಗ್ಗೇಶ್ ಇಂಟರೆಸ್ಟಿಂಗ್ ಲವ್ ಸ್ಟೋರಿ!

ಅಷ್ಟೇ ಅಲ್ಲದೇ 'ನಾನು ಮದುವೆಯಾದ ಮೊದಲ ವರ್ಷ ನನ್ನ ಆನಡಗು ಗ್ರಾಮದಲ್ಲಿ ಪರಿಮಳ ಕೈಯಾರೆ ಮಾಡಿ ಹರಸಿದ ಪ್ರಥಮ ಶುಭ ಹಾರೈಕೆಯ ಪ್ರೀತಿಯ ಓಲೆ..ಈ ಪ್ರೀತಿ ಸಂಕೇತಕ್ಕೆ 34ವರ್ಷ ವಯಸ್ಸು.. ಅಂದು ಅವಳೊಬ್ಬಳೇ ಹರಸಿದ್ದಳು. ಇಂದು ಅವಳ ಪ್ರೀತಿ ಕೋಟಿ ಆತ್ಮಗಳಲ್ಲಿ ವಿಸ್ತಾರ ಮಾಡಿಬಿಟ್ಟರು ರಾಯರು! ಧನ್ಯೋಸ್ಮಿ ರಾಯರೇ ಇಷ್ಟು ಆತ್ಮಗಳ ಪ್ರೀತಿಸಲು ದೇಣಿಗೆ ನೀಡಿದ್ದಕ್ಕೆ...' ಎಂದು ಬರೆದುಕೊಂಡಿದ್ದಾರೆ.

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಿನ್ನೆ ಹುಟ್ಟಿದಬ್ಬ ಆಚರಿಸಿಕೊಂಡ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಸರಳವಾಗಿ ಹುಟ್ಟಿದಬ್ಬವನ್ನು ಆಚರಿಸಿಕೊಂಡರು.

ಜಗ್ಗೇಶ್ ಪ್ರೀತಿ ಹೆಸರು ಮಂತ್ರಾಲಯದ ಬಂಡೆ ಮೇಲೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್